ನಿಮ್ಮ ಈ ಕೆಟ್ಟ ಅಭ್ಯಾಸಗಳು ಲೈಂಗಿಕ ಜೀವನದ ಮೇಲೆ ಭಾರಿ ಪರಿಣಾಮ ಬೀರುತ್ತೆ

First Published May 28, 2022, 10:15 AM IST

ದಾಂಪತ್ಯ ಅನ್ನೋದು ಎರಡು ಹೃದಯಗಳ ಮಧುರ ಭಾಂದವ್ಯ. ದಂಪತಿಗಳ ಸಂಬಂಧವು ಪ್ರೀತಿ ಮತ್ತು ಅನ್ಯೋನ್ಯತೆಯ ಮೇಲೆ ಅವಲಂಬಿತವಾಗಿದೆ, ಇದು ನಿಮಗೂ ಗೊತ್ತಿರುತ್ತೆ. ಕೆಲವೊಮ್ಮೆ ಇಬ್ಬರ ನಡುವೆ ಪ್ರೀತಿ ಇರುತ್ತೆ ಆದರೆ ಹಾಸಿಗೆಯ ಮೇಲೆ ನಿಮ್ಮ ಸಂಗಾತಿಯನ್ನು ಸೆಳೆಯಲು ನಿಮಗೆ ಸಾಧ್ಯವಾಗದಿದ್ದರೆ, ಅದು ಮುರಿದುಬೀಳುವ ಹಂತವನ್ನು ಸಹ ತಲುಪಬಹುದು ಅಲ್ವಾ? ಹೆಚ್ಚಿನ ವಿವಾಹಗಳು (marriage) ಮುರಿದು ಬೀಳಲು ಇದು ಸಹ ಕಾರಣವಾಗಿದೆ. 

ಅನ್ಯೋನ್ಯತೆಯು ಸಂಬಂಧವನ್ನು ಬಲಪಡಿಸುತ್ತದೆ. ಆದರೆ ಕೆಲವು ಅಭ್ಯಾಸಗಳಿಂದಾಗಿ, ಲೈಂಗಿಕ ಜೀವನದ (sex life) ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದನ್ನು ತಕ್ಷಣವೇ ಬದಲಾಯಿಸಬೇಕು. ಅದನ್ನು ತೊಡೆದುಹಾಕುವ ಮೂಲಕ ನೀವು ನಿಮ್ಮ ಸಂಗಾತಿಯನ್ನು ಸಂತೋಷಪಡಿಸಬಹುದಾದ ಐದು ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳೋಣ.

ಹೆಚ್ಚು ಜಂಕ್ ಫುಡ್ ಸೇವಿಸೋದು

ಅನೇಕ ಜನರು ಜಂಕ್ ಫುಡ್ ಗಳನ್ನು (junk food)ಬಿಟ್ಟೂ ಬಿಡದೆ ತಿನ್ನುತ್ತಾರೆ. ಜಂಕ್ ಫುಡ್ ಗಳನ್ನು ಮೊದಲು ಆಯ್ಕೆಯಿಂದ ತಿನ್ನಲಾಗುತ್ತದೆ, ನಂತರ ಅದು ಅಭ್ಯಾಸವಾಗಿ ಬದಲಾಗುತ್ತದೆ. ಜಂಕ್ ಫುಡ್ ಗಳನ್ನು ತಿನ್ನುವುದರಿಂದ ದೇಹದೊಳಗೆ ಕಾರ್ಬೋಹೈಡ್ರೇಟ್ ಗಳು, ಟ್ರಾನ್ಸ್ ಕೊಬ್ಬುಗಳು ಮತ್ತು ಸ್ಯಾಚುರೇಟೆಡ್ ಕೊಬ್ಬುಗಳು ಶೇಖರಣೆಯಾಗಲು ಕಾರಣವಾಗುತ್ತದೆ.

  ಈ ಕಾರಣದಿಂದಾಗಿ ರಕ್ತದ ಹರಿವು (blood flow) ತುಂಬಾ ನಿಧಾನವಾಗುತ್ತದೆ. ಈ ಕಾರಣದಿಂದಾಗಿ ನೀವು ಸೆಕ್ಸ್ ಸಮಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಗೋದಿಲ್ಲ. ಆದ್ದರಿಂದ ಜಂಕ್ ಫುಡ್ ಗಳ ಅಭ್ಯಾಸವನ್ನು ಬದಲಾಯಿಸಿ ಮತ್ತು ಹಸಿರು ತರಕಾರಿಗಳು, ಹಣ್ಣುಗಳು ಮತ್ತು ಪ್ರೋಟೀನ್ ನಿಂದ ತಯಾರಿಸಿದ ವಸ್ತುಗಳನ್ನು ಹೆಚ್ಚು ಸೇವಿಸಿ.

