Testicular Cancer: ಪುರುಷರಲ್ಲಿ ಕಂಡು ಬರುವ ಈ ಅಪಾಯಕಾರಿ ಕ್ಯಾನ್ಸರ್ ಪತ್ತೆ ಹೇಗೆ?

ವೃಷಣ ಕ್ಯಾನ್ಸರ್ ಅಪಾಯ ಪುರುಷರಲ್ಲಿ ಮಾತ್ರ ಕಂಡು ಬರುವಂತಹ ಸಮಸ್ಯೆಯಾಗಿದೆ. ನಿಮಗೆ ಈ ಸಮಸ್ಯೆ ಇದೆಯೇ? ಇಲ್ಲವೇ ಅನ್ನೋದನ್ನು ಕೇವಲ 5 ನಿಮಿಷಗಳಲ್ಲಿ ಕಂಡುಹಿಡಿಯಬಹುದು. ಅದು ಹೇಗೆಂದು ತಿಳಿಯೋಣ.

ವೃಷಣ ಕ್ಯಾನ್ಸರ್(Testicular cancer) ವೃಷಣಗಳಲ್ಲಿ ಪ್ರಾರಂಭವಾಗುತ್ತೆ, ಇದನ್ನು ಟೆಸ್ಟ್ಸ್ ಎಂದೂ ಕರೆಯಲಾಗುತ್ತೆ. ಪುರುಷನ ಜನನಾಂಗದ ಕೆಳಗೆ ಚರ್ಮದ ಸಡಿಲ ಚೀಲವಿದೆ, ಇದನ್ನು ವೃಷಣ ಎಂದು ಕರೆಯಲಾಗುತ್ತೆ. ವೃಷಣಗಳು ಚೀಲದ ಒಳಗೆ ಇರುತ್ತವೆ, ಇದು ವೀರ್ಯಾಣು ಮತ್ತು ಟೆಸ್ಟೋಸ್ಟೆರಾನ್ ಅನ್ನು ಉತ್ಪಾದಿಸುತ್ತೆ. ವೃಷಣ ಕ್ಯಾನ್ಸರ್ ಎಲ್ಲಾ ವಯಸ್ಸಿನ ಪುರುಷರಿಗೆ ಸಂಭವಿಸಬಹುದು, ಆದರೆ 15 ರಿಂದ 45 ವರ್ಷಗಳ ನಡುವೆ ಅಪಾಯ ಹೆಚ್ಚು.

ವೃಷಣಗಳಲ್ಲಿ ಗೆಡ್ಡೆ(Tumour) ಅಥವಾ ಊತವು ಈ ಕ್ಯಾನ್ಸರ್ನ ಮೊದಲ ಗೋಚರಿಸುವ ಚಿಹ್ನೆಯಾಗಿದೆ. ಚಿಕಿತ್ಸೆ ನೀಡದಿದ್ದರೆ, ಕ್ಯಾನ್ಸರ್ ಕೋಶಗಳು ದೇಹದ ಇತರ ಭಾಗಗಳಿಗೆ ವೇಗವಾಗಿ ಹರಡಬಹುದು. ವೃಷಣ ಕ್ಯಾನ್ಸರ್ ನ ಅತ್ಯಂತ ಸಾಮಾನ್ಯ ವಿಧವೆಂದರೆ ಜೆರ್ಮ್ ಸೆಲ್ ವೃಷಣ ಕ್ಯಾನ್ಸರ್. ಈ ಜೀವಕೋಶಗಳು ದೇಹದಲ್ಲಿ ವೀರ್ಯವನ್ನು ಉತ್ಪತ್ತಿ ಮಾಡುತ್ತವೆ.


