ಸ್ಟ್ರೆಸ್ ಸ್ಟ್ರೆಸ್ ಅಂತ ಹೆದರಬೇಡಿ, ಅಲ್ಪ ಸ್ವಲ್ಪ ಒತ್ತಡ ಲೈಫಲ್ಲಿರಬೇಕು!

First Published | May 21, 2024, 5:29 PM IST

ಒತ್ತಡವು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹಾಳು ಮಾಡುತ್ತೆ ಅನ್ನೋದು ಗೊತ್ತೆ ಇದೆ. ಆದರೆ ಉತ್ತಮ ಒತ್ತಡವು ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಪ್ರಯೋಜನಗಳೂ ಇವೆಯಂತೆ.
 

ಒತ್ತಡವು ಆರೋಗ್ಯಕ್ಕೆ ತುಂಬಾನೆ ಹಾನಿಕಾರಕವಾಗಿದೆ ಅನ್ನೋದು ನಮಗೆಲ್ಲರಿಗೂ ತಿಳಿದಿದೆ, ಆದರೆ ಸಣ್ಣ ಪುಟ್ಟ ಒತ್ತಡವು ಒಳ್ಳೆಯದು ಎಂದು ತಜ್ಞರು ಹೇಳಿದ್ದಾರೆ ಗೊತ್ತಾ? "ಉತ್ತಮ ಒತ್ತಡ" (good stress) ಎಂದು ಕರೆಯಲ್ಪಡುವ ಒತ್ತಡವು ಯಾವುದೇ ಒಳ್ಳೆಯ ಕೆಲಸವನ್ನು ಮಾಡುವ ಮೊದಲು ಮತ್ತು ಯಾವುದರ ಬಗ್ಗೆಯಾದರೂ ಹೆಚ್ಚು ಉತ್ಸುಕವಾಗುವಾಗ ಉಂಟಾಗುತ್ತದೆ.  ಉತ್ತಮ ಒತ್ತಡವು ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕೆ ಒಳ್ಳೆಯದು. ಉತ್ತಮ ಒತ್ತಡವು ಆರೋಗ್ಯದ ಮೇಲೆ ಅನೇಕ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಇದರ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳೋಣ. 

"ಉತ್ತಮ ಒತ್ತಡ" ಅಂದ್ರೇನು?
 "ಯುಸ್ಟ್ರೆಸ್" ಎಂದು ಕರೆಯುವ ಉತ್ತಮ ಒತ್ತಡವು ನೀವು ಹೆಚ್ಚು ಉತ್ಸುಕರಾದಾಗ ಅನುಭವಿಸುವ ಒಂದು ರೀತಿಯ ಒತ್ತಡವಾಗಿದೆ. ಈ ಸಮಯದಲ್ಲಿ ನಮ್ಮ ನಾಡಿ ಮಿಡಿತ ಹೆಚ್ಚಾಗುತ್ತದೆ ಮತ್ತು ಹಾರ್ಮೋನುಗಳು ಹೆಚ್ಚಾಗುತ್ತವೆ, ಆದರೆ ಇದರಿಂದ ಯಾವುದೇ ರೀತಿಯ ತೊಂದರೆ ಉಂಟಾಗೋದಿಲ್ಲ.  ಕುಟುಂಬ ಯೋಜನೆ ಬಗ್ಗೆ ಒತ್ತಡ, ಹೊಸ ವ್ಯಕ್ತಿಯೊಂದಿಗೆ ಡೇಟಿಂಗ್ ಗೆ (dating) ಹೋಗುವ ಒತ್ತಡ ಅಥವಾ ನಿಮ್ಮ ಜೀವನವನ್ನು ಪ್ರಾರಂಭಿಸುವ ಒತ್ತಡ, ಬಡ್ತಿ ಮತ್ತು ಹೊಸ ಕೆಲಸಕ್ಕೆ ತಯಾರಿ ಮಾಡುವ ಒತ್ತಡ, ಇವೆಲ್ಲವೂ ಉತ್ತಮವಾಗಿದೆ.

