ದಿನದ ಆರಂಭ ಸಿಹಿ ತಿನ್ನೋ ಮೂಲಕ ಆರಂಭಿಸಿ, ಹೇಗಿರುತ್ತೆ ಆಮೇಲೆ ನೋಡಿ...!

First Published Oct 28, 2021, 3:24 PM IST

ನಾವು ಬಾಲ್ಯದಿಂದಲೂ ನಮ್ಮ ಪೋಷಕರು ಎಲ್ಲಾ ತಿಂಡಿ ತಿಂದು ಮುಗಿಸಿದರೆ ಏನಾದರೂ ಸಿಹಿತಿಂಡಿ (sweets) ನೀಡುವುದಾಗಿ ಭರವಸೆ ನೀಡುತ್ತಾರೆ. ಏಕೆಂದರೆ ಇದು ಆಗಾಗ್ಗೆ ಕೇಕ್ ಮೇಲಿನ ಚೆರ್ರಿಯಂತೆ ಕೆಲಸ ಮಾಡುತ್ತದೆ . ಹೀಗೆ ಮಾಡಿದ್ರೆ ನಾವು ಬೇಗ ತಿಂದು ಮುಗಿಸುತ್ತಿದ್ದೆವು. ಅಲ್ಲದೇ ನಾವು ರೆಸ್ಟೋರೆಂಟಿಗೆ ಹೋದಾಗಲೂ, ಕೊನೆಗೆ ಡೆಸರ್ಟ್ ಮೂಲಕ ಊಟವನ್ನು ಮುಗಿಸುತ್ತೇವೆ. 

ನಾವೆಲ್ಲರೂ ಖಂಡಿತವಾಗಿಯೂ ಊಟದ ನಂತರ ಸಿಹಿಯಾದದ್ದನ್ನು ತಿನ್ನುತ್ತೇವೆ. ಇದರ ಹಿಂದೆ ಸಿಹಿತಿಂಡಿಗಳ ರುಚಿ ಬಹಳ ಕಾಲ ಬಾಯಿಯಲ್ಲಿ ಉಳಿಯಲಿ ಎಂದು ನಂಬಲಾಗಿದೆ. ನಾವು ತಿನ್ನಲು ರೆಸ್ಟೋರೆಂಟ್‌ಗೆ (restaurant )ಹೋದಾಗ, ಅವರು ನಮಗೆ ಕೊನೆಯದಾಗಿ ಸಿಹಿ ತಿಂಡಿಗಳನ್ನು ಸಹ ಬಡಿಸುತ್ತಾರೆ. ಆದರೆ ಇಂದು ನಾವು ಸಿಹಿತಿಂಡಿಗಳಿಗೆ ಸಂಬಂಧಿಸಿದ ಒಂದು ಪ್ರಮುಖ ವಿಷಯವನ್ನು  ಹೇಳಲಿದ್ದೇವೆ.

ಆಯುರ್ವೇದದ ಪ್ರಕಾರ, ಬೆಳಗ್ಗಿನ ಉಪಾಹಾರವು (breakfast) ಸಿಹಿಯಾದದ್ದನ್ನು ಒಳಗೊಂಡಿರಬೇಕು. ಬೆಳಗಿನ ಉಪಾಹಾರಕ್ಕೆ ಸಿಹಿಯನ್ನು ಸೇರಿಸುವುದರಿಂದ ಅನೇಕ ಪ್ರಯೋಜನಗಳಿವೆ. ಇದರಿಂದ ದೇಹಕ್ಕೆ ಶಕ್ತಿ ತುಂಬುವುದರಿಂದ ಹಿಡಿದು, ಅನೇಕ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ. ಅವುಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ತಿಳಿಯೋಣ... 
 

ಬೆಳಗಿನ ಉಪಾಹಾರಕ್ಕೆ ಸಿಹಿ ತಿನಿಸುಗಳು
ರಾತ್ರಿಯ ಊಟ ಮತ್ತು ಉಪಾಹಾರದ ನಡುವೆ ದೀರ್ಘ ಅಂತರ ಇರುತ್ತೆ. ಆದ್ದರಿಂದ ಆಯುರ್ವೇದದಲ್ಲಿ (ayurveda), ಬೆಳಗ್ಗೆ ಎದ್ದ ತಕ್ಷಣ ದೇಹಕ್ಕೆ ಶಕ್ತಿಯ ಅಗತ್ಯವಿದೆ. ಇದು ಸಿಹಿಯಾದದ್ದನ್ನು ತಿನ್ನುವ ಮೂಲಕ ತ್ವರಿತವಾಗಿ ಪೂರೈಸುತ್ತದೆ. ನೈಸರ್ಗಿಕ ಸಕ್ಕರೆಯನ್ನು (Natural Sugar) ಹೊಂದಿರುವ ಮತ್ತು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರುವ ಉಪಾಹಾರಕ್ಕಾಗಿ (breakfast) ಸ್ವಲ್ಪ ಸಿಹಿ ಆಹಾರವನ್ನು ಹೊಂದಿರಬೇಕು. 
 

