Published : Mar 04, 2025, 04:34 PM ISTUpdated : Mar 05, 2025, 11:52 AM IST
ಮಗುವಿನ ಹೊಕ್ಕುಳ ಬಳ್ಳಿಗೆ ಸಂಬಂಧಿಸಿದಂತೆ ಕೆಲವೊಂದು ವಿಲಕ್ಷಣವಾದ ನಂಬಿಕೆಗಳು ಹಳ್ಳಿಯ ಕಡೆ ಇವೆ. ಕೆಲವು ಮಕ್ಕಳಾಗದೆ ಇರುವವರಿಗೆ ಈ ಹೊಕ್ಕಳ ಬಳ್ಳಿಯನ್ನು ಅವರಿಗೆ ತಿಳಿಯದಂತೆ ನೀಡುವುದರಿಂದ ಅವರಿಗೂ ಮಗುವಾಗುತ್ತದೆ ಎಂದು ಜನ ನಂಬುತ್ತಾರೆ. ಮಕ್ಕಳು ಹುಟ್ಟಿದ ತಕ್ಷಣ ಹೊಕ್ಕಳ ಬಳ್ಳಿಯನ್ನು ಕತ್ತರಿಸಲಾಗುತ್ತದೆ. ಈ ಹೊಕ್ಕಳ ಬಳ್ಳಿಯಲ್ಲಿ ಔಷಧಿಯ ಗುಣ ಇದೆ ಎಂಬ ನಂಬಿಕೆ ಅನೇಕರದ್ದು, ಹೀಗಾಗಿ ಈ ಹೊಕ್ಕಳ ಬಳ್ಳಿಯನ್ನು ಕತ್ತರಿಸಿ ಮಕ್ಕಳಿಗೆ ಕಟ್ಟುವ ತಾಯಿತದಲ್ಲಿ ಹಾಕ್ತಾರಂತೆ ಅದು ಏಕೆ ಅದರ ಹಿಂದಿರುವ ಜನರ ನಂಬಿಕೆ ಏನು ಅಂತ ಈ ಲೇಖನದಲ್ಲಿ ತಿಳಿಯೋಣ
ಹೊಕ್ಕಳು ಬಳ್ಳಿ ತಾಯಿತ: ಮಕ್ಕಳು ಹುಟ್ಟಿದ ತಕ್ಷಣ, ತುಂಬಾ ಜನ ಹೊಕ್ಕಳು ಬಳ್ಳಿಯನ್ನು ಕತ್ತರಿಸಿ ತಾಯಿತದಲ್ಲಿ ಹಾಕ್ತಾರೆ. ಇದು ಒಂದು ಸಂಪ್ರದಾಯ ಅಷ್ಟೇ ಅಂತಾ ತುಂಬಾ ಜನ ಅಂದುಕೊಂಡಿದ್ದಾರೆ. ಆದ್ರೆ, ಹೀಗೆ ಮಾಡೋವುದರ ಹಿಂದೆ ಸೈನ್ಸ್ ಕೂಡ ಇದೆ. ಹೊಕ್ಕಳು ಬಳ್ಳಿಯಿಂದ ತಾಯಿತ ಮಾಡಿ ಮಕ್ಕಳಿಗೆ ಹಾಕೋದ್ರಿಂದ ಏನೆಲ್ಲಾ ವೈದ್ಯಕೀಯ ಪ್ರಯೋಜನಗಳಿವೆ ಅಂತ ಈಗ ತಿಳ್ಕೊಳ್ಳೋಣ. ಹಳ್ಳಿಗಳಲ್ಲಿ ಮಕ್ಕಳಿಗೆ ಹೊಕ್ಕಳು ಬಳ್ಳಿಯಿಂದ ತಾಯಿತ ಕಟ್ಟಿ ಹಾಕ್ತಾರೆ. ಚಿಕ್ಕ ಮಕ್ಕಳಿಗೆ ತಾಯಿತದಲ್ಲಿ ಭದ್ರ ಮಾಡಿ ಇದನ್ನು ಹಾಕ್ತಾರೆ. ಆದರೆ ಇದನ್ನ ಸುಮ್ನೆ ಹಾಕಲ್ಲ. ಅದಕ್ಕೆ ಬೇರೆ ಕಾರಣಗಳಿವೆ. ಹೀಗೆ ಮಾಡೋದ್ರಿಂದ ಮಕ್ಕಳ ದೇಹ ತಂಪಾಗಿರುತ್ತೆ.
26
ಹೊಕ್ಕಳು ಬಳ್ಳಿ:
ಹುಟ್ಟಿದ ಮಕ್ಕಳ ಹೊಟ್ಟೆನ ಚೆನ್ನಾಗಿ ನೋಡಿದ್ರೆ ಗೊತ್ತಾಗುತ್ತೆ. ಅವರ ಹೊಕ್ಕಳಲ್ಲಿ ಸ್ವಲ್ಪ ಹೊಕ್ಕಳು ಬಳ್ಳಿ ಅಂಟಿಕೊಂಡಿರುತ್ತೆ. ಸ್ವಲ್ಪ ದಿನ ಆದ್ಮೇಲೆ ಅದು ಒಣಗಿ ಉದುರಿ ಹೋಗುತ್ತೆ. ಹೀಗೆ ಒಣಗಿದ ಹೊಕ್ಕಳು ಬಳ್ಳಿನ ಹಳ್ಳಿಯ ಕಡೆ ಹಾಗೂ ಕೆಲವು ಪ್ರದೇಶಗಳಲ್ಲಿ ಜನ ತಾಯಿತದಲ್ಲಿ ಹಾಕ್ತಾರೆ.
36
ಹೊಕ್ಕಳು ಬಳ್ಳಿ ತಾಯಿತದ ಹಿನ್ನೆಲೆ
ಹೀಗೆ ಹೊಕ್ಕಳ ಬಳ್ಳಿಯನ್ನು ತಾಯಿತದಲ್ಲಿ ಹಾಕುವುದಕ್ಕೆ ಹಲವು ಕಾರಣಗಳಿವೆ. ಮಕ್ಕಳು ದೊಡ್ಡವರಾದ ಮೇಲೆ ಏನಾದ್ರೂ ಭಯಂಕರ ಕಾಯಿಲೆ ಬಂದ್ರೆ, ಅವಾಗ ಅದರಿಂದ ಸರಿ ಹೋಗೋಕೆ ತಾಯಿತದಲ್ಲಿ ಇಟ್ಟಿರೋ ಹೊಕ್ಕಳು ಬಳ್ಳಿಯನ್ನು ತೆಗೆದು ಪುಡಿ ಮಾಡಿ ಕೊಡ್ತಾರಂತೆ. ಅದ್ರಿಂದ ಕಾಯಿಲೆ ವಾಸಿ ಆಗುತ್ತೆ ಎಂಬ ನಂಬಿಕೆ ಜನರಲ್ಲಿದೆ.
46
ಹೊಕ್ಕಳು ಬಳ್ಳಿ ಉದ್ದ:
ಪ್ರತಿ ಮಗುವಿನ ಹೊಕ್ಕಳು ಬಳ್ಳಿಯ ಉದ್ದ ಬೇರೆ ಬೇರೆ ಇರುತ್ತೆ. ಸರಿಸುಮಾರು 20 ರಿಂದ 24 ಇಂಚು ಹೊಕ್ಕಳು ಬಳ್ಳಿ ಇರಬಹುದು. ಆದ್ರೆ ಕೆಲ ಮಕ್ಕಳಿಗೆ ಅದಕ್ಕಿಂತ ಉದ್ದ ಇರುತ್ತೆ.
56
ಸಂಶೋಧನೆಗಳು:
ಮನುಷ್ಯನ ದೇಹದ ಹಲವು ಅಂಗಗಳು ಭ್ರೂಣ ಮುಂತಾದವು ಬೇರೆ ಬೇರೆ ಕಾಯಿಲೆಗಳಿಗೆ ಔಷಧಿಯಾಗುವುದರ ಬಗ್ಗೆ ಈಗಾಗಲೇ ಸಂಶೋಧನೆಗಳು ಸಾಬೀತುಪಡಿಸಿವೆ. ಕೆಲವು ಸಂಶೋಧಕರು ನರಗಳ ಸಂಬಂಧಿತ ಸಮಸ್ಯೆಗಳು, ಅಂಗಾಂಶ ನಷ್ಟದಂತಹ ರಕ್ತ ಸಂಬಂಧಿತ ಕಾಯಿಲೆಗಳು ಸೇರಿದಂತೆ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಹೊಕ್ಕಳು ಬಳ್ಳಿ ಸ್ಟೆಮ್ ಸೆಲ್ಸ್ ಉಪಯೋಗವಾಗುತ್ತೆ ಅಂತ ಹೇಳ್ತಾರೆ.
66
ಕಾಯಿಲೆ ವಾಸಿಯಾಗುತ್ತಾ?
ಮಕ್ಕಳು ದೊಡ್ಡವರಾದ ಮೇಲೆ ಅವರಿಗೆ ಕ್ಯಾನ್ಸರ್ ತರ ಭಯಂಕರ ಕಾಯಿಲೆ ಬಂದ್ರೆ ಹೊಕ್ಕಳು ಬಳ್ಳಿಯಲ್ಲಿ ಕಾಣಿಸೋ ಮೂಲ ಕೋಶಗಳಿಂದ ಚಿಕಿತ್ಸೆ ಮಾಡಬಹುದು ಅಂತ ವೈದ್ಯಕೀಯದಲ್ಲಿ ಹೇಳ್ತಾರೆ. ಆದರೆ ಸಂಶೋಧನೆಗೂ ಮೊದಲೇ ನಮ್ಮ ಹಳ್ಳಿಗರು ಈ ಸಂಪ್ರದಾಯವನ್ನು ಪಾಲಿಸಿ ಹೊಕ್ಕುಳ ಬಳ್ಳಿಯನ್ನು ಜೋಪಾನವಾಗಿ ಇಡುತ್ತಾರೆ ಎಂದರೆ ಅವರ ತಿಳುವಳಿಕೆಗೆ ಧನ್ಯವಾದ ಹೇಳಲೇಬೇಕು. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.