ಬಾಡಿ ಬಿಲ್ಡ್ ಮಾಡಲು ಸಸ್ಯಾಹಾರದೊಂದಿಗೆ…. ಈ ನಾನ್ ವೆಜ್ ಸೇವಿಸಿ

First Published | Dec 6, 2022, 5:07 PM IST

ಪ್ರತಿಯೊಬ್ಬರೂ ಬಾಡಿ ಬಿಲ್ಡ್ ಮಾಡಲು ಇಷ್ಟಪಡುತ್ತಾರೆ. ನೀವು ಕೂಡ ಹಾಗೆ ಮಾಡುತ್ತೀರಿ ಅಲ್ವಾ? ನೀವು ಮಸಲ್ ಬಿಲ್ಡ್ ಮಾಡಲು ಬಯಸಿದ್ರೆ, ಹೆಚ್ಚಿನ ಪ್ರೋಟೀನ್ ಆಹಾರ ಮುಖ್ಯ. ಹಣ್ಣುಗಳು ಮತ್ತು ತರಕಾರಿಗಳು ಉತ್ತಮ ಪ್ರಮಾಣದ ಪ್ರೋಟೀನ್ ಹೊಂದಿರುತ್ತವೆ. ಇದಲ್ಲದೆ ಇನ್ನು ಹಲವು ಮಾಂಸಹಾರ ಸಹ ನೀವು ಆಹಾರದಲ್ಲಿ ಸೇವಿಸಬಹುದು.
 

ಹಣ್ಣುಗಳು ಮತ್ತು ತರಕಾರಿಗಳು(Fruits and vegetables) ಆರೋಗ್ಯಕರ ಆಹಾರದ ಪ್ರಮುಖ ಭಾಗ. ಪ್ರತಿದಿನ ಹಣ್ಣುಗಳು ಮತ್ತು ತರಕಾರಿ ತಿನ್ನುವುದರಿಂದ ಅನೇಕ ದೀರ್ಘಕಾಲದ ಕಾಯಿಲೆ ಅಪಾಯ ಮತ್ತು ಮರಣದ ಅಪಾಯ ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತವೆ. ತೂಕ ನಿಯಂತ್ರಿಸುವುದರಿಂದ ಹಿಡಿದು, ರಕ್ತದೊತ್ತಡ (Blood Pressure) ಮತ್ತು ರಕ್ತದ ಸಕ್ಕರೆ ಮಟ್ಟವನ್ನು ನಿರ್ವಹಿಸುವವರೆಗೆ, ಹಣ್ಣುಗಳು ಮತ್ತು ತರಕಾರಿಗಳು ಮಾನವ ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತವೆ. ಇಲ್ಲಿ ನಿಮಗೆ ಪ್ರೋಟೀನ್ ಅತ್ಯುತ್ತಮ ಸಸ್ಯಾಹಾರಿ ಮತ್ತು ಮಾಂಸಾಹಾರಿ ಮೂಲಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಅವುಗಳನ್ನು ಸೇವಿಸುವ ಮೂಲಕ ಸಖತ್ತಾಗಿ ಬಾಡಿ ಬಿಲ್ಡ್ ಮಾಡಬಹುದು. 

ಚಿಕನ್ (Chicken)

2,000 ಕ್ಯಾಲೋರಿ ಆಹಾರದ ಪ್ರಕಾರ, ಪುರುಷರು ಮತ್ತು ಮಹಿಳೆಯರಿಗೆ ತಮ್ಮ ಊಟದಲ್ಲಿ ದಿನಕ್ಕೆ ಸುಮಾರು 56 ಮತ್ತು 46 ಗ್ರಾಂ ಪ್ರೋಟೀನ್ ಅಗತ್ಯವಿದೆ. ಬೇಯಿಸಿದ ಕೋಳಿಯ 100 ಗ್ರಾಂ ಭಾಗವು ಸುಮಾರು 25 ಗ್ರಾಂ ಪ್ರೋಟೀನ್ ಹೊಂದಿರುತ್ತದೆ. ಹಬೆಯಲ್ಲಿ ಬೇಯಿಸಿದ ಅಥವಾ ಗ್ರಿಲ್ಡ್ ಚಿಕನ್ ತುಂಡುಗಳು ಸಲಾಡ್ ಸೊಪ್ಪಿನೊಂದಿಗೆ ಉತ್ತಮವಾಗಿರುತ್ತೆ. ನೀವು ಚಿಕನ್ ಸಲಾಡ್ ಸಹ ಸೇವಿಸಬಹುದು.

Tap to resize

ಟರ್ಕಿ(Turkey)

ಟರ್ಕಿ ಮತ್ತೊಂದು ಕೋಳಿ ಮಾಂಸವಾಗಿದೆ. ಇದು ಪ್ರೋಟೀನ್ ಅಗತ್ಯಗಳನ್ನು ಪೂರೈಸಲು ಬಯಸುವ ಮಾಂಸಾಹಾರಿಗಳಿಗೆ ಆರೋಗ್ಯಕರ ಆಯ್ಕೆಗಳಲ್ಲಿ ಒಂದು. ಟರ್ಕಿ ಮಾಂಸದ 100 ಗ್ರಾಂ ಭಾಗವು 29 ಗ್ರಾಂ ಪ್ರೋಟೀನ್ ಹೊಂದಿದೆ. ಬೇಯಿಸಿದ ಟರ್ಕಿ ಮಾಂಸಗಳನ್ನು ಕೆಂಪು ಈರುಳ್ಳಿ, ಕಡಿಮೆ ಕ್ಯಾಲೋರಿ ಮಯೋನೈಸ್, ನಿಂಬೆ ರಸ ಮತ್ತು ರುಚಿಕರವಾದ ಪ್ರೋಟೀನ್ ಭರಿತ ಸಲಾಡ್ ತಯಾರಿಸಲು ಬಳಸಬಹುದು. 