ವಾಸ್ತವವಾಗಿ, ಯಾವುದೇ ಆಹಾರವು ದೇಹದಲ್ಲಿ ಗ್ಲುಕೋಸ್ ಮಟ್ಟವನ್ನು (glucose level) ಎಷ್ಟು ತ್ವರಿತವಾಗಿ ಅಥವಾ ಕ್ರಮೇಣ ಹೆಚ್ಚಿಸುತ್ತದೆ ಎಂಬುದನ್ನು ತೋರಿಸುವ ಅಂಕಿ ಅಂಶವೇ ಗ್ಲೈಸೆಮಿಕ್ ಸೂಚ್ಯಂಕ. ನೈಸರ್ಗಿಕ ಸಕ್ಕರೆ ಇರುವ ಆಹಾರಗಳು ನಿಧಾನವಾಗಿ ದೇಹಕ್ಕೆ ಶಕ್ತಿಯನ್ನು ನೀಡುತ್ತವೆ. ಬೆಳಿಗ್ಗೆ ಸಿಹಿ ತಿನ್ನುವುದು ದೇಹವನ್ನು ದಿನವಿಡೀ ಸಕ್ರಿಯವಾಗಿರಿಸುತ್ತದೆ ಮತ್ತು ಶಕ್ತಿಯನ್ನು ಕಳೆದುಕೊಳ್ಳುವುದಿಲ್ಲ.

ಬೆಳಗಿನ ಉಪಾಹಾರಕ್ಕಾಗಿ ಸಿಹಿತಿಂಡಿಗಳನ್ನು ಏಕೆ ತಿನ್ನಬೇಕು?
ಬೆಳಗಿನ ಉಪಾಹಾರಕ್ಕೆ ಸಿಹಿ ತಿಂಡಿಗಳನ್ನು ತಿನ್ನಲು ಮುಖ್ಯ ಕಾರಣವೆಂದರೆ ಸಿಹಿ ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ ಮತ್ತು ಗ್ಲುಕೋಸ್ ಅನ್ನು ನಿಧಾನವಾಗಿ ಬಿಡುಗಡೆ ಮಾಡುತ್ತದೆ, ದಿನವಿಡೀ ನಮ್ಮ ದೇಹವನ್ನು ಸಕ್ರಿಯವಾಗಿರಿಸುತ್ತದೆ (active body) ಮತ್ತು ಶಕ್ತಿಯ ಕೊರತೆಯನ್ನು ಅನುಭವಿಸಲು ಬಿಡೋದಿಲ್ಲ. 

ಬೆಳಗಿನ ಉಪಾಹಾರವೂ ಶರೀರ ಆರೋಗ್ಯವಾಗಿರಲು (health) ಬೇಕಾದ ಅತ್ಯಗತ್ಯ ಊಟ. ಬೆಳಗಿನ ಉಪಾಹಾರವನ್ನು ತ್ಯಜಿಸಿದ ಜನರು ತಮ್ಮ ಕೆಲಸವನ್ನು ಮನಃಪೂರ್ವಕವಾಗಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ನಂಬಲಾಗಿದೆ. ಉಪಾಹಾರವನ್ನು ತ್ಯಜಿಸುವುದು ಜನರ ಕೆಲಸದ ಜೀವನದ ಮೇಲೂ ಪರಿಣಾಮ ಬೀರುತ್ತದೆ.

ಕೆಲವೊಮ್ಮೆ ನಾವು ಅವಸರದಲ್ಲಿ ಉಪಾಹಾರವನ್ನು ಬಿಟ್ಟು ಮಧ್ಯಾಹ್ನ ನೇರವಾಗಿ ಊಟ ಸೇವಿಸುತ್ತೇವೆ, ಇದು ದೇಹದಲ್ಲಿ ದೌರ್ಬಲ್ಯವನ್ನು (weakness) ಉಂಟುಮಾಡುತ್ತದೆ ಮತ್ತು ಕೆಲಸದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಗಮನಿಸಿರಬಹುದು. ಆದ್ದರಿಂದ ಬೆಳಗಿನ ಉಪಾಹಾರವನ್ನು ಮಾಡುವುದು ಬಹಳ ಮುಖ್ಯ, ಇದರಿಂದ ದೇಹವು ಶಕ್ತಿಯನ್ನು ಉಳಿಸಿಕೊಳ್ಳುತ್ತದೆ ಮತ್ತು ಎಲ್ಲಾ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬಹುದು.

ಬೆಳಗಿನ ಉಪಾಹಾರಕ್ಕಾಗಿ ಸಿಹಿ ತಿಂಡಿಯನ್ನು ತಿನ್ನುವುದು ದಿನದ ಹಸಿವನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಸೂಚಿಸಲು ಕೆಲವು ಪುರಾವೆಗಳಿವೆ. ಎಂಡೋಕ್ರೈನ್ ಸೊಸೈಟಿಯ ಅಧ್ಯಯನದ ಪ್ರಕಾರ, ಸಿಹಿ ಕುಕೀ ಅಥವಾ ಚಾಕೊಲೇಟ್ (chocolate)ನಂತಹ ಸಣ್ಣ ಸಿಹಿತಿಂಡಿ ಸೇರಿ 600 ಕ್ಯಾಲೊರಿ ಅಧಿಕ ಕಾರ್ಬ್ ಉಪಾಹಾರವನ್ನು ತಿನ್ನುವುದು ತೂಕ ನಷ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

click me!