ಇಲಿಯನ್ನು ಮನೆಯಿಂದ ಹೊರಹಾಕಲು ಇಲ್ಲಿದೆ ಸೂಪರ್ ಟ್ರಿಕ್ಸ್

First Published | Jul 16, 2022, 5:14 PM IST

ಬೇಸಿಗೆ ಮತ್ತು ಮಾನ್ಸೂನ್ ಸೀಸನ್‌ನಲ್ಲಿ ಮನೆಗಳಲ್ಲಿ ಕೀಟಗಳ ಭಯವು ಹೆಚ್ಚಾಗುತ್ತೆ. ಈ ಸಮಯದಲ್ಲಿ ಮನೆಯೊಳಗೆ ಬರುವ ಕೀಟಗಳನ್ನು ಸಾಧ್ಯವಾದಷ್ಟು ತೊಡೆದು ಹಾಕಬಹುದು. ಆದರೆ ಇಲಿಗಳನ್ನು ಮನೆಯಿಂದ ಹೊರಹಾಕೋದು ತುಂಬಾ ಕಷ್ಟ ಅಲ್ವಾ? ಹೌದು, ಮಳೆಗಾಲದಲ್ಲಿ, ಇಲಿಗಳ ಬಿಲ ಸಾಮಾನ್ಯವಾಗಿ ನೀರಿನಿಂದ ತುಂಬಿರುತ್ತೆ. ಈ ಕಾರಣದಿಂದಾಗಿ ಇಲಿ ಮನೆಯೊಳಗೆ ಪ್ರವೇಶಿಸುತ್ತವೆ ಮತ್ತು ಭೀತಿಯನ್ನು ಸೃಷ್ಟಿಸಲು ಪ್ರಾರಂಭಿಸುತ್ತೆ. ನಿಮಗೂ ಈ ಭಯ ಕಾಡುತ್ತಿದೆಯೇ?, ಇಲಿಗಳನ್ನು ತೊಡೆದುಹಾಕಲು ಕೆಲವು ಸುಲಭ ಮಾರ್ಗಗಳ ಬಗ್ಗೆ ನಿಮಗೆ ಮಾಹಿತಿ ನೀಡುತ್ತೇವೆ.

ಮನೆಯಲ್ಲಿ ಇಲಿಗಳ(Rat) ಕಾಟ ಒಂದು ದೊಡ್ಡ ಸಮಸ್ಯೆಗಿಂತ ಕಡಿಮೆಯೇನಲ್ಲ. ಒಂದು ಕಡೆ ಇಲಿ ಮನೆಯಲ್ಲಿ ಕೊಳೆಯನ್ನು ಹರಡುವ ಮೂಲಕ ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ. ಅದೇ ಸಮಯದಲ್ಲಿ, ಮನೆಯೊಳಗೆ ಸೇರಿದ ಇಲಿಗಳು ಆಗಾಗ್ಗೆ ಮನೆಯ ತಂತಿ, ಬಟ್ಟೆ ಮತ್ತು ಶೂಗಳನ್ನು ಕತ್ತರಿಸಿ ಹಾಕುವ ಮೂಲಕ ಸಮಸ್ಯೆ ಸೃಷ್ಟಿಸುತ್ತೆ. ಆದ್ದರಿಂದ ಇಲಿಗಳನ್ನು ಓಡಿಸಲು, ಇಲ್ಲಿ ಒಂದಿಷ್ಟು ಮನೆಮದ್ದುಗಳನ್ನು ಹೇಳಲಾಗಿದೆ, ಇವುಗಳನ್ನು ಟ್ರೈ ಮಾಡಿ ನೀವು ಇಲಿಗಳನ್ನು ತಕ್ಷಣವೇ ಮನೆಯಿಂದ ಹೊರಹಾಕಲು ಪ್ರಯತ್ನಿಸಬಹುದು.

