Weight Gain: ಚಳಿಯಲ್ಲೇ ತೂಕ ಹೆಚ್ಚೋದೇಕೆ ಹೇಳಿ?

First Published | Dec 4, 2022, 3:47 PM IST

ಚಳಿಗಾಲ ಎಂದರೆ ಹೊರಗಡೆಯ ಚುಮು ಚುಮು ವಾತಾವರಣ ಹುಚ್ಚು ಹಿಡಿಸುತ್ತೆ. ಈ ಸಮಯದಲ್ಲಿ ಏನಾದರೊಂದು ತಿನ್ನಬೇಕೆಂಬ ಬಯಕೆ ಹೆಚ್ಚುತ್ತೆ. ಆದರೆ ಈ ಸೀಸನ್‌ನಲ್ಲಿ ನಾವು ತಿನ್ನುವ ಆಹಾರ ನಮ್ಮ ತೂಕ ಹೆಚ್ಚಳಕ್ಕೆ ಕಾರಣವಾಗುತ್ತೆ. ಅಷ್ಟೇ ಅಲ್ಲ ಯೋಗ, ವಾಕಿಂಗ್, ಜಿಮ್ ಅಂತ ಹೊರ ಹೋಗಲು ಸೋಮಾರಿತನ ಕಾಡೋ ಕಾರಣದಿಂದಲೂ ದೇಹದ ತೂಕ ಹೆಚ್ಚಾಗುತ್ತೆ. ಬೇರೆ ಯಾವೆಲ್ಲಾ ಕಾರಣಕ್ಕೆ ತೂಕ ಹೆಚ್ಚುತ್ತೆ ನೋಡೋಣ.

ಚಳಿಗಾಲದ (Winter) ಋತು ಮನಸ್ಸನ್ನು ಹೆಚ್ಚು ಆಕರ್ಷಿಸುತ್ತದೆ. ಈ ಋತುವಿನಲ್ಲಿ, ಆಹಾರದ ಬಯಕೆ ಗಮನಾರ್ಹವಾಗಿ ಹೆಚ್ಚತ್ತವೆ. ಪ್ರತಿಯೊಬ್ಬರಿಗೂ ವಿವಿಧ ಆಹಾರ ಪದಾರ್ಥಗಳನ್ನು ತಿನ್ನಬೇಕೆಂದು ಅನಿಸುತ್ತೆ. ಹಾಸಿಗೆ ಮೇಲೆಯೇ ಕುಳಿತು, ಬಿಸಿ ಚಹಾ ಮತ್ತು ಕಾಫಿ ಕುಡಿಯುವ ಮಜಾನೇ ಬೇರೆ. ಆದರೆ ಹೆಚ್ಚಿನ ಜನರು ಈ ಋತುವನ್ನು ಇಷ್ಟಪಡೋದಿಲ್ಲ. ಯಾಕಂದ್ರೆ ತೂಕವೂ ಹೆಚ್ಚಾಗಲು ಪ್ರಾರಂಭಿಸುತ್ತೆ.

ನಿಮಗೂ ತೂಕ (Weight) ಹೆಚ್ಚಾಗೋ ಸಮಸ್ಯೆ ಇರಬಹುದು ಮತ್ತು ಶೀತ ಹವಾಮಾನದಲ್ಲಿ ತೂಕ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಆದರೆ ಇದು ಯಾಕೆ ಸಂಭವಿಸುತ್ತೆ ಎಂದು ನಿಮಗೆ ತಿಳಿದಿದ್ಯಾ? ಚಳಿಗಾಲದಲ್ಲಿ ತೂಕ ಯಾಕೆ ಹೆಚ್ಚಾಗುತ್ತೆ ಎಂದು ತಿಳಿಯಲು ಮುಂದೆ ಓದಿ.

