ಚಳಿಗಾಲದಲ್ಲಿ ರಕ್ತದೊತ್ತಡ ಹೆಚ್ಚುವುದೇ? ನಿಯಂತ್ರಿಸುವುದು ಹೇಗೆ?

First Published | Oct 28, 2021, 4:17 PM IST

ಇಂದು ಹೆಚ್ಚಿನ ಜನರು ಹೈಪರ್ ಟೆನ್ಷನ್ (Hypertension) ಅಥವಾ ಅಧಿಕ ರಕ್ತದೊತ್ತಡ (High Blood Pressure) ಸಮಸ್ಯೆಯನ್ನು ಹೊಂದಿದ್ದಾರೆ. ಚಳಿಗಾಲದಲ್ಲಿ ನಿಮ್ಮ ರಕ್ತದೊತ್ತಡವು ತುಂಬಾ ಹೆಚ್ಚಾಗುವ ಸಂದರ್ಭಗಳಿವೆ. ತಜ್ಞರ ಪ್ರಕಾರ ವ್ಯಾಯಾಮ ಮತ್ತು ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು. 
 

ಕೆಲವೊಮ್ಮೆ ಚಳಿಗಾಲದ (Winter)ದಲ್ಲಿ, ನಿಮ್ಮ ರಕ್ತದೊತ್ತಡವು ತುಂಬಾ ಹೆಚ್ಚಾಗುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ತಿಳಿಯಿರಿ. ಒಂದು ವರದಿಯ ಪ್ರಕಾರ, ಪ್ರತಿದಿನ ಒಂದು ನಿರ್ದಿಷ್ಟ ರೀತಿಯ ವ್ಯಾಯಾಮವನ್ನು ಮಾಡುವುದರಿಂದ ನಿಮಗೆ ಪ್ರಯೋಜನವಾಗುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುವ ಐಸೋಮೆಟ್ರಿಕ್ ಹ್ಯಾಂಡ್ ಗ್ರಿಪ್ ( Isometric Hand grip Strengtheners ) ಬಗ್ಗೆ ಇಲ್ಲಿದೆ ಮಾಹಿತಿ.

heart attack women

ಹೃದಯಾಘಾತದ ಕಾರಣಗಳು (reasons for heart attack)
ಅಧಿಕ ರಕ್ತದೊತ್ತಡ ರೋಗಿಗಳು ಕೆಲವೊಮ್ಮೆ ರೋಗ ಲಕ್ಷಣಗಳನ್ನು ತೋರಿಸುವುದಿಲ್ಲ. ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ, ಇದು ಹೃದಯಾಘಾತ ಮತ್ತು ಹೃದ್ರೋಗಗಳಿಗೆ ಕಾರಣವಾಗಬಹುದು. ಬೊಜ್ಜು (obesity), ಆಲ್ಕೋಹಾಲ್ ಸೇವನೆ (Consumption of Alcohol), ಕಳಪೆ ಜೀವನಶೈಲಿ (Poor Lifestyle) ಮತ್ತು ಸಂಸ್ಕರಿಸಿದ ಆಹಾರವನ್ನು ತಿನ್ನುವುದು ಅಧಿಕ ರಕ್ತದೊತ್ತಡದ (High Blood Pressure) ಅಪಾಯವನ್ನು ಹೆಚ್ಚಿಸುತ್ತದೆ. ಮೊದಲು ನಿಯಮಿತವಾಗಿ ರಕ್ತದೊತ್ತಡ ತಪಾಸಣೆ ಮಾಡಿಸಿ. 

Tap to resize

ವ್ಯಾಯಾಮವು ಬಿಪಿಯನ್ನು ಕಡಿಮೆ ಮಾಡುತ್ತದೆ (exercise to control BP)
ಈಗ ವ್ಯಾಯಾಮ ಮಾಡುವುದರಿಂದ ಏನಾಗುತ್ತದೆ ಎಂದು ಕಂಡುಕೊಳ್ಳಿ. ವರದಿಯ ಪ್ರಕಾರ, ಐಸೋಮೆಟ್ರಿಕ್ ಹ್ಯಾಂಡ್ ಗ್ರಿಪ್  ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಎಂಟು ವಾರಗಳಲ್ಲಿ ರಕ್ತದೊತ್ತಡವನ್ನು 8 ರಿಂದ 10 ಎಂಎಂಎಚ್ ಜಿಗೆ ಕಡಿಮೆ ಮಾಡಬಹುದು. ಆದಾಗ್ಯೂ, ವೈದ್ಯರ ಸಲಹೆಯ ಮೇರೆಗೆ ಮಾತ್ರ ಅದನ್ನು  ದೈನಂದಿನ ದಿನಚರಿಯಲ್ಲಿ ಸೇರಿಸಿ.