ಇಲಿಗಳನ್ನು ಓಡಿಸಲು ಮನೆಮದ್ದುಗಳು

ಪುದೀನಾ ಎಣ್ಣೆ(Mint oil) ಬಳಸಿ
ಇಲಿ ಓಡಿಸಲು ನೀವು ಪುದೀನಾ ಎಣ್ಣೆ ಬಳಸಬಹುದು. ಪುದೀನಾ ಎಣ್ಣೆಯ ಪರಿಮಳವನ್ನು ಇಲಿಗಳು ಇಷ್ಟಪಡೋದಿಲ್ಲ. ಹಾಗಾಗಿ, ನೀವು ಹತ್ತಿಯಲ್ಲಿ ಪುದೀನಾ ಎಣ್ಣೆಯನ್ನು ಹಾಕಿ ಮನೆಯ ಮೂಲೆಗಳಲ್ಲಿ ಇಡಬಹುದು. 
 

Tap to resize

ಪುದೀನಾ ಎಣ್ಣೆಯ ಸ್ಮೆಲ್ ಎಷ್ಟೊಂದು ಕಟುವಾಗಿರುತ್ತೆ ಎಂದರೆ ಇದು ಇಲಿಗಳು ನಿಮ್ಮ ಮನೆಯಿಂದ ಕಣ್ಮರೆಯಾಗುವಂತೆ ಮಾಡುತ್ತೆ. ಅಲ್ಲದೆ, ಪುದೀನಾ ಎಣ್ಣೆ  ಮನೆಗೆ ರೂಮ್ ಫ್ರೆಶ್ನರ್(Room feshner) ಆಗಿ ಕಾರ್ಯನಿರ್ವಹಿಸುತ್ತೆ. ನೀವಿದನ್ನು ಖಂಡಿತವಾಗಿ ಟ್ರೈ ಮಾಡಿ ನೋಡಬಹುದು.

ಈರುಳ್ಳಿ (Onion)
ಇಲಿ ಸಹ ಈರುಳ್ಳಿ ಸ್ಮೆಲ್‌ನಿಂದ ಓಡಿ ಹೋಗುತ್ತೆ. ಹಾಗಾಗಿ ನೀವು ಈರುಳ್ಳಿಯನ್ನು ಕತ್ತರಿಸಿ ಮನೆಯ ಮೂಲೆಗಳಲ್ಲಿ ಇಡಬಹುದು.  ಆದರೆ, ಈರುಳ್ಳಿ ಬಹಳ ಬೇಗ ಒಣಗುತ್ತೆ. ಆದ್ದರಿಂದ ಪ್ರತಿ 2-3 ದಿನಗಳಿಗೊಮ್ಮೆ ಈರುಳ್ಳಿಯನ್ನು ಬದಲಾಯಿಸುತ್ತಲೇ ಇರಿ. ಇದು ಇಲಿಗಳು ನಿಮ್ಮ ಮನೆ ಪ್ರವೇಶಿಸೋದನ್ನು ತಡೆಯುತ್ತೆ.

ಇಲಿ ಕೊಲ್ಲಲು ಮನೆಮದ್ದು

ಮನೆಯಿಂದ ಇಲಿಗಳ ಸಮಸ್ಯೆ ಸಂಪೂರ್ಣವಾಗಿ ತೊಡೆದು ಹಾಕಲು ನೀವು ಪ್ಲಾಸ್ಟರ್ ಆಫ್ ಪ್ಯಾರಿಸ್ (Plaster of paris)ಮತ್ತು ಕೋಕೋ ಪುಡಿಯಿಂದ ಮನೆಯಲ್ಲಿ ರಾಟ್ ಕಿಲ್ಲರ್ ತಯಾರಿಸಬಹುದು. ಇದು ಹೇಗೆ ಅನ್ನೋ ಯೋಚ್ನೆ ಇದೆಯಾ? ಇಲ್ಲಿದೆ ನೋಡಿ ನೀವು ಮಾಡಬೇಕಾದ ವಿಧಾನ.

