ಚಳಿ ಅಂದ್ರೆ ಸಾಕು, ತುರಿಕೆ ಹೆಚ್ಚುತ್ತೆ, ಸಂಕ್ರಾಂತಿಯಲ್ಲಿ ಎಳ್ಳು-ಬೆಲ್ಲ ಅವೈಯ್ಡ್ ಮಾಡಿದರೊಳಿತು!

First Published Jan 14, 2023, 3:33 PM IST

ಚಳಿಗಾಲದಲ್ಲಿ, ನೀವು ಸಹ ತುರಿಕೆಯ ಬಗ್ಗೆ ತುಂಬಾ ಅಸಮಾಧಾನಗೊಂಡಿದ್ದರೆ, ಚರ್ಮವನ್ನು ತೇವಾಂಶದಿಂದ ಇಡೋದು ಮತ್ತು ಆಹಾರದ ಬಗ್ಗೆ ಗಮನ ಹರಿಸೋದು ಮುಖ್ಯ. ಆದ್ದರಿಂದ ತುರಿಕೆ ಇದ್ದಾಗ ಯಾವ ಆಹಾರ ಪದಾರ್ಥಗಳನ್ನು ತಪ್ಪಿಸಬೇಕು ಎಂದು ತಿಳಿದುಕೊಳ್ಳೋಣ.

ಚಳಿಗಾಲದಲ್ಲಿ, ಹೊರಗಿನ ಶುಷ್ಕ ವಾತಾವರಣದಿಂದಾಗಿ ದೇಹದಲ್ಲಿ, ಶುಷ್ಕತೆಯ (Dryness) ಸಮಸ್ಯೆ ಸ್ವಲ್ಪ ಹೆಚ್ಚಾಗುತ್ತೆ. ಈ ಕಾರಣದಿಂದಾಗಿ ತುರಿಕೆಯೊಂದಿಗೆ ಗುಳ್ಳೆಗಳೂ ಹೆಚ್ಚುತ್ತೆ. ಹಾಗಾಗಿ, ಚರ್ಮವನ್ನು ತೇವಾಂಶದಿಂದ ಇಡೋದು ಬಹಳ ಮುಖ್ಯ. ಇದಲ್ಲದೆ, ಸೋಂಕು, ಅಲರ್ಜಿ, ಕೆಮಿಕಲ್ ಪ್ರಾಡಕ್ಟ್ಸ್ ಬಳಕೆ ಮತ್ತು ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ ತುರಿಕೆಯ ಸಮಸ್ಯೆ ಸಹ ಕಾಡಬಹುದು. 
 

ನೀವು ಯಾವಾಗಲೂ ತುರಿಕೆಯಿಂದ ತೊಂದರೆಗೀಡಾಗಿದ್ದರೆ, ಆಹಾರದ ಬಗ್ಗೆ ಗಮನ ಹರಿಸೋದು ತುಂಬಾ ಮುಖ್ಯ. ಯಾಕಂದ್ರೆ ಕೆಲವು ಆಹಾರ(Food items) ಪದಾರ್ಥಗಳಲ್ಲಿರುವ ಪೋಷಕಾಂಶಗಳು ತುರಿಕೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತೆ. ಆದ್ದರಿಂದ ತುರಿಕೆ ಇದ್ದಾಗ ಯಾವ ಆಹಾರ ಪದಾರ್ಥಗಳನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ತಿಳಿದುಕೊಳ್ಳೋಣ.

ಮೊಟ್ಟೆ(Egg)

ಹೆಚ್ಚು ತುರಿಕೆಯ ಸಮಸ್ಯೆ ಇದ್ದಾಗ ಮೊಟ್ಟೆ ತಿನ್ನೋದನ್ನು ತಪ್ಪಿಸಿ. ಇದು ಈ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು. ಯಾಕಂದ್ರೆ ಮೊಟ್ಟೆಗಳಲ್ಲಿ ಕಂಡುಬರುವ ಪ್ರೋಟೀನ್ ದೇಹದ ರೋಗ ನಿರೋಧಕ ಶಕ್ತಿಗೆ ರಿಯಾಕ್ಟ್ ಮಾಡುತ್ತೆ. ಇದು ತುರಿಕೆ ಮತ್ತು ಉಸಿರಾಟದ ತೊಂದರೆ, ಊತ ಮತ್ತು ಅಜೀರ್ಣಕ್ಕೆ ಕಾರಣವಾಗಬಹುದು.

ಕಡಲೆಕಾಯಿ(Peanut)

ತುರಿಕೆ ಇರುವಾಗ ಕಡಲೆಕಾಯಿ ಸೇವನೆಯನ್ನು ಸಂಪೂರ್ಣವಾಗಿ ತಪ್ಪಿಸಿ. ಕಡಲೆಕಾಯಿ ತಿನ್ನೋದರಿಂದ ಚರ್ಮದಲ್ಲಿ ಊತ ಮತ್ತು ಕಿರಿಕಿರಿ ಉಂಟಾಗಬಹುದು. ಅಲರ್ಜಿಯು ಮನುಷ್ಯನ ರೋಗ ನಿರೋಧಕ ಶಕ್ತಿಗೆ ಸಂಬಂಧಿಸಿದೆ. ಕಡಲೆಕಾಯಿ ಪ್ರೋಟೀನ್ ಕೆಲವು ಜನರಲ್ಲಿ ಅಲರ್ಜಿ ಉಂಟು ಮಾಡುತ್ತದೆ. ಈ ರೀತಿಯ ಇಮ್ಮ್ಯೂನ್ ಸಿಸ್ಟಮ್ ಹೊಂದಿರುವ ಜನರು ಡ್ರೈ ಫ್ರೂಟ್ಸ್  ಅಲರ್ಜಿ ಹೊಂದಿರುತ್ತಾರೆ. 
 

ಒಬ್ಬ ವ್ಯಕ್ತಿಯು ಕಡಲೆಕಾಯಿ  ತಿನ್ನುವಾಗ, ಅವನ ಮಾಸ್ಟ್ ಸೆಲ್ಸ್, ಬೇಸೊಫಿಲ್ಸ್ ಎಂದೂ ಸಹ ಕರೆಯಲ್ಪಡುವ, ಒಂದು ವಿಶೇಷ ರೀತಿಯ ಉತ್ತೇಜಕವನ್ನು ಬಿಡುಗಡೆ ಮಾಡುತ್ತವೆ. ಈ ಕಾರಣದಿಂದಾಗಿ, ತುರಿಕೆ, ಅತಿಸಾರ, ಅಸ್ತಮಾ(Asthma) ಮತ್ತು ಉರಿಯೂತದೊಂದಿಗೆ ದದ್ದುಗಳಾಗುತ್ತವೆ.
 

ಮಸಾಲೆಯುಕ್ತ-ಜಂಕ್ ಫುಡ್ (Junk food)

ತುರಿಕೆ ಮತ್ತು ಉರಿಯೂತದ ಸಮಸ್ಯೆಯಿಂದ ಬಳಲುತ್ತಿರುವ ಜನರು ಮಸಾಲೆಯುಕ್ತ ಮತ್ತು ಜಂಕ್ ಫುಡ್ ಗಳ ಸೇವನೆ ತಪ್ಪಿಸಬೇಕು. ಯಾಕಂದ್ರೆ ದೇಹ ಅವುಗಳನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತೆ, ಇದರಿಂದಾಗಿ ಡೈಜೆಷನ್ ನಿಧಾನಗೊಳ್ಳುತ್ತೆ ಮತ್ತು ವಿವಿಧ ಸಮಸ್ಯೆಗಳು ಕಂಡುಬರುತ್ತವೆ.

ಎಳ್ಳು

ತುರಿಕೆಯಲ್ಲಿ ಎಳ್ಳು ಮತ್ತು ಅದರ ಉತ್ಪನ್ನಗಳ ಸೇವನೆ ತಪ್ಪಿಸಿ. ಎಳ್ಳು ಸೇವನೆಯು ದದ್ದುಗಳ(Rashes) ಸಮಸ್ಯೆಯನ್ನು ಸಹ ಹೆಚ್ಚಿಸುತ್ತೆ. ಹಾಗಾಗಿ ಎಳ್ಳು ಹಾಕಿ ತಯಾರಿಸಿದ ಯಾವುದೇ ಆಹಾರವನ್ನು ಸೇವಿಸಬೇಡಿ. ಎಷ್ಟು ಸಾಧ್ಯವಾಗುತ್ತೋ ಅಷ್ಟು ಅವಾಯ್ಡ್ ಮಾಡಿದ್ರೆ ಉತ್ತಮ.

ಹುಳಿ ಪದಾರ್ಥಗಳು

ಆಯುರ್ವೇದದ ಪ್ರಕಾರ, ಸಿಟ್ರಸ್ ಹಣ್ಣು(Citrus) ಮತ್ತು ತರಕಾರಿಗಳು ದೇಹದಲ್ಲಿ ಪಿತ್ತ ದೋಷವನ್ನು ಹೆಚ್ಚಿಸುವ ಕೆಲಸ ಮಾಡುತ್ತವೆ. ದೇಹದಲ್ಲಿ ಪಿತ್ತರಸದ ಹೆಚ್ಚಳದಿಂದಾಗಿ, ರಕ್ತದಲ್ಲಿ ಕೊಳೆಯು ಶೇಖರಣೆಯಾಗಲು ಪ್ರಾರಂಭಿಸುತ್ತೆ, ಇದರಿಂದಾಗಿ ಅನೇಕ ರೀತಿಯ ಚರ್ಮದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಅಂತಹ ವಸ್ತುಗಳ ಸೇವನೆಯನ್ನು ಕಡಿಮೆ ಮಾಡಿ.

ಬೆಲ್ಲ (Jaggery)

ಆಯುರ್ವೇದದ ಪ್ರಕಾರ, ಬೆಲ್ಲದ ಸೇವನೆಯು ಚರ್ಮದ ಸಮಸ್ಯೆಗಳ ರೋಗಿಗಳಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು, ಯಾಕಂದ್ರೆ ಬೆಲ್ಲದ ಸೇವನೆ ದೇಹದಲ್ಲಿ ಶಾಖವನ್ನು ಸೃಷ್ಟಿಸುತ್ತೆ. ಇದು ತುರಿಕೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತೆ. 
 

click me!