ಸೈಕ್ಲಿಂಗ್‌ ಆರೋಗ್ಯಕ್ಕೆ ಒಳ್ಳೇದು ನಿಜ, ಆದರೆ ಇಂಥವರಿಗಲ್ಲ !

Published : Oct 14, 2022, 11:33 AM IST

ಒಂದು ಕಾಲದಲ್ಲಿ ಸೈಕಲ್ ಇಲ್ಲದ ಮನೆಯೇ ಇರಲಿಲ್ಲ. ಈಗ ನೋಡಿದರೆ ಬೈಕ್‌, ಕಾರುಗಳ ಹಾವಳಿಯಲ್ಲಿ ಸೈಕಲ್ ಎಲ್ಲಿಯೂ ಕಾಣುತ್ತಿಲ್ಲ. ಆದರೆ ಸೈಕ್ಲಿಂಗ್ ಒಂದಲ್ಲ ಎರಡಲ್ಲ ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ ಕೆಲವೊಬ್ಬರು ಸೈಕ್ಲಿಂಗ್ ಮಾಡ್ಲೇಬಾರ್ದು ಅನ್ನೋ ವಿಚಾರ ನಿಮ್ಗೊತ್ತಾ ?  

PREV
17
 ಸೈಕ್ಲಿಂಗ್‌ ಆರೋಗ್ಯಕ್ಕೆ ಒಳ್ಳೇದು ನಿಜ, ಆದರೆ ಇಂಥವರಿಗಲ್ಲ !

ಆರೋಗ್ಯಕರವಾಗಿರಲು ಸಮತೋಲಿತ ಆಹಾರ ಸೇವನೆಯಷ್ಟೇ ವ್ಯಾಯಾಮವೂ ಮುಖ್ಯ. ವ್ಯಾಯಾಮದಿಂದ ಮಾತ್ರ ದೇಹವು ಫಿಟ್ ಮತ್ತು ಆರೋಗ್ಯಕರವಾಗಿರುತ್ತದೆ. ಆದರೆ ಬಿಡುವಿಲ್ಲದ ಜೀವನದಿಂದ ಜಿಮ್‌ಗೆ ಹೋಗಲು ಮತ್ತು ವ್ಯಾಯಾಮ ಮಾಡಲು ಸಾಕಷ್ಟು ಸಮಯವಿಲ್ಲದವರು ಅನೇಕರಿದ್ದಾರೆ. ಅಂತಹವರು ಅರ್ಧ ಗಂಟೆಯಾದರೂ ಸೈಕಲ್ ತುಳಿಯುವುದರಿಂದ ಹಲವು ಲಾಭಗಳು ಸಿಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. 

27

ಸಣ್ಣಪುಟ್ಟ ಕೆಲಸಗಳಿಗೆ ಹೊರಗೆ ಹೋಗಿ ಹತ್ತಿರದ ಅಂಗಡಿಗೆ ಹೋಗುವವರು ಸೈಕಲ್ ತುಳಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನಿಮ್ಮ ದೇಹವನ್ನು ಸದೃಢವಾಗಿರಿಸುತ್ತದೆ. ಆದರೆ ಸೈಕ್ಲಿಂಗ್ ಎಲ್ಲರಿಗೂ ಪ್ರಯೋಜನಕಾರಿಯೇ? ಖಂಡಿತವಾಗಿಯೂ ಅಲ್ಲ ಎನ್ನುತ್ತಾರೆ ಎಕ್ಸ್‌ಪರ್ಟ್ಸ್‌. ಕೆಲವರು ಅಪ್ಪಿತಪ್ಪಿಯೂ ಸೈಕಲ್ ತುಳಿಯಬಾರದು ಎಂಉ ಆರೋಗ್ಯ ತಜ್ಞರೇ ಸೂಚಿಸುತ್ತಾರೆ..

37

ಸೈಕ್ಲಿಂಗ್‌ನ ಪ್ರಯೋಜನಗಳು

ಹೃದಯಕ್ಕೆ ಪ್ರಯೋಜನಕಾರಿ: ಪ್ರತಿದಿನ ಅರ್ಧ ಗಂಟೆಯಾದರೂ ಸೈಕ್ಲಿಂಗ್ ಮಾಡುವುದರಿಂದ ಹೃದಯವು ಫಿಟ್ ಮತ್ತು ಆರೋಗ್ಯಕರವಾಗಿರುತ್ತದೆ. ಸೈಕ್ಲಿಂಗ್ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

47

ತೂಕ ಇಳಿಕೆ ನೆರವಾಗುತ್ತದೆ: ತೂಕ ಕಡಿಮೆ ಮಾಡಿಕೊಳ್ಳಲು ಸೈಕ್ಲಿಂಗ್ ಪರಿಣಾಮಕಾರಿ ಎನ್ನುತ್ತಾರೆ ತಜ್ಞರು. ಸೈಕ್ಕಿಂಗ್ ತೊಡೆಗಳಲ್ಲಿ ಸಂಗ್ರಹವಾದ ಹೆಚ್ಚಿನ ಕೊಬ್ಬನ್ನು ಕರಗಿಸುತ್ತದೆ. ಸೊಂಟದ ಗಾತ್ರವೂ ಕಡಿಮೆಯಾಗುತ್ತದೆ. ಅದರಲ್ಲೂ ಸೈಕ್ಲಿಂಗ್ ಮಾಡುವುದರಿಂದ ಕಾಲಿನ ಮೂಳೆಗಳು ಗಟ್ಟಿಯಾಗುತ್ತವೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಸೈಕ್ಲಿಂಗ್ ಖಂಡಿತವಾಗಿಯೂ ಅತ್ಯುತ್ತಮ ಆಯ್ಕೆಯಾಗಿದೆ.

57

ಮೆದುಳು ಚುರುಕಾಗುತ್ತದೆ: ಸೈಕ್ಲಿಂಗ್ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ನಿಯಮಿತ ಸೈಕ್ಲಿಂಗ್ ಒತ್ತಡ, ಆತಂಕ ಮತ್ತು ಖಿನ್ನತೆಯಂತಹ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಸ್ಲಿಕ್ಲಿಂಗ್ ಹಿಪೊಕ್ಯಾಂಪಸ್‌ನಲ್ಲಿ ಜೀವಕೋಶಗಳನ್ನು ರೂಪಿಸಲು ಕಾರಣವಾಗುತ್ತದೆ. ಇವು ನಿಮ್ಮ ಜ್ಞಾಪಕಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇದು ಸ್ನಾಯುಗಳನ್ನು ಸಹ ಬಲಪಡಿಸುತ್ತದೆ.

67
cycling for health

ಯಾರು ಸೈಕಲ್ ಓಡಿಸಬಾರದು ?

ಕೀಲು ನೋವು ಇರುವವರು: ಇತ್ತೀಚಿನ ದಿನಗಳಲ್ಲಿ ಕೀಲು ನೋವಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಕೀಲು ನೋವು ಇರುವವರು ಸೈಕಲ್ ಓಡಿಸಬಾರದು. ಹೆಜ್ಜೆ ಹಾಕಿದರೆ ಸಮಸ್ಯೆ ಹೆಚ್ಚುತ್ತದೆ. ಏಕೆಂದರೆ ನೀವು ಸೈಕ್ಲಿಂಗ್ ಮಾಡುವಾಗ ಉಸಿರನ್ನು ಹೊರಹಾಕಿದಾಗ, ನಿಮ್ಮ ಹೃದಯ ಬಡಿತ ಹೆಚ್ಚಾಗುತ್ತದೆ. ಇದು ಅಸ್ತಮಾಕ್ಕೆ ಕಾರಣವಾಗುತ್ತದೆ.

77

ಅಸ್ತಮಾ ಇರುವವರು: ಅಸ್ತಮಾ ಇರುವವರು ಸಹ ಸೈಕ್ಲಿಂಗ್ ಮಾಡುವ ರಿಸ್ಕ್ ತೆಗೆದುಕೊಳ್ಳಬಾರದು. ನಿರಂತರವಾದ ಕಾಲಿನ ಚಲನೆಯು ಕೆಮ್ಮಿಗೆ ಕಾರಣವಾಗಬಹುದು. ಕ್ರಮೇಣ ಇದು ಉಸಿರಾಡಲು ಸಮಸ್ಯೆಯನ್ನುಂಟು ಮಾಡಬಹುದು. ಹೀಗಾಗಿ ಅಸ್ತಮಾ ಇರುವವರು ಸೈಕಲ್ ತುಳಿಯುವುದರಿಂದ ದೂರ ಇರುವುದು ಉತ್ತಮ 

Read more Photos on
click me!

Recommended Stories