ಚಿಲ್ಡ್ ಬಿಯರ್, ಕೋಲ್ಡ್ ನೀರು... ಬೇಸಿಗೆಯಲ್ಲಿ ಹೃದಯಾಘಾತಕ್ಕೆ ಇವೂ ಆಗಬಹುದು ಕಾರಣ

First Published | May 21, 2024, 3:05 PM IST

ಬೇಸಿಗೆಯಲ್ಲಿ ನಿಮ್ಮ ಹೃದಯದ ಮೇಲೆ ನೇರವಾಗಿ ಪರಿಣಾಮ ಬೀರುವ ಕೆಲವು ಸಾಮಾನ್ಯ ತಪ್ಪುಗಳಿವೆ. ಅವುಗಳನ್ನು ನೀವು ಮಾಡದೇ ಇದ್ದರೆ ಬೇಸಿಗೆಯಲ್ಲಿ ಹೃದಯಾಘಾತ ಆಗೋದನ್ನು ತಪ್ಪಿಸಬಹುದು. 
 

ಬೇಸಿಗೆಯಲ್ಲಿ, ನಾವು ಆರೋಗ್ಯದ ಬಗ್ಗೆ ಗಮನ ಹರಿಸುವುದಿಲ್ಲ, ಇದು ಕೆಲವೊಮ್ಮೆ ಹೃದಯಾಘಾತಕ್ಕೆ (Heart Attack) ಕಾರಣವಾಗಬಹುದು. ಬೇಸಿಗೆಯಲ್ಲಿ, ದೇಹ ತನ್ನ ಸಾಮಾನ್ಯ ತಾಪಮಾನವನ್ನು ಕಾಪಾಡಿಕೊಳ್ಳಲು ಹೆಚ್ಚು ಶ್ರಮಿಸಬೇಕಾಗುತ್ತದೆ. ಇದು ಹೃದಯ (Heart), ಶ್ವಾಸಕೋಶ (Lungs) ಮತ್ತು ಮೂತ್ರಪಿಂಡಗಳ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡುತ್ತದೆ. ಅಂದರೆ, ನೀವು ಈಗಾಗಲೇ ಹೃದ್ರೋಗವನ್ನು ಹೊಂದಿದ್ದರೆ, ಹೆಚ್ಚಿನ ಶಾಖದಿಂದ ಅಪಾಯ ಮತ್ತಷ್ಟು ಹೆಚ್ಚಾಗಬಹುದು.

ಅತಿಯಾದ ಬೆವರುವಿಕೆಯಿಂದ (sweatting), ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತೆ. ಅಂತಹ ಪರಿಸ್ಥಿತಿಯಲ್ಲಿ, ಸಾಕಷ್ಟು ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನ ಕೊರತೆ ಕಡಿಮೆಯಾಗುತ್ತದೆ. ರಕ್ತದೊತ್ತಡವನ್ನು ಹಠಾತ್ ಕಡಿಮೆ ಆಗೋದನ್ನು ಸಹ ತಪ್ಪಿಸಬಹುದು. ಆದ್ದರಿಂದ, ಬೇಸಿಗೆ ದಿನಗಳಲ್ಲಿ ತಂಪಾಗಿರುವುದು ಮತ್ತು ದೇಹದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ.

Tap to resize

ಬಿಸಿಲಿನಲ್ಲಿ ಹೊರಗೆ ಹೋಗುವುದು
ತೀವ್ರ ಶಾಖದಲ್ಲಿ ಬಿಸಿಲಿನಲ್ಲಿ (hot summer) ಹೊರಗೆ ಹೋಗುವುದು ನಿಮ್ಮ ದೇಹವನ್ನು ವಿಪರೀತ ತಾಪಮಾನವನ್ನು ತಡೆದುಕೊಳ್ಳುವಂತೆ ಮಾಡುತ್ತದೆ, ಇದು ಹೃದಯರಕ್ತನಾಳದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.

ಕರಿದ ಆಹಾರ ಪದಾರ್ಥ ಸೇವನೆ
ಬೇಸಿಗೆಯಲ್ಲಿ ಅತಿಯಾಗಿ ಕರಿದ ವಸ್ತುಗಳನ್ನು (fried food)ತಿನ್ನುವುದು ದೇಹಕ್ಕೆ ಹೆಚ್ಚುವರಿ ಕೊಬ್ಬನ್ನು ಒದಗಿಸುತ್ತದೆ, ಇದು ಹೃದಯರಕ್ತನಾಳದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.
 

ನಿಯಮಿತವಾಗಿ ವ್ಯಾಯಾಮ ಮಾಡದಿರುವುದು
ಬೇಸಿಗೆಯಲ್ಲಿ ವ್ಯಾಯಾಮವನ್ನು (exercise) ಬಿಟ್ಟು ಬಿಡುವುದು ನಿಮ್ಮ ಹೃದಯಕ್ಕೆ ಹಾನಿಕಾರಕ. ನಿಯಮಿತ ವ್ಯಾಯಾಮ ಮಾಡುವುದು ಹೃದಯದ ಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.

ನೀರಿನ ಕೊರತೆ
ಬೇಸಿಗೆಯಲ್ಲಿ, ದೇಹದಿಂದ ನೀರಿನ ಅಂಶ ಕಡಿಮೆಯಾಗುವ ಅಪಾಯ ಹೆಚ್ಚು. ಇದು ಹೃದಯಕ್ಕೆ ಹಾನಿಕಾರಕ. ನೀರಿನ ಕೊರತೆಯು ದೇಹದ ಸಮತೋಲಿತ ರಕ್ತ ಪರಿಚಲನೆಗೆ ಅಡ್ಡಿಯಾಗುತ್ತದೆ, ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.

ಚಿಲ್ಡ್ ಬಿಯರ್
ಬೇಸಿಗೆಯಲ್ಲಿ, ಅನೇಕ ಜನರು ಬಾಯಾರಿಕೆಯನ್ನು ನೀಗಿಸಲು ಅತಿಯಾದ ಬಿಯರ್ (chilled beer) ಕುಡಿಯುತ್ತಾರೆ, ಇದು ಹೃದಯಕ್ಕೆ ಹೆಚ್ಚು ಹಾನಿಕಾರಕ. ಇದು ರಕ್ತದೊತ್ತಡವನ್ನು ಹೆಚ್ಚಿಸೋದಲ್ಲದೇ ಹೃದಯರಕ್ತನಾಳದ ಸಮಸ್ಯೆಗಳಿಗೆ ಕಾರಣವಾಗಬಹುದು.

ಕೋಲ್ಡ್ ನೀರು
ತಂಪಾದ ನೀರು (cold water) ಕುಡಿಯುವುದರಿಂದ ನಮ್ಮ ದೇಹದಲ್ಲಿ ತ್ವರಿತ ಪ್ರತಿಕ್ರಿಯೆ ಉಂಟಾಗಬಹುದು, ಇದು ಕೆಲವೇ ಸೆಕೆಂಡುಗಳಲ್ಲಿ ಹೃದಯಾಘಾತದಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ನೀವು ಬೆವರುತ್ತಿದ್ದರೆ ನೀವು ತಣ್ಣೀರು ಕುಡಿಯೋದನ್ನು ತಪ್ಪಿಸಬೇಕು ಮತ್ತು ಅದನ್ನು ಕುಡಿಯುವ ಮೊದಲು ದೇಹದ ತಾಪಮಾನವನ್ನು ಸಾಮಾನ್ಯಗೊಳಿಸಬೇಕು.

Latest Videos

click me!