Latest Videos


ಸೀಸನ್ ಆಫ್ಫೆಕ್ಟಿವ್ ಡಿಸಾರ್ಡರಿಂದಾಗಿ (Season affective disorder) ತೂಕ ಹೆಚ್ಚುತ್ತೆ

ಚಳಿಗಾಲದಲ್ಲಿ ತೂಕ ಹೆಚ್ಚಳಕ್ಕೆ ಸೀಸನ್ ಆಫೆಕ್ಟಿವ್ ಡಿಸಾರ್ಡರ್ ಪ್ರಮುಖ ಕಾರಣಗಳಲ್ಲಿ ಒಂದು. ಈ ಋತುವಿನಲ್ಲಿ ವ್ಯಕ್ತಿ ಹೆಚ್ಚು ಆಲಸ್ಯ ಅನುಭವಿಸುತ್ತಾನೆ. ಇದು ಮನಸ್ಥಿತಿ ಮೇಲೆ ಪರಿಣಾಮ ಬೀರುತ್ತೆ. ಶಕ್ತಿಯ ಮಟ್ಟ ಕಡಿಮೆ ಮಾಡುತ್ತೆ. 

ದೇಹ ಸಾಕಷ್ಟು ಸೂರ್ಯನ ಬೆಳಕನ್ನು (Sunlight) ಪಡೆಯದಿದ್ದಾಗ, ಅದು ಮನಸ್ಥಿತಿ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ಈ ಕಾರಣದಿಂದ ಸರಿಯಾಗಿ ಚಟುವಟಿಕೆಯಿಂದ ಇರದಿದ್ರೆ, ಅದು ಕ್ರಮೇಣ ತೂಕ ಹೆಚ್ಚಳಕ್ಕೆ ಕಾರಣವಾಗುತ್ತೆ.

ಅಗತ್ಯಕ್ಕಿಂತ ಹೆಚ್ಚು ಕ್ಯಾಲೋರಿಗಳನ್ನು(Calorie) ಸೇವಿಸೋದು

ಚಳಿಗಾಲದಲ್ಲಿ ತೂಕ ಹೆಚ್ಚಲು ಇದೂ ಒಂದು ಮುಖ್ಯ ಕಾರಣಗಳಲ್ಲಿ ಒಂದು.  ಈ ಋತುವಿನಲ್ಲಿ ಆಹಾರದ ಬಯಕೆ ತುಂಬಾ ಹೆಚ್ಚಾದುತ್ತವೆ. ಸಿಹಿ ಮತ್ತು ಕರಿದ ಆಹಾರ ಹೆಚ್ಚು ತಿನ್ನಲು ಬಲವಾದ ಬಯಕೆಯಾಗುತ್ತೆ. ಈ ಕಾರಣದಿಂದಾಗಿ ಅಗತ್ಯಕ್ಕಿಂತ ಹೆಚ್ಚು ಕ್ಯಾಲೋರಿಗಳನ್ನು ತೆಗೆದುಕೊಂಡಾಗ ಮತ್ತು ಸಾಕಷ್ಟು ವ್ಯಾಯಾಮ ಮಾಡದಿದ್ದಾಗ, ಹೆಚ್ಚಿನ ಕ್ಯಾಲೊರಿ ತೆಗೆದುಕೊಳ್ಳೋದರಿಂದ ತೂಕ ಹೆಚ್ಚಾಗುತ್ತೆ.

ಅಗತ್ಯಕ್ಕಿಂತ ಹೆಚ್ಚು ನಿದ್ರೆ (Sleep)