Latest Videos


ಈ ಉತ್ತಮ ಒತ್ತಡದ ಪ್ರಯೋಜನಗಳು ಏನೇನು ಅನ್ನೋದನ್ನು ತಿಳಿಯೋಣ
ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ

ಸಂಶೋಧನೆ ಪ್ರಕಾರ, ಅಲ್ಪಾವಧಿಯ ಒತ್ತಡ ಸ್ಮರಣ ಶಕ್ತಿಯ (memory power) ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಪರೀಕ್ಷೆಯ ಕೆಲವು ಸಂದರ್ಭಗಳಲ್ಲಿ ಇದು ಉಪಯುಕ್ತವಾಗಬಹುದು. ನೀವು ಉತ್ಸುಕರಾದಾಗ ಮತ್ತು ಒತ್ತಡಕ್ಕೊಳಗಾದಾಗ, ನೀವು ವಿಷಯಗಳನ್ನು ಹೆಚ್ಚು ಆಳವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೀರಿ. ಹೀಗಾಗಿ, ಇದು ನಿಮ್ಮ ಸ್ಮರಣೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
 

ಫ್ಲೆಕ್ಸಿಬಿಲಿಟಿ ಹೆಚ್ಚಿಸುತ್ತದೆ
ಒತ್ತಡದವನ್ನು ಎದುರಿಸಿದಾಗ, ಅದು ನಿಮ್ಮ ಬಗ್ಗೆ, ನಿಮ್ಮ ಸಾಮರ್ಥ್ಯಗಳ ಬಗ್ಗೆ ಮತ್ತು ನಿಮ್ಮ ಮಿತಿಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಸಾಮರ್ಥ್ಯಗಳನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದಾಗ, ಭವಿಷ್ಯದ ಕಾರ್ಯಗಳನ್ನು ನಿರ್ವಹಿಸಲು ಮತ್ತು ಮುಂಬರುವ ಸಂದರ್ಭಗಳನ್ನು ನಿರ್ವಹಿಸೋದು (flexibility) ಸುಲಭವಾಗುತ್ತೆ. 

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ
ಕೆಟ್ಟ ಒತ್ತಡವು ನಿಮ್ಮ ರೋಗನಿರೋಧಕ ಶಕ್ತಿಯನ್ನು (immunity power) ಹಾನಿಗೊಳಿಸುತ್ತದೆ, ಆದರೆ ಅಲ್ಪಾವಧಿಯ ಒತ್ತಡ ಅಥವಾ ಉತ್ತಮ ಒತ್ತಡವು ಅನಾರೋಗ್ಯ ಮತ್ತು ಗಾಯವನ್ನು ನಿಭಾಯಿಸುವ ನಿಮ್ಮ ದೇಹದ ಸಾಮರ್ಥ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ತಿಳಿಸಿದೆ. ಇದು ದೇಹದಲ್ಲಿ ಕೆಲವು ರೀತಿಯ ಹಾರ್ಮೋನುಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದು ರೋಗನಿರೋಧಕ ಶಕ್ತಿಯನ್ನು ಬೆಂಬಲಿಸುತ್ತದೆ.
 