ಮೊಟ್ಟೆಯ ಬಿಳಿಭಾಗ(Egg white)

ಬೇಯಿಸಿದ ಮೊಟ್ಟೆ ಬಿಳಿ ಭಾಗವು ಸಲಾಡ್‌ಗಳಿಗೆ ಉತ್ತಮ. ಮೊಟ್ಟೆಗಳು ಲೀನ್ ಪ್ರೋಟೀನ್ ನ ಅಗ್ಗದ ಮತ್ತು ಹೆಚ್ಚು ಬಳಸುವ ಆಹಾರ ಮೂಲಗಳಲ್ಲಿ ಒಂದಾಗಿದೆ. ನೀವು ಮೊಟ್ಟೆಯ ಬಿಳಿಭಾಗವನ್ನು ನಿಮ್ಮ ಇಷ್ಟದಂತೆ ಬಳಸಬಹುದು ಅಥವಾ ನಿಮ್ಮ ಸಲಾಡ್‌ಗೆ ಟಾಪಿಂಗ್ ಆಗಿ ಇಡೀ ಬೇಯಿಸಿದ ಮೊಟ್ಟೆ ಸೇವಿಸಬಹುದು. ಬೇಯಿಸಿದ ಮೊಟ್ಟೆ ಕನಿಷ್ಠ 6 ಗ್ರಾಂ ಪ್ರೋಟೀನ್ ಹೊಂದಿರುತ್ತದೆ, ಆದ್ದರಿಂದ ಸಲಾಡ್ ಗಳಲ್ಲಿ ಮೊಟ್ಟೆಗಳನ್ನು ಬಳಸಲು ಉತ್ತಮ ವಿಧಾನವೆಂದರೆ ಮೊಟ್ಟೆಯ ಬಿಳಿಭಾಗ ಬಳಸುವುದು.  

ನಟ್ಸ್ (Nuts)

ಬೀಜಗಳು ಸಲಾಡ್ ಜೊತೆ ಉತ್ತಮ ರೀತಿಯಲ್ಲಿ ಬೆರೆಯುತ್ತವೆ. ಅದು ಬಿಸಿಯಾಗಿರಲಿ ಅಥವಾ ತಣ್ಣಗಿರಲಿ. ಬಾದಾಮಿ, ವಾಲ್‌ನಟ್ಸ್, ಪೈನ್ ಬೀಜಗಳು, ಗೋಡಂಬಿ ಎಲ್ಲವೂ ಸಲಾಡ್‌ಗಳನ್ನು ಇನ್ನಷ್ಟು ಅದ್ಭುತವಾಗಿಸುತ್ತದೆ. ಇವು ಆಹಾರಕ್ಕೆ ಉತ್ತಮ ಕ್ರಂಚ್, ರುಚಿಕರವಾದ ರುಚಿ ಮತ್ತು  ಪೌಷ್ಠಿಕಾಂಶವನ್ನು ಸಹ ಸೇರಿಸುತ್ತವೆ.  

ಡೈರಿ ಉತ್ಪನ್ನಗಳು (Diary products)

ಪ್ರೋಟೀನ್ ನ ಕೆಲವು ಅತ್ಯುತ್ತಮ ಸಸ್ಯಾಹಾರಿ ಮೂಲಗಳು ಡೈರಿ ಉತ್ಪನ್ನಗಳ ರೂಪದಲ್ಲಿ ಬರುತ್ತವೆ. ಆದರೆ, ಚೀಸ್ ಸಾಕಷ್ಟು ಕೊಬ್ಬನ್ನು ಹೊಂದಿರುತ್ತದೆ ಆದ್ದರಿಂದ ಅದನ್ನು ಸಣ್ಣ ಪ್ರಮಾಣದಲ್ಲಿ ತಿನ್ನುವುದು ಒಳ್ಳೆಯದು.  ಮೊಸರು ಸಸ್ಯಾಹಾರಿ ಪ್ರೋಟೀನ್ ನ ಮತ್ತೊಂದು ಉತ್ತಮ ಮೂಲ ಮತ್ತು ಸಲಾಡ್ ಗಳಿಗೆ ಕೆನೆಭರಿತ ಪರಿಮಳವನ್ನು ನೀಡಲು ಇದನ್ನು ಬಳಸಬಹುದು.

ಕಡಲೆ ಮತ್ತು ದ್ವಿದಳ ಧಾನ್ಯಗಳು

ಕಡಲೆಕಾಳು ಮತ್ತು ದ್ವಿದಳ ಧಾನ್ಯಗಳು ನಿಮ್ಮ ಸಲಾಡ್ ಗೆ ಸೇರಿಸಬಹುದಾದ ಆಹಾರದ ಪ್ರೋಟೀನ್ ನ(Protein) ಇತರ ಎರಡು ಸಸ್ಯಾಹಾರಿ ಮೂಲ. ಆದಾಗ್ಯೂ, ಇವುಗಳ ಜೊತೆಗೆ, ನೀವು ಇತರ ಪ್ರೋಟೀನ್ ಭರಿತ ಆಹಾರಗಳನ್ನು ಸಹ ಬಳಸಬೇಕಾಗಬಹುದು.  ಕಡಲೆಕಾಳುಗಳು ಬೇಳೆಕಾಳುಗಳಿಗಿಂತ ಉತ್ತಮವಾಗಿವೆ. ಏಕೆಂದರೆ ಅವು ಪ್ರೋಟೀನ್ ನ ಉತ್ತಮ ಮೂಲ ಮತ್ತು ಸಲಾಡ್ ಗಳೊಂದಿಗೆ ಬಳಸಬಹುದು.

Latest Videos

click me!