ಅಗತ್ಯಕ್ಕಿಂತ ಹೆಚ್ಚು ನಿದ್ರೆ ಮಾಡೋದು ತೂಕ ಹೆಚ್ಚಳದ ಸಮಸ್ಯೆಯನ್ನು ಹೆಚ್ಚಿಸುತ್ತೆ. ಈ ಋತುವಿನಲ್ಲಿ ಹಾಸಿಗೆಯಿಂದ ಮೇಲೇಳಲು ಯಾರಿಗೂ ಮನಸ್ಸಾಗೋದಿಲ್ಲ ಹಾಗಾಗಿ ಅಗತ್ಯಕ್ಕಿಂತ ಹೆಚ್ಚು ನಿದ್ರೆ ಮಾಡುತ್ತೇವೆ. ಆದರೆ ಹೆಚ್ಚು ನಿದ್ರೆ ಮಾಡೋದು ಆರೋಗ್ಯದ ಮೇಲೂ ಪರಿಣಾಮ ಬೀರುತ್ತೆ. ಇದು ದೇಹದ ಚಕ್ರದ ಮೇಲೆ ಪರಿಣಾಮ ಬೀರುತ್ತೆ ಮತ್ತು ನಿಮ್ಮನ್ನು ಆಲಸಿಗಳಾಗಿಸಬಹುದು. ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತೆ.

ಚಹಾ ಮತ್ತು ಕಾಫಿಯ(coffee) ಅತಿಯಾದ ಸೇವನೆ

ಚಳಿಗಾಲದಲ್ಲಿ ಚಹಾ ಅಥವಾ ಕಾಫಿಯ ಅತಿಯಾದ ಸೇವನೆಯೂ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಈ ಋತುವಿನಲ್ಲಿ, ಮತ್ತೆ ಮತ್ತೆ ಬಿಸಿಯಾಗಿ ಏನನ್ನಾದರೂ ಕುಡಿಯುವ ಬಯಕೆಯಾಗುತ್ತೆ. ಅದಕ್ಕಾಗಿಯೇ ಹೆಚ್ಚು ಚಹಾ ಅಥವಾ ಕಾಫಿ ಕುಡಿಯುತ್ತೇವೆ. 

ಚಹಾ (Tea) ಅಥವಾ ಕಾಫಿ ಸೇವಿಸೋದರಿಂದ ದೇಹದಲ್ಲಿ ನೀರಿನ ಕೊರತೆಯಾಗುತ್ತೆ. ಡಿ ಹೈಡ್ರೇಷನಿಂದಾಗಿ, ತೂಕ ಕಳೆದು ಕೊಳ್ಳೋದು ತುಂಬಾ ಕಷ್ಟವಾಗುತ್ತೆ. ಇದಲ್ಲದೆ, ಚಹಾ ಮತ್ತು ಕಾಫಿಗೆ ಸಕ್ಕರೆ ಇತ್ಯಾದಿ ಸೇರಿಸೋದು ಕ್ಯಾಲೋರಿ ಸೇವನೆ ಹೆಚ್ಚಿಸುತ್ತೆ ಮತ್ತು ತೂಕ ಹೆಚ್ಚಳದ ಸಮಸ್ಯೆ ಉಂಟಾಗುತ್ತೆ.

ಅತಿಯಾದ ಆಲ್ಕೋಹಾಲ್(alcohol) ಸೇವನೆ

ಚಳಿಗಾಲದಲ್ಲಿ, ಜನರು ತಮ್ಮ ದೇಹದ ತಾಪಮಾನ ಕಾಪಾಡಿಕೊಳ್ಳಲು ಹೆಚ್ಚಾಗಿ ಆಲ್ಕೋಹಾಲ್ ಸೇವಿಸುತ್ತಾರೆ. ಆದರೆ ಹೆಚ್ಚು ಆಲ್ಕೋಹಾಲ್ (Alchohol) ಸೇವಿಸೋದು ಆರೋಗ್ಯಕ್ಕೆ ಒಳ್ಳೆಯದಲ್ಲ, ಜೊತೆಗೆ ತೂಕ ಹೆಚ್ಚುತ್ತೆ. ಆದ್ದರಿಂದ, ಸಾಧ್ಯವಾದರೆ ಆಲ್ಕೋಹಾಲ್ ಸೇವಿಸೋದನ್ನು ತಪ್ಪಿಸಬೇಕು. ಇದು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

click me!