ಮಳೆಗಾಲದಲ್ಲಿ, ಜನರು ಫಂಗಸ್ ಸೋಂಕಿನಿಂದ (fungus infection) ಹೆಚ್ಚು ತೊಂದರೆಗೀಡಾಗುತ್ತಾರೆ. ತೇವಾಂಶವಿರುವಲ್ಲಿ, ಫಂಗಸ್ ವೇಗವಾಗಿ ಬೆಳೆಯುತ್ತದೆ. ನೀವು ಕೂಡ ಶಿಲೀಂಧ್ರದಿಂದ ತೊಂದರೆಗೀಡಾಗಿದ್ದರೆ, ಈ ಮನೆಮದ್ದುಗಳನ್ನು ನೀವು ಟ್ರೈ ಮಾಡಿ ನೋಡಿ, ಫಂಗಸ್ ನಿವಾರಣೆಯಾಗೋದು ಖಚಿತ.
ಮಳೆಗಾಲ (Monsoon) ಎಂದರೆ ತೇವಾಂಶ ಮತ್ತು ಫಂಗಸ್ ಹೆಚ್ಚಾಗುವ ಕಾಲ. ನೀವು ದಿನವಿಡೀ ಎಲ್ಲೆಡೆ ತೇವಾಂಶವನ್ನು ಮಾತ್ರ ನೋಡುತ್ತೀರಿ. ಬಟ್ಟೆಗಳಲ್ಲಿ ಒಂಥರ ಸ್ಮೆಲ್ ಬರುತ್ತೆ. ಎಲ್ಲಿ ನೀರಿದೆಯೋ ಅಥವಾ ಹೆಚ್ಚು ತೇವಾಂಶವಿದ್ದರೆ, ಫಂಗಸ್ ಬರಲು ಪ್ರಾರಂಭಿಸುತ್ತದೆ.
28
ಮಳೆಯಿಂದಾಗಿ ಮತ್ತು ಸೂರ್ಯನ ಬೆಳಕು (sunlight) ಸರಿಯಾಗಿ ಬೀಳದ ಕಾರಣ ಅನೇಕ ಬಾರಿ ಬಟ್ಟೆಗಳು ಸರಿಯಾಗಿ ಒಣಗೋದಿಲ್ಲ ಮತ್ತು ಜನರು ಅವುಗಳನ್ನು ಹಾಗೆಯೇ ಅಲ್ಮೆರಾದಲ್ಲಿ ಇಡುತ್ತಾರೆ. ಇದು ಬಟ್ಟೆಗಳ ಮೇಲೆ ಫಂಗಸ್ ಕಾಣಿಸಿಕೊಳ್ಳಲು ಕಾರಣವಾಗುತ್ತದೆ. ನಿಮ್ಮ ಮನೆಯಲ್ಲಿ ಸೂರ್ಯನ ಬೆಳಕು ಕಡಿಮೆ ಇದ್ದರೆ, ಫಂಗಸ್ ಮತ್ತು ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ. ಇದರಿಂದ ಹಲವು ರೀತಿಯ ಸ್ಕಿನ್ ಇನ್ ಫೆಕ್ಷನ್ ಕಾಣಿಸಿಕೊಳ್ಳುತ್ತೆ.
38
ಯಾವುದಾದರೂ ಒಂದು ಫಂಗಸ್ (fungus) ಇದ್ದರೆ, ಅದು ಬೇಗನೆ ಮನೆಯಲ್ಲಿರುವ ಪೀಠೋಪಕರಣಗಳು, ಬಟ್ಟೆಗಳು ಮತ್ತು ಇತರ ವಸ್ತುಗಳನ್ನು ಹಾಳುಮಾಡಲು ಪ್ರಾರಂಭಿಸುತ್ತದೆ. ಹಾಗಿದ್ರೆ ಫಂಗಸ್ ನಿಂದ ವಸ್ತುಗಳನ್ನು ರಕ್ಷಿಸೋದು ಹೇಗೆ ನೋಡೋಣ…
48
ವಿನೆಗರ್ ಬಳಸಿ
ಮನೆಯಲ್ಲಿ ಶಿಲೀಂಧ್ರ ಇದ್ದರೆ, ಆ ಸ್ಥಳದಲ್ಲಿ ವಿನೆಗರ್ (vinegar) ಸಿಂಪಡಿಸಿ ಮತ್ತು ಅರ್ಧ ಗಂಟೆಗಳ ಕಾಲ ಬಿಡಿ. ಈಗ ಆ ಸ್ಥಳವನ್ನು ಸ್ಕ್ರಬ್ಬಿನಿಂದ ಉಜ್ಜಿ ಮತ್ತು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಬಟ್ಟೆಯಲ್ಲಿ ಶಿಲೀಂಧ್ರಗಳಿದ್ದರೆ, ಬಟ್ಟೆಯನ್ನು ತೊಳೆಯುವಾಗ ನೀರಿನಲ್ಲಿ ವಿನೆಗರ್ ಬಳಸಿ.