ವೃಷಣ ಕ್ಯಾನ್ಸರ್ ನ ಚಿಹ್ನೆಗಳು ಮತ್ತು ರೋಗಲಕ್ಷಣಗಳು ಹೀಗಿವೆ 
ಒಂದು ಅಥವಾ ಎರಡೂ ವೃಷಣಗಳಲ್ಲಿ ಗೆಡ್ಡೆ ಅಥವಾ ಊತ
ವೃಷಣದಲ್ಲಿ ಭಾರವಾಗುವಿಕೆ 
ಕಿಬ್ಬೊಟ್ಟೆ ಅಥವಾ ಪೆಲ್ವಿಕ್ ಪ್ರದೇಶದಲ್ಲಿ ನೋವು(Stomach pain)
ವೃಷಣದ ತ್ವರಿತ ಊತ
ವೃಷಣಗಳಲ್ಲಿ ನೋವು ಅಥವಾ ಅಸ್ವಸ್ಥತೆ
ಟಿಶ್ಯೂ ದುರ್ಬಲಗೊಳ್ಳುವುದು ಅಥವಾ ಹಿಗ್ಗುವುದು
ಬೆನ್ನಿನಲ್ಲಿ ನೋವು

ಜೆರ್ಮ್ ಸೆಲ್ ವೃಷಣ ಕ್ಯಾನ್ಸರ್ ನ ವಿಧಗಳು
ಸೆಮಿನೋಮ್ಸ್
ನಾನ್ಸೆಮಿನೋಮಿಸ್ (ಟೆರಾಟೋಮಾಸ್, ಭ್ರೂಣದ ಕಾರ್ಸಿನೋಮಾ, ಕೊರಿಯೊಕಾರ್ಸಿನೋಮ, ಯೊಲ್ಕ್ ಶಾಕ್ ಟ್ಯೂಮರ್)
ಪ್ರಮುಖ ಜೀವಕೋಶದಲ್ಲಿ ಗೆಡ್ಡೆ
ಸೆರ್ಟೋಲಿ ಸೆಲ್ ಟ್ಯೂಮರ್

ವೃಷಣ ಕ್ಯಾನ್ಸರ್ ಗೆ ಕಾರಣಗಳು
ಡಾಕ್ಟರ್ ಹೇಳೋ ಪ್ರಕಾರ, ವೃಷಣ ಕ್ಯಾನ್ಸರ್ಗೆ ನಿಖರವಾದ ಕಾರಣ ತಿಳಿದಿಲ್ಲ. ಆದರೆ ಕುಟುಂಬದಲ್ಲಿ ಅದರ ಇತಿಹಾಸವಿದ್ದರೆ(History) ಅಪಾಯ ಹೆಚ್ಚಾಗುತ್ತೆ. ಇದಲ್ಲದೆ, ಗರ್ಭದಲ್ಲಿರುವ ಮಗುವಿನ ಯಾವುದೇ ವೃಷಣಗಳು ವೃಷಣದ ಒಳಗೆ ಸಂಪೂರ್ಣವಾಗಿ ಹೋಗಲು ಸಾಧ್ಯವಾಗದಿದ್ದರೆ, ಈ ಕ್ಯಾನ್ಸರ್ನ ಅಪಾಯವೂ ಹೆಚ್ಚಾಗುತ್ತೆ. ಇದನ್ನು ಕ್ರಿಪ್ಟೋರ್ಕಿಡಿಸಮ್ ಅಥವಾ ಬೇರ್ಪಡಿಸದ ವೃಷಣ ಎಂದೂ ಕರೆಯಲಾಗುತ್ತೆ.

ಪರೀಕ್ಷೆಯನ್ನು 5 ನಿಮಿಷಗಳಲ್ಲಿ ಮಾಡಿ
ಬೆಚ್ಚಗಿನ ನೀರಿನಿಂದ ಸ್ನಾನ(Bath) ಮಾಡಲು ಐದು ನಿಮಿಷಗಳನ್ನು ತೆಗೆದುಕೊಳ್ಳಿ. ಬಿಸಿ ನೀರಿನಿಂದ ಸ್ನಾನ ಮಾಡಿದ್ರೆ ಪರೀಕ್ಷಿಸೋದು ಸುಲಭವಾಗುತ್ತೆ.
ಒಂದು ