Health Tips: ಈ ಜನರಲ್ಲಿ ಕೆಟ್ಟ ಕೊಲೆಸ್ಟ್ರಾಲ್ 100 ಪಟ್ಟು ವೇಗದಲ್ಲಿ ಹೆಚ್ಚುತ್ತೆ

First Published Oct 4, 2022, 11:49 AM IST

ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ನಿಂದಾಗಿ, ನೀವು ಹೃದ್ರೋಗ, ರಕ್ತನಾಳ ಮತ್ತು ಅಪಧಮನಿ ಕಾಯಿಲೆಗಳು, ಹೃದಯಾಘಾತ ಮತ್ತು ಪಾರ್ಶ್ವವಾಯು ಮೊದಲಾದ ಸಮಸ್ಯೆಗಳಿಗೆ ತುತ್ತಾಗಬಹುದು. ನೀವು ಹೆಚ್ಚು ಕೊಬ್ಬಿನ ಆಹಾರ ಸೇವಿಸಿದ್ರೆ ಮತ್ತು ಯಾವುದೇ ರೀತಿಯ ದೈಹಿಕ ಚಟುವಟಿಕೆ ಮಾಡದೇ ಇದ್ರೆ, ನಿಮಗೆ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚಿದೆ. ಯಾವ ಜನರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತೆ ಅನ್ನೋದನ್ನು ತಿಳಿಯೋಣ. 

ದೇಹದಲ್ಲಿ ಕೊಲೆಸ್ಟ್ರಾಲ್ ನ (cholesterol) ಹೆಚ್ಚಳವು ಅನೇಕ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದೆ. ಇದರರ್ಥ ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ನಿಮ್ಮನ್ನು ಹೃದ್ರೋಗ, ರಕ್ತನಾಳ ಮತ್ತು ಅಪಧಮನಿ ಕಾಯಿಲೆ, ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಬೇಗನೆ ತುತ್ತಾಗುವಂತೆ ಮಾಡುತ್ತದೆ. ಹೃದಯವನ್ನು ಆರೋಗ್ಯಕರವಾಗಿಡಲು ಮತ್ತು ಇತರ ಹಾನಿಕಾರಕ ರೋಗಗಳನ್ನು ತಪ್ಪಿಸಲು ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುವುದು ಬಹಳ ಮುಖ್ಯ.

ಕೊಲೆಸ್ಟ್ರಾಲ್ ಎಂದರೇನು? 
ಕೊಲೆಸ್ಟ್ರಾಲ್ ರಕ್ತನಾಳಗಳಲ್ಲಿ ಕಂಡುಬರುವ ಮೇಣದಂತಹ ಅಂಟು ಪದಾರ್ಥವಾಗಿದೆ, ಇದು ನೀವು ತಿನ್ನುವ ಆಹಾರಗಳಿಂದ ತಯಾರಾಗುತ್ತದೆ,  ಯಕೃತ್ತು ಸಹ ಅದನ್ನು ಉತ್ಪಾದಿಸುತ್ತದೆ. ಒಟ್ಟಾರೆಯಾಗಿ, ಆರೋಗ್ಯವಾಗಿರಲು ದೇಹದಿಂದ ಅದನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ.

ಕೊಲೆಸ್ಟ್ರಾಲ್ ನಲ್ಲಿ ಎರಡು ವಿಧಗಳಿವೆ, Good cholesterol ಅವು ದೇಹದ ಕೆಲವು ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಮತ್ತು ಎರಡನೆಯದು Bad cholesterol, ಇದರಿಂದಾಗಿ ನೀವು ವಿವಿಧ ಆರೋಗ್ಯ ಸಮಸ್ಯೆಗಳನ್ನು ಹೊಂದುವ ಸಾಧ್ಯತೆ ಹೆಚ್ಚಾಗಿದೆ. ಆದುದರಿಂದ ಬ್ಯಾಡ್ ಕೊಲೆಸ್ಟ್ರಾಲ್ ಕಡಿಮೆ ಮಾಡೋದು ಮುಖ್ಯ.

ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಕಾರಣಗಳು
ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಕೆಲವು ಆರೋಗ್ಯ ಪರಿಸ್ಥಿತಿಗಳು, ನಿಮ್ಮ ಲೈಫ್ ಸ್ಟೈಲ್ ಮತ್ತು ಕುಟುಂಬ ಇತಿಹಾಸ ಸಹ ಕೊಲೆಸ್ಟ್ರಾಲ್ ಅಪಾಯವನ್ನು ಹೆಚ್ಚಿಸುತ್ತೆ. ವಯಸ್ಸು ಅಥವಾ ಕುಟುಂಬದ ಇತಿಹಾಸದಂತಹ ಈ ಕೆಲವು ಅಪಾಯಕರ ಅಂಶಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. 

ಸ್ಯಾಚುರೇಟೆಡ್ ಕೊಬ್ಬು ಕೊಲೆಸ್ಟ್ರಾಲ್ ಹೆಚ್ಚಿಸುತ್ತೆ
ಸ್ಯಾಚುರೇಟೆಡ್ ಕೊಬ್ಬು ಮತ್ತು ಟ್ರಾನ್ಸ್ ಕೊಬ್ಬನ್ನು ಹೆಚ್ಚು ಸೇವಿಸುವವರು ಕೊಲೆಸ್ಟ್ರಾಲ್ ಸಮಸ್ಯೆ ಹೊಂದುವ ಅಪಾಯ ಹೆಚ್ಚು ಹೊಂದಿದ್ದಾರೆ ಎಂದು ಸಿಡಿಸಿ ತಿಳಿಸಿದೆ. ಸ್ಯಾಚುರೇಟೆಡ್ ಕೊಬ್ಬು ಎಂದರೆ ಅದರಲ್ಲಿ ತುಪ್ಪ, ಬೆಣ್ಣೆ, ಕೇಕ್, ಮಾಂಸಗಳು, ಬಿಸ್ಕತ್ತುಗಳು, ಚೀಸ್ ನಂತಹ ವಸ್ತುಗಳು ಸೇರಿವೆ. ಇವು ಹೃದ್ರೋಗಗಳ ಅಪಾಯ ಹೆಚ್ಚಿಸಬಹುದು.
 

ವ್ಯಾಯಾಮ ಮಾಡದ ಜನರು
ಆರೋಗ್ಯಕರ ಮತ್ತು ದೀರ್ಘಾಯುಷ್ಯ ಪಡೆಯಲು, ನೀವು ಪ್ರತಿದಿನ ಕನಿಷ್ಠ ಇಪ್ಪತ್ತು ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕು. ವ್ಯಾಯಾಮ ಮಾಡದಿದ್ದರೆ ಅಥವಾ ಯಾವುದೇ ರೀತಿಯ ದೈಹಿಕ ಚಟುವಟಿಕೆ ಮಾಡದಿದ್ದರೆ, ರಕ್ತದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಲು ಪ್ರಾರಂಭಿಸುವ ಸಾಧ್ಯತೆ ಇದೆ. ಬೊಜ್ಜು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತೆ ಎನ್ನಲಾಗಿದೆ.
 

ಸ್ಮೋಕ್(Smoke) ಮಾಡುವವರಿಗೆ ಹೆಚ್ಚಿನ ಅಪಾಯ
ಧೂಮಪಾನವು ನಿಮ್ಮ ರಕ್ತನಾಳಗಳನ್ನು ಹಾನಿಗೊಳಿಸಬಹುದು, ಅವುಗಳಲ್ಲಿ ಕೊಬ್ಬು ಸಂಗ್ರಹವಾಗುವ ಸಾಧ್ಯತೆ ಕೂಡ ಹೆಚ್ಚಿದೆ. ಸ್ಮೋಕ್ ಮಾಡೋದ್ರಿಂದ ಹೆಚ್ಚಿನ ಸಾಂದ್ರತೆಯ ಲಿಪೋಪ್ರೋಟೀನ್ ಅಂದರೆ ಉತ್ತಮ ಕೊಲೆಸ್ಟ್ರಾಲ್ ಸಹ ಕಡಿಮೆಯಾಗುತ್ತೆ.

ಹೈಪರ್ ಕೊಲೆಸ್ಟೆರೋಲೆಮಿಯಾ
ಕೆಲವು ಜನರು ಫ್ಯಾಮಿಲಿ ಹೈಪರ್ ಕೊಲೆಸ್ಟೆರೋಲೆಮಿಯಾ (ಎಫ್ಎಚ್) ಎಂದು ಕರೆಯಲ್ಪಡುವ ಆನುವಂಶಿಕ ಸಮಸ್ಯೆಯನ್ನು ಹೊಂದಿರುತ್ತಾರೆ. ಅತ್ಯಂತ ಕಡಿಮೆ ಸಾಂದ್ರತೆಯ ಲಿಪೋಪ್ರೋಟೀನ್ (ಎಲ್ಡಿಎಲ್) ಅಂದರೆ ಕೆಟ್ಟ ಕೊಲೆಸ್ಟ್ರಾಲ್ನಿಂದಾಗಿ ಈ ಸಮಸ್ಯೆ ಚಿಕ್ಕ ವಯಸ್ಸಿನಲ್ಲಿಯೇ ಪ್ರಾರಂಭವಾಗುತ್ತದೆ. ಇದಕ್ಕೆ ಚಿಕಿತ್ಸೆ ನೀಡದಿದ್ದರೆ, ಅದು ವಯಸ್ಸಾದಂತೆ ಹೆಚ್ಚಾಗುತ್ತಲೇ ಹೋಗುತ್ತದೆ. 

ವಯಸ್ಸು(Age) ಕೂಡ ಮುಖ್ಯವಾಗುತ್ತೆ
ವಯಸ್ಸಾದಂತೆ ಕೊಲೆಸ್ಟ್ರಾಲ್ ಅಪಾಯ ಹೆಚ್ಚಾಗುತ್ತದೆ. ವಯಸ್ಸಾದಂತೆ, ದೇಹವು ಸಣ್ಣದಾಗಿದ್ದಾಗ ರಕ್ತದಿಂದ ಕೊಲೆಸ್ಟ್ರಾಲ್ ತೆರವುಗೊಳಿಸಲು ಸಾಧ್ಯವಾಗುವುದಿಲ್ಲ. ಸುಮಾರು 55 ನೇ ವಯಸ್ಸಿನಲ್ಲಿ, ಮಹಿಳೆಯರು ಪುರುಷರಿಗಿಂತ ಕಡಿಮೆ ಮಟ್ಟದ ಕೆಟ್ಟ ಕೊಲೆಸ್ಟ್ರಾಲ್ ಹೊಂದಿರುತ್ತಾರೆ.

click me!