ಶಕ್ತಿಯನ್ನು ಹೆಚ್ಚಿಸುತ್ತೆ
ಸಕಾರಾತ್ಮಕ ಒತ್ತಡದ (Positive Stress) ಮತ್ತೊಂದು ಪ್ರಯೋಜನವೆಂದರೆ ನಾವು ನಮ್ಮ ಕಂಫರ್ಟ್ ಝೋನ್ ಬಿಟ್ಟು ಹೊರ ಬಂದಾಗ ಅದು ಸಕ್ರಿಯಗೊಳ್ಳುತ್ತದೆ. ಹೊಸ ಸವಾಲನ್ನು ಎದುರಿಸುವಾಗ, ಗುಡ್ ಸ್ಟ್ರೆಸ್ ರಿಯಾಕ್ಟ್ ಮಾಡಲು ನಮ್ಮನ್ನು ಪ್ರೇರೇಪಿಸುತ್ತದೆ. ಅತಿಯಾದ ಉತ್ಸಾಹದಿಂದಾಗಿ ಒಬ್ಬ ವ್ಯಕ್ತಿಯು ಒತ್ತಡವನ್ನು ಅನುಭವಿಸಿದಾಗ, ಅದು ಹೆಚ್ಚಿನ ಶಕ್ತಿಯೊಂದಿಗೆ ಕೆಲಸವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಹೀಗಾಗಿ ಉತ್ತಮ ಒತ್ತಡವು ಶಕ್ತಿ ಮತ್ತು ಚೈತನ್ಯವನ್ನು ಒದಗಿಸುತ್ತದೆ. ಸಕಾರಾತ್ಮಕ ಒತ್ತಡವು (positive stress) ಡೋಪಮೈನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದು ವ್ಯಕ್ತಿಯೊಳಗೆ ವಿಶಿಷ್ಟ ಸಂತೋಷವನ್ನು ಸೃಷ್ಟಿಸುತ್ತದೆ.

ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ
ಉತ್ತಮ ಒತ್ತಡ ಅಥವಾ ಅಲ್ಪಾವಧಿಯ ಒತ್ತಡವು ಮೆದುಳಿನಲ್ಲಿ ನ್ಯೂರೋಟ್ರೋಫಿನ್ ಗಳು ಎಂಬ ರಾಸಾಯನಿಕಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಮೆದುಳಿನ ನರಕೋಶಗಳ ನಡುವಿನ ಸಂಪರ್ಕಗಳನ್ನು ಬಲಪಡಿಸುತ್ತದೆ. ಹೀಗಾಗಿ, ಮೆದುಳಿನ ಶಕ್ತಿಯನ್ನು (memory power) ಹೆಚ್ಚಿಸುವ ಮೂಲಕ ಇದು ಮಾನಸಿಕ ಆರೋಗ್ಯ ಚೆನ್ನಾಗಿರುವಂತೆ ನೋಡಿಕೊಳ್ಳುತ್ತೆ. 

ಉತ್ಪಾದಕತೆ ಹೆಚ್ಚುತ್ತೆ
ಯುಸ್ಟ್ರೆಸ್ ಅಂದರೆ ಉತ್ತಮ ಹಾರ್ಮೋನುಗಳು ಜನರನ್ನು ಉತ್ತಮವಾಗಿ ಏನನ್ನಾದರೂ ಮಾಡಲು, ಗುರಿಗಳನ್ನು ಸಾಧಿಸುವತ್ತ ಕೆಲಸ ಮಾಡಲು ಪ್ರೇರೇಪಿಸುತ್ತದೆ. ಉತ್ತಮ ಒತ್ತಡ ಅತ್ಯುತ್ತಮವಾದದ್ದನ್ನು ನೀಡಲು ನಿಮ್ಮ ಮೇಲೆ ಒತ್ತಡ ಹೇರುತ್ತದೆ, ಮತ್ತು ನೀವು ಯಾವುದೇ ಕೆಲಸವನ್ನು ಹೆಚ್ಚು ಪರಿಣಾಮಕಾರಿಯಾಗಿ ಪೂರ್ಣಗೊಳಿಸುತ್ತೀರಿ. ಹೀಗಾಗಿ, ಇದು ಕೆಲಸ, ಶಿಕ್ಷಣ ಅಥವಾ ವೈಯಕ್ತಿಕ ಚಟುವಟಿಕೆಗಳಂತಹ ಜೀವನದ ವಿವಿಧ ಅಂಶಗಳಲ್ಲಿ ಉತ್ಪಾದಕತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

click me!