ದೈಹಿಕ ಚಟುವಟಿಕೆಯ ಅಗತ್ಯವಿದೆ (Physical activity)
ಆರೋಗ್ಯಕರ ಜೀವನಶೈಲಿಯು ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ, ಆದ್ದರಿಂದ ದೈಹಿಕ ಚಟುವಟಿಕೆ (Physical Activity) ಮತ್ತು ವ್ಯಾಯಾಮವನ್ನು ಮಾಡಿ. ಪ್ರತಿದಿನ 30 ನಿಮಿಷಗಳ ಕಾಲ ನಡೆಯಿರಿ. ಅಥವಾ ಯೋಗ (Yoga) ಮಾಡಿ, ಇಲ್ಲವೇ ಯಾವುದೇ ಎಕ್ಸರ್ ಸೈಜ್ ಮಾಡಿ. ಇದರಿಂದ ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ. 
 

ಉಪ್ಪಿನ ಸೇವನೆಯನ್ನು ಕಡಿಮೆ ಮಾಡಿ(reduce intake of salt)
ಅಲ್ಲದೆ ಚಳಿಗಾಲದಲ್ಲಿ ರಕ್ತದೊತ್ತಡ ಹೆಚ್ಚಾಗುವ ಸಮಸ್ಯೆ ಇದೆ ಆದ್ದರಿಂದ ಆಹಾರದಲ್ಲಿನ ಉಪ್ಪನ್ನು ತಕ್ಷಣ ಕಡಿಮೆ ಮಾಡಿ. ಇದು ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಆಹಾರ ಪದಾರ್ಥಗಳಿಗೆ ಹೆಚ್ಚುವರಿ ಉಪ್ಪನ್ನು ಸೇರಿಸಲು ಮರೆಯಬೇಡಿ. ಎಷ್ಟು ಸಾಧ್ಯವು ಅಷ್ಟು ಕಡಿಮೆ ಉಪ್ಪು ಬಳಸಿ. 

ತೂಕ ನಿಯಂತ್ರಿಸಿ (weight control)
ಬೊಜ್ಜು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ನೀವು ಅಧಿಕ ತೂಕವನ್ನು ಹೊಂದಿದ್ದರೆ, ಇದು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ. ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ (cholesterol) ಮಟ್ಟಗಳು ಸಾಮಾನ್ಯ ಸ್ಥಿತಿಯಲ್ಲಿರಲು ತೂಕ ನಿಯಂತ್ರಣ ಅತ್ಯಗತ್ಯ. ಆದುದರಿಂದ ಸೇವಿಸುವ ಆಹಾರ ಮತ್ತು ವ್ಯಾಯಾಮಗಳ ಬಗ್ಗೆ ಗಮನ ಹರಿಸಬೇಕು. 

ಆಲ್ಕೋಹಾಲ್ (alcohol) ಮತ್ತು ಎಣ್ಣೆಯುಕ್ತ ಆಹಾರವನ್ನು ತಪ್ಪಿಸುವುದು
ಮದ್ಯ ಸೇವನೆ, ಕೊಬ್ಬಿನ ಆಹಾರ ಸೇವನೆ (Food having fats), ಧೂಮಪಾನ (Smoking), ದೈಹಿಕ ಚಟುವಟಿಕೆ ಮಾಡದಿರುವುದು ಮತ್ತು ಬೊಜ್ಜು ಕೂಡ ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ. ಸಾಧ್ಯವಾದಷ್ಟು ಮದ್ಯಪಾನ ಮತ್ತು ಎಣ್ಣೆಯಲ್ಲಿ ಕರಿದ ಆಹಾರಗಳಿಗೆ ಗುಡ್ ಬೈ ಹೇಳಿ. ಇದರಿಂದ ಬೊಜ್ಜು ಹೆಚ್ಚುವ ಸಾಧ್ಯತೆ ಕಡಿಮೆಯಾಗುತ್ತೆ. 

ಆಹಾರದಲ್ಲಿ ಶುಂಠಿಯ ಬಳಕೆ (ginger in food) 
ಆಹಾರದಲ್ಲಿ ಶುಂಠಿಯನ್ನು ಸೇರಿಸಿ. ಇದರಲ್ಲಿ ವಿವಿಧ ರೀತಿಯ ಪೋಷಕಾಂಶಗಳು ಇರುತ್ತವೆ ಮತ್ತು ಸ್ನಾಯುಗಳು ಸಡಿಲವಾಗುತ್ತದೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುವಾಗ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.  ಇದು ಚಳಿಗಾಲದಲ್ಲಿ ಉಂಟಾಗುವ ಹಲವು ಸಮಸ್ಯೆಗಳನ್ನು ಸಹ ನಿವಾರಣೆ ಮಾಡುತ್ತದೆ. 

Latest Videos

click me!