58
2- ಬೇಕಿಂಗ್ ಸೋಡಾ
ಫಂಗಸ್ ತೆಗೆದುಹಾಕಲು ನೀವು ಅಡುಗೆ ಸೋಡಾವನ್ನು (baking soda) ಸಹ ಬಳಸಬಹುದು. ಇದಕ್ಕಾಗಿ, 2 ಟೀಸ್ಪೂನ್ ಅಡುಗೆ ಸೋಡಾ ಮತ್ತು 2 ಕಪ್ ಬೆಚ್ಚಗಿನ ನೀರನ್ನು ಮಿಕ್ಸ್ ಮಾಡಿ ಮತ್ತು ಅದನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ಅದನ್ನು ಫಂಗಸ್ ಇರುವ ಜಾಗಕ್ಕೆ ಸ್ಪ್ರೇ ಮಾಡಿ. 1 ಗಂಟೆ ನಂತರ, ಅದನ್ನು ಉಜ್ಜಿ ತೊಳೆಯಿರಿ ಮತ್ತು ಒಣಗಿದ ಬಟ್ಟೆಯಿಂದ ಸ್ವಚ್ಛಗೊಳಿಸಿ.
68
3- ಕರ್ಪೂರದ ಬಳಕೆ
ಸೂರ್ಯನ ಬೆಳಕು (Sun Rays) ಮತ್ತು ಬೆಳಕು ಕಡಿಮೆ ಇರುವ ಸ್ಥಳಗಳಲ್ಲಿ ಫಂಗಸ್ ಹೆಚ್ಚು ಸಾಮಾನ್ಯವಾಗಿದೆ. ಇದಕ್ಕಾಗಿ, ನೀವು ಕರ್ಪೂರ ಬಳಸಬೇಕು. ಕರ್ಪೂರ ಮತ್ತು ಲವಂಗಗಳನ್ನು (Cloves) ಬಟ್ಟೆಯಲ್ಲಿ ಕಟ್ಟಿ ಅಲ್ಮೆರಾಗಳು, ಶೂ ರ್ಯಾಕ್ ಗಳು ಅಥವಾ ಪುಸ್ತಕದ ಕಪಾಟುಗಳಲ್ಲಿ ಇರಿಸಿ. ಇದರಿಂದ ಫಂಗಸ್ ಉಂಟಾಗೋದಿಲ್ಲ.
78
4- ನಿಂಬೆಹಣ್ಣನ್ನು ಬಳಸಿ
ಫಂಗಸ್ ಸಮಸ್ಯೆಯನ್ನು ನಿವಾರಿಸಲು ನಿಂಬೆಯನ್ನು (Lemon) ಬಳಸಿ. ನಿಂಬೆಯಲ್ಲಿ ಕಂಡುಬರುವ ಬ್ಲೀಚಿಂಗ್ (Bleaching) ಏಜೆಂಟ್ ಗಳು ಫಂಗಸ್ ತೆಗೆದುಹಾಕುತ್ತವೆ. ಫಂಗಸ್ ಇರುವ ಸ್ಥಳದಲ್ಲಿ ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ ಮತ್ತು ನಿಂಬೆ ರಸ ಅಥವಾ ನಿಂಬೆ ತುಂಡುಗಳನ್ನು ಉಜ್ಜಿ. ಇದು ಫಂಗಸ್ ಅನ್ನು ನಿವಾರಿಸುತ್ತದೆ. ನೀವು ನಿಮ್ಮ ಬಟ್ಟೆ ವಾಶ್ ಮಾಡುವಾಗ ಸಹ, ನೀರಿಗೆ ನಿಂಬೆಹಣ್ಣನ್ನು ಸೇರಿಸಿ, ತೊಳೆಯಿರಿ.
88
5- ಬೇವಿನ ಎಲೆಗಳು
ಬೇವು ಆಂಟಿ ಫಂಗಸ್ (Anti Fungus) ಅಂಶಗಳನ್ನು ಹೊಂದಿರುತ್ತದೆ, ಇದು ಫಂಗಸ್ ಅನ್ನು ತೆಗೆದುಹಾಕುತ್ತದೆ ಮತ್ತು ಬ್ಯಾಕ್ಟೀರಿಯಾವನ್ನು ಸಹ ತೆಗೆದುಹಾಕುತ್ತದೆ. ನಿಮ್ಮ ಮನೆಯಲ್ಲಿ ಫಂಗಸ್ ಇದ್ದರೆ, ಬೇವಿನ ಎಲೆಗಳ ಗೊಂಚಲುಗಳನ್ನು ಮಳೆ ಪ್ರಾರಂಭವಾಗುವ ಮೊದಲು ನೆರಳಿನಲ್ಲಿ ಒಣಗಿಸಿ. ಈ ಎಲೆಗಳನ್ನು ಹತ್ತಿ ಬಟ್ಟೆಯಲ್ಲಿ ಕಟ್ಟಿ ಫಂಗಸ್ ಇರುವ ಪ್ರದೇಶದಲ್ಲಿ ಇರಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.