ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ, ಕೊರೋನಾ ನಡೆಯಲಿ ಇಲ್ಲಿವೆ ಆಯುಷ್ ಟಿಪ್ಸ್

First Published | Apr 15, 2020, 5:29 PM IST
ಇಡೀ ಪ್ರಪಂಚವನ್ನೇ ನಡುಗಿಸಿರುವ ಕೊರೋನಾ ವೈರಸ್‌ಗೆ ಇಲ್ಲಿವರೆಗೆ ಯಾವುದೇ ಮದ್ದು ಇಲ್ಲ. ಆದರೆ ಇದರ ವಿರುದ್ಧ ಹೋರಾಡಲು ದೇಹವನ್ನು ರೆಡಿ ಮಾಡಿ ಕೊಳ್ಳುವುದು ನಮ್ಮ ಕೈಯಲ್ಲಿದೆ. ಅಂದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಕೊರೋನಾ ಬಾರದಂತೆ ದೂರವಿಡಲಂತೂ ಸಾಧ್ಯವಿದೆ. ಅದು ಹೇಗೆ ಎಂದು ಆಯುಷ್‌ ಇಲಾಖೆ ಕೆಲವು ಟಿಪ್ಸ್‌ ನೀಡಿದೆ. ಆಯುರ್ವೇದ, ಯುನಾನಿ, ಸಿದ್ಧ ಹಾಗೂ ಹೋಮಿಯೋಪತಿ ವೈದ್ಯರೂ ಇದನ್ನು ಶಿಫಾರಸ್ ಮಾಡಿದ್ದು, ಪ್ರಧಾನಿ ಮೋದಿ ಏಪ್ರಿಲ್ 14ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದಾಗ ಈ ಬಗ್ಗೆ ಉಲ್ಲೇಖಿಸಿದ್ದಾರೆ. ಏನವು ಮನೆಮದ್ದು?
ಆಗಾಗ ಬಿಸಿ ನೀರು ಕುಡಿಯುತ್ತಿರಿ.
undefined
ಮುಂಜಾನೆ ಕನಿಷ್ಠ ಪಕ್ಷ ಅರ್ಧ ಗಂಟೆ ಯೋಗಾಸನ, ಪ್ರಾಣಾಯಾಮ, ಧ್ಯಾನಗಳು ನಿಮ್ಮ ದಿನಚರಿಯ ಭಾಗವಾಗಲಿ.
undefined
Tap to resize

ಬಿಸಿ ಹಾಲಿಗೆ ಅರ್ಧ ಟೀಸ್ಪೂನ್‌ ಅರಿಶಿನ ಪುಡಿ ಹಾಕಿ ದಿನಕ್ಕೆರಡು ಬಾರಿ ಸೇವಿಸಿ.
undefined
ಸಾಸಿವೆ ಎಣ್ಣೆ ಅಥವಾ ತೆಂಗಿನೆಣ್ಣೆಯನ್ನು ಒಂದು ಟೀಸ್ಪೂನ್‌ನಷ್ಟು ಬಾಯಿಗೆ ಹಾಕಿಕೊಂಡು ಒಂದು ಅಥವಾ ಎರಡು ನಿಮಿಷ ಮುಕ್ಕುಳಿಸಿ ನಂತರ ಉಗಿಯಿರಿ. ಹೀಗೆ ದಿನಕ್ಕೆರಡು ಬಾರಿ ಮಾಡಬಹುದು. ಈ ಆಯಿಲ್‌ ಪುಲ್ಲಿಂಗ್‌ ವಿಧಾನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹೆಲ್ಪ್‌ ಮಾಡುತ್ತದೆ.
undefined
ಒಣ ಕೆಮ್ಮು ಇದ್ದರೆ ಬಿಸಿನೀರಿನಲ್ಲಿ ಪುದಿನ ಎಲೆ ಅಥವಾ ಅಜುವಾನ ಹಾಕಿ ಸ್ಟೀಮ್‌ ತಗೆದುಕೊಳ್ಳಿ.
undefined
ಬೆಳ್ಳುಳ್ಳಿ, ಅರಶಿನ, ಜೀರಿಗೆ, ಕೊತ್ತಂಬರಿ, ಕಾಳುಮೆಣಸು, ಲವಂಗಳು ಇರಲಿ ದಿನನಿತ್ಯದ ಅಡುಗೆಯಲ್ಲಿ.
undefined
ದಿನ ಸಂಜೆ ಮತ್ತು ಮುಂಜಾನೆ, ಎರಡೂ ಮೂಗಿನ ಹೊಳ್ಳೆಗಳಿಗೆ ತುಪ್ಪ, ಸಾಸಿವೆ ಎಣ್ಣೆ ಅಥವಾ ತೆಂಗಿನೆಣ್ಣೆಯನ್ನು ಹಚ್ಚಿಕೊಳ್ಳಿ.
undefined
ತುಳಸಿ, ದಾಲ್ಷಿನ್ನಿ, ಕಾಳುಮೆಣಸು, ಶುಂಠಿಯ ಹರ್ಬಲ್‌ ಟೀ ದಿನಕ್ಕೆರಡು ಬಾರಿ ಕುಡಿಯಿರಿ.
undefined
ಬೆಳಗ್ಗೆ ಒಂದು ಟೀ ಸ್ಪೂನ್‌ನಷ್ಟು ಚ್ಯವನಪ್ರಾಶ್ ಸೇವಿಸುವುದು ಸಹಾಯಕಾರಿ.
undefined

Latest Videos

click me!