ಆಫೀಸ್‌ನಿಂದ ಬಂದು ಈ ಕೆಲಸ ಮಾಡಿದ್ರೆ, ರಾತ್ರಿ ಆರಾಮ ಸಿಗುತ್ತೆ

First Published Aug 5, 2021, 6:25 PM IST

ಕಚೇರಿಯಲ್ಲಿ ಕೆಲಸ ಮಾಡುವಾಗ ಒತ್ತಡದಿಂದ ದೂರವಿರುವುದು ಅಸಾಧ್ಯ. ಆದಾಗ್ಯೂ, ಅದೇ ಒತ್ತಡ ನಿಮಗೆ ಉತ್ತಮ ಪ್ರದರ್ಶನ ನೀಡಲು ಸಹಾಯ ಮಾಡುತ್ತದೆ. ಆದರೆ ಅತಿಯಾದರೆ ಆರೋಗ್ಯಕ್ಕೆ ಹಾನಿಯಾಗಬಹುದು. ಕಚೇರಿಯಲ್ಲಿನ ಒತ್ತಡವು ಮನೆಯನ್ನು ತಲುಪಲು ಪ್ರಾರಂಭಿಸಿದಾಗ, ಜೀವನದ ಮೇಲೆ ಪರಿಣಾಮ ಬೀರುತ್ತದೆ. ಕಚೇರಿ ಒತ್ತಡದಿಂದ  ಜೀವನವನ್ನು ರಕ್ಷಿಸಲು  ಈ ಸಲಹೆಗಳನ್ನು ಅನುಸರಿಸಬಹುದು.

ಒತ್ತಡ ನಿವಾರಿಸಲು ಕಚೇರಿಯಿಂದ ಹಿಂದಿರುಗಿದಾಗ ಏನು ಮಾಡಬೇಕು?
ಮನೆಗೆ ಹಿಂದಿರುಗಬೇಕು ಮತ್ತು ಕಚೇರಿ ಒತ್ತಡವನ್ನು ನಿವಾರಿಸಲು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. ಇದು ದೇಹ ಮತ್ತು ಮನಸ್ಸನ್ನು ವಿಶ್ರಾಂತಿಗೊಳಿಸುತ್ತದೆ ಮತ್ತು ರಾತ್ರಿ ಆರಾಮವಾಗಿ ಮಲಗಲು ಸಹಾಯ ಮಾಡುತ್ತದೆ. ಈ ಸಲಹೆಗಳ ಬಗ್ಗೆ ತಿಳಿದುಕೊಳ್ಳೋಣ.

ಮನೆಯಲ್ಲಿ ಕಚೇರಿ ಕೆಲಸ ತರಬಾರದು ಅಥವಾ ಮನೆಯಲ್ಲಿ ಅದರ ಬಗ್ಗೆ ಹೆಚ್ಚು ಯೋಚಿಸಬಾರದು. ಮನೆಯಲ್ಲಿ ಕಚೇರಿ ಕೆಲಸದ ಬಗ್ಗೆ ಯೋಚಿಸುತ್ತಾ ಇದ್ದರೆ ನೆಮ್ಮದಿಗೆ ಭಂಗ ಬಂದು ಮನೆಯಲ್ಲಿ ಒತ್ತಡದಿಂದ ಬಳಲುತ್ತಲೇ ಇರಬೇಕಾಗುತ್ತದೆ.

ಕಚೇರಿಯಲ್ಲಿ ಹೆಚ್ಚು ದೈಹಿಕ ಚಟುವಟಿಕೆಯನ್ನು ಮಾಡಲು ಸಾಧ್ಯವಾಗುವುದಿಲ್ಲ, ಇದು  ದೇಹದ ಸ್ನಾಯುಗಳು ಗಟ್ಟಿಯಾಗಲು ಕಾರಣವಾಗುತ್ತದೆ. 

ಮನೆಗೆ ಬಂದು ಲೈಟ್ ಸ್ಟ್ರೆಚಿಂಗ್ ಮಾಡಿ, ಇದು ಸ್ನಾಯುಗಳನ್ನು ವಿಶ್ರಾಂತಿ ಗೊಳಿಸುತ್ತದೆ ಮತ್ತು ರಕ್ತದ ಹರಿವನ್ನು ಸುಧಾರಿಸುತ್ತದೆ. ಇದರಿಂದ ದೇಹ ಮತ್ತು ಮನಸ್ಸು ಹಗುರವಾಗುತ್ತದೆ.

ಕಚೇರಿಯಿಂದ ಬಂದು ದೈಹಿಕ ಆಯಾಸ ನಿವಾರಿಸಲು ಬಿಸಿ ನೀರಿನ ಸ್ನಾನ ಮಾಡಬಹುದು. ಬೆಚ್ಚಗಿನ ಸ್ನಾನ ಮಾಡುವುದರಿಂದ ಸ್ನಾಯುಗಳ ಒತ್ತಡ ಕಡಿಮೆಯಾಗುತ್ತದೆ ಮತ್ತು ಶಕ್ತಿ ನೀಡುತ್ತದೆ. 

ನೀರಿಗೆ ರಾಕ್ ಸಾಲ್ಟ್ ಸೇರಿಸಿ ಸ್ನಾನ ಮಾಡಬಹುದು, ಇದು ದೇಹವನ್ನು ವಿಶ್ರಾಂತಿಗೊಳಿಸುತ್ತದೆ.

ಕಚೇರಿಯಿಂದ ಮನೆಗೆ ಹಿಂತಿರುಗಿದ ಸ್ವಲ್ಪ ಸಮಯದವರೆಗೆ ತಲೆ, ಕಾಲು, ಬೆನ್ನಿನ ಮಸಾಜ್ ಮಾಡಬಹುದು. ಇದರಿಂದ ನೋವು, ಸೆಟೆತ ಮತ್ತು ಒತ್ತಡದಿಂದ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ.

ಒತ್ತಡವನ್ನು ನಿವಾರಿಸಲು ದೊಡ್ಡ ಮಾರ್ಗವೆಂದರೆ ಸಾಕಷ್ಟು ಮತ್ತು ಉತ್ತಮ ನಿದ್ರೆಯನ್ನು ಪಡೆಯುವುದು. ಮನೆಗೆ ಬಂದು ಕನಿಷ್ಠ 8 ಗಂಟೆ ನಿದ್ದೆ ಮಾಡಿ. ಗ್ಯಾಜೆಟ್ ಹೆಚ್ಚು ಬಳಸಬೇಡಿ. ಇದು ಮರುದಿನವೂ ಒತ್ತಡಮುಕ್ತವಾಗಿರಲು ಸಹಾಯ ಮಾಡುತ್ತದೆ.
 

click me!