ಹೌದು, ಕೋಕೋ ಪುಡಿಯನ್ನು ಇಲಿಗಳು ತುಂಬಾ ಇಷ್ಟಪಡುತ್ತವೆ. ಹಾಗಾಗಿ, ಅದಕ್ಕೆ ಪ್ಲಾಸ್ಟರ್ ಆಫ್ ಪ್ಯಾರಿಸ್  ಸೇರಿಸುವ ಮೂಲಕ, ಇಲಿಗಳು ಬರುವಂತಹ ಜಾಗದಲ್ಲಿ ಅವುಗಳನ್ನು ಇಡಬೇಕು. ಇದು ಇಲಿಗಳ ಕರುಳಿನಲ್ಲಿ ಅಂಟಿಕೊಳ್ಳುತ್ತೆ ಮತ್ತು ಇಲಿಗಳು ಸಾಯುವಂತೆ ಮಾಡುತ್ತೆ.

ಕೆಂಪು ಮೆಣಸು(Red chilli)
ಕೆಂಪು ಮೆಣಸು ಇಲಿ ಓಡಿಸಲು ಪರಿಣಾಮಕಾರಿ ಮಾರ್ಗ. ಇಲಿಗಳನ್ನು ಕೊಲ್ಲದೆ ಮನೆಯಿಂದ ಹೊರಹಾಕಲು ನೀವು ಕೆಂಪು ಮೆಣಸನ್ನು ಬಳಸಬಹುದು. ಇದಕ್ಕಾಗಿ, ಇಲಿಗಳು ಹೋಗೋ ದಾರಿಗೆ ಕೆಂಪು ಮೆಣಸಿನ ಪುಡಿ ಅಥವಾ ಒಣ ಕೆಂಪು ಮೆಣಸಿನಕಾಯಿಯನ್ನು ಇರಿಸಿ. ಇದು ಇಲಿಗಳು ಮನೆಯಿಂದ ದೂರ ಓಡಿಹೋಗಲು ಕಾರಣವಾಗುತ್ತೆ.
 

ಮನೆಯನ್ನು ಸ್ವಚ್ಛವಾಗಿಡಿ.(Clean home)
ಇಲಿ ಮನೆಯಿಂದ ಹೊರಬಂದ ನಂತರ ಮನೆಯನ್ನು ಸ್ವಚ್ಛಗೊಳಿಸಲು ಮರೆಯಬೇಡಿ. ಇಲ್ಲವಾದರೆ ಇಲಿಗಳು ಮತ್ತೆ ಮನೆಯನ್ನು ಪ್ರವೇಶಿಸುವ ಸಾಧ್ಯತೆ ಹೆಚ್ಚಾಗಿದೆ. ಇದನ್ನು ಅವಾಯ್ಡ್ ಮಾಡಲು ನೀವು ಮನೆಯಲ್ಲಿ ಚೆನ್ನಾಗಿ ಸ್ವಚ್ಚಗೊಳಿಸಲೇಬೇಕು.

ಮೊದಲನೆಯದಾಗಿ, ಮನೆಯ ಕಿಟಕಿಗಳು ಮತ್ತು ಬಾಗಿಲುಗಳನ್ನು ತೆರೆಯಿರಿ. ನಂತರ ಇಲಿಗಳ ಹಿಕ್ಕೆಗಳನ್ನು ಕಾಗದ, ಬಟ್ಟೆ ಅಥವಾ ಗ್ಲೌಸ್(Gloves) ಸಹಾಯದಿಂದ ಸ್ವಚ್ಛಗೊಳಿಸಿ ಮತ್ತು ಮನೆಯನ್ನು ಚೆನ್ನಾಗಿ ಸ್ಯಾನಿಟೈಸ್ ಮಾಡಿ. ಇದು ಮನೆಯ ನೈರ್ಮಲ್ಯವನ್ನು ಕಾಪಾಡುತ್ತೆ  ಮತ್ತು ರೋಗ ಹರಡುವ ಯಾವುದೇ ಭಯವಿರೋದಿಲ್ಲ.

Latest Videos

click me!