ತುಂಬಾ ಚಿಂತೆ ಮಾಡುವುದು 
ಇತ್ತೀಚಿನ ದಿನಗಳಲ್ಲಿ ಆತಂಕ, ತೊಂದರೆ ಸಾಮಾನ್ಯವಾಗಿದೆ.ಚಿಂತೆ ಇಲ್ಲದ ಜೀವವೇ ಭೂಮಿ ಮೇಲೆ ಇಲ್ಲವೇನೋ ಎಂಬಂತೆ ಎಲ್ಲಾ ಜನರಿಗೆ ಚಿಂತೆ ಕಾಡುತ್ತಿದೆ. ಆದರೆ ಈ ಚಿಂತೆ (tension)ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದಲ್ಲದೆ, ಲೈಂಗಿಕ ಜೀವನವನ್ನು ಸಹ ಅಡ್ಡಿಪಡಿಸುತ್ತದೆ. ಒತ್ತಡದಿಂದಾಗಿ, ಲೈಂಗಿಕತೆಯನ್ನು ಹೊಂದುವ ಬಯಕೆ ಕೂಡ ಕಡಿಮೆಯಾಗುತ್ತೆ.. ಆದ್ದರಿಂದ ಸಾಧ್ಯವಾದಷ್ಟು ಬೇಗ, ನೀವು ತೊಂದರೆಯಿಂದ ಮುಕ್ತರಾಗಿರಬೇಕು ಮತ್ತು ನಿಮ್ಮ ಸಂಗಾತಿಯೊಂದಿಗೆ ಸಂತೋಷವಾಗಿರಲು ಪ್ರಯತ್ನಿಸಬೇಕು.

ಉಪ್ಪಿನಿಂದ ನಿಮ್ಮನ್ನು ನೀವೇ ದೂರವಿಡಿ 
ಬಹಳಷ್ಟು ಜನರು ಹೆಚ್ಚು ಉಪ್ಪನ್ನು ತಿನ್ನುವ ಅಭ್ಯಾಸವನ್ನು ಹೊಂದಿದ್ದಾರೆ. ಈ ಅಭ್ಯಾಸವು ನಿಮ್ಮ ಲೈಂಗಿಕ ಜೀವನದ (sex life)ಮೇಲೂ ಪರಿಣಾಮ ಬೀರಬಹುದು. ಹೆಚ್ಚು ಉಪ್ಪನ್ನು ಸೇವಿಸುವುದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ ಕಾಮಾಸಕ್ತಿಯನ್ನು ಕಡಿಮೆ ಮಾಡಬಹುದು. ಇದು ನಿಮ್ಮ ಸೆಕ್ಸ್ ಲೈಫ್ ಮೇಲೆ ಪರಿಣಾಮ ಬೀರುತ್ತೆ. 

ತೂಕ ಹೆಚ್ಚಳ (weight gain)
ಲೈಂಗಿಕ ಜೀವನದ ಅತಿದೊಡ್ಡ ಶತ್ರುವೆಂದರೆ ತೂಕ. ಹೆಚ್ಚಿದ ತೂಕವು (weight gain)  ನಿಮ್ಮ ಸೆಕ್ಸ್ ಲೈಫ್ ಮೇಲೆ ಪರಿಣಾಮ ಬೀರುತ್ತೆ. ಒಂದು ಅಧ್ಯಯನದ ಪ್ರಕಾರ, ಪುರುಷರು 40 ಇಂಚುಗಳಿಗಿಂತ ಹೆಚ್ಚು ಸೊಂಟವನ್ನು ಹೊಂದಿದ್ದರೆ, ಅವರು ನಪುಂಸಕತ್ವಕ್ಕೆ ಬಲಿಯಾಗಬಹುದು. ಆದ್ದರಿಂದ ಸಾಧ್ಯವಾದಷ್ಟು ಬೇಗ, ಮಹಿಳೆಯರು ಅಥವಾ ಪುರುಷರು ಇಬ್ಬರೂ ತೂಕವನ್ನು ಕಳೆದುಕೊಳ್ಳಬೇಕು. 

ತೂಕ ಹೆಚ್ಚಳ
ಲೈಂಗಿಕ ಜೀವನದ ಅತಿದೊಡ್ಡ ಶತ್ರುವೆಂದರೆ ತೂಕ. ಹೆಚ್ಚಿದ ತೂಕವು (weight gain)  ನಿಮ್ಮ ಸೆಕ್ಸ್ ಲೈಫ್ ಮೇಲೆ ಪರಿಣಾಮ ಬೀರುತ್ತೆ. ಒಂದು ಅಧ್ಯಯನದ ಪ್ರಕಾರ, ಪುರುಷರು 40 ಇಂಚುಗಳಿಗಿಂತ ಹೆಚ್ಚು ಸೊಂಟವನ್ನು ಹೊಂದಿದ್ದರೆ, ಅವರು ನಪುಂಸಕತ್ವಕ್ಕೆ ಬಲಿಯಾಗಬಹುದು. ಆದ್ದರಿಂದ ಸಾಧ್ಯವಾದಷ್ಟು ಬೇಗ, ಮಹಿಳೆಯರು ಅಥವಾ ಪುರುಷರು ಇಬ್ಬರೂ ತೂಕವನ್ನು ಕಳೆದುಕೊಳ್ಳಬೇಕು. 

click me!