Latest Videos

ರಾತ್ರಿ ಮಲಗುವ ಮುನ್ನ ಒಂದು ಬೆಳ್ಳುಳ್ಳಿ ಎಸಳು ತಿಂದ್ರೆ ದೇಹದಲ್ಲಾಗುವ ಬದಲಾವಣೆಗಳೇನು ಗೊತ್ತಾ?

First Published May 25, 2024, 6:59 PM IST

ಅಡುಗೆಯಲ್ಲಿ garlic use ಬಳಕೆ ಮಾಡೋದರಿಂದ food taste ಹೆಚ್ಚಾಗುತ್ತದೆ. ಇದರ ಜೊತೆಗೆ ಆಹಾರದ ಪರಿಮಳವೂ ಹೆಚ್ಚಾಗುತ್ತದೆ. ಇದರ ಜೊತೆಯಲ್ಲಿ eating garlic ಅನೇಕ health benefits ಹೊಂದಿದೆ.

ಕೆಮ್ಮ ಅಥವಾ ಶೀತ ಬಂದ್ರೆ ಮನೆಯಲ್ಲಿ ಹಸಿ ಬೆಳ್ಳುಳ್ಳಿ ತಿನ್ನಲು ಸಲಹೆ ನೀಡಲಾಗುತ್ತದೆ. ಕೆಲವು ಭಾಗಗಳಲ್ಲಿ ಬೆಳ್ಳುಳ್ಳಿಯ ಕಷಾಯವನ್ನು ಸಹ ಮಾಡಿಕೊಡಲಾಗುತ್ತದೆ. ಬೆಳ್ಳುಳ್ಳಿ ಸೇವನೆಯಿಂದ ಜೀರ್ಣಶಕ್ತಿಯೂ ಹೆಚ್ಚಳ ಆಗುತ್ತದೆ. ರಾತ್ರಿ ಮಲಗುವ ಮುನ್ನ ಒಂದು ಬೆಳ್ಳುಳ್ಳಿ ಎಸಳು ಸೇವಿಸಿದ್ರೆ ದೇಹದಲ್ಲಿ ಹಲವು ಆರೋಗ್ಯಕರ ಬದಲಾವಣೆಗಳು ಆಗುತ್ತವೆ.

ಬೆಳ್ಳುಳ್ಳಿ ಸೇವನೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಳ್ಳುಳ್ಳಿಯಲ್ಲಿ  ರಂಜಕ, ಸತು, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಂನಂತಹ ಅಂಶಗಳನ್ನು ಹೊಂದಿದ್ದು, ಇದು ಔಷಧೀಯವಾಗಿಯೂ ಕೆಲಸ ಮಾಡುತ್ತದೆ. ಅನೇಕ ಔಷಧಿಗಳ ತಯಾರಿಕೆಯಲ್ಲಿಯೂ ಬೆಳ್ಳುಳ್ಳಿಯನ್ನು ಬಳಕೆ ಮಾಡಲಾಗುತ್ತದೆ.

ಹಲವು ಆರೋಗ್ಯಕರ ಪ್ರಯೋಜನೆಗಳನ್ನು ಹೊಂದಿರುವ ಬೆಳ್ಳುಳ್ಳಿಯನ್ನು ಹಲವು ಬಗೆಗಳಲ್ಲಿ ಬಳಕೆ ಮಾಡಲಾಗುತ್ತದೆ. ತೂಕ ಇಳಿಕೆ ಮಾಡೋರು ಸಹ ಬೆಳ್ಳುಳ್ಳಿಯನ್ನು ತಮ್ಮ ಆಹಾರದಲ್ಲಿ ನಿಯಮಿತವಾಗಿ ಬಳಸುತ್ತಾರೆ. ಅದೇ  ರಾತ್ರಿ ಮಲಗುವ ಮುನ್ನ ಒಂದು ಬೆಳ್ಳುಳ್ಳಿ ಎಸಳು ತಿಂದ್ರೆ ಏನಾಗುತ್ತೆ ಎಂಬುದರ ಮಾಹಿತಿ ಇಲ್ಲಿದೆ.

1.ರಾತ್ರಿ ಮಲಗುವ ಮುನ್ನ ಒಂದು ಬೆಳ್ಳುಳ್ಳಿ ಎಸಳು ಸೇವನೆ ಮಾಡೋದರಿಂದ ದೇಹದಲ್ಲಿನ ಪ್ರತಿನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸೋದರ ಜೊತೆಗೆ ಬ್ಯಾಕ್ಟಿರಿಯಾ, ಕರುಳಿನಲ್ಲಿರುವ ಹುಳುಗಳನ್ನು ನಾಶಗೊಳಿಸುವ ನಿಟ್ಟಿನಲ್ಲಿ ಬೆಳ್ಳುಳ್ಳಿ ಕೆಲಸ ಮಾಡುತ್ತದೆ

2.ಉತ್ಕರ್ಷಣ ನಿರೋಧಕವಾಗಿ ಬೆಳ್ಳುಳ್ಳಿ ಕೆಲಸ ಮಾಡೋದರಿಂದ ದೇಹಕ್ಕೆ ತಗಲುಬಹುದಾದ ರೋಗಗಳ ವಿರುದ್ಧ ಹೋರಾಟ ನಡೆಸುತ್ತದೆ. ರಾತ್ರಿ ಅತಿಯಾದ ಮಸಾಲೆಯುಕ್ತ ಆಹಾರ ಸೇವಿಸಿದ್ದರೆ ಮಲಗುವ ಮುನ್ನ ಬೆಳ್ಳುಳ್ಳಿ ಎಸಳು ತಿನ್ನೋದು ಉತ್ತಮ. ದೇಹ ವಿಶ್ರಾಂತಿಯಲ್ಲಿದ್ದಾಗ ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಕೆಲಸವನ್ನು ಬೆಳ್ಳುಳ್ಳಿ ಮಾಡುತ್ತದೆ

3.ನೀವು ಉರಿಯೂತ ಅಥವಾ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ರೆ ಬೆಳ್ಳುಳ್ಳಿ ಸೇವಿಸಲು ಸಲಹೆ ನೀಡಲಾಗುತ್ತದೆ. ಪ್ರತಿದಿನ ರಾತ್ರಿ ಬೆಳ್ಳುಳಿ ಸೇವನೆಯಿಂದ ಇಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದಾಗಿದೆ. ಹಸಿಯಾದ ಬೆಳ್ಳುಳ್ಳಿ ಸೇವನೆ ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದಾಗಿದೆ.

4.ರಾತ್ರಿ ಬೆಳ್ಳುಳ್ಳಿ ಸೇವನೆ ನಿದ್ದೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಬೆಳ್ಳುಳ್ಳಿ ಸೇವನೆ ದೇಹಕ್ಕೆ ವಿಶ್ರಾಂತಿ ನೀಡುವ ಗುಣವನ್ನು ಹೊಂದಿದೆ. ಇದು ಸುಖ ನಿದ್ದೆಗೆ ಸಹಾಯ ಮಾಡುತ್ತದೆ. ಹಾಗಂತ ಅತಿಯಾಗಿ ಸೇವನೆ ಮಾಡಿದ್ರೆ ಅದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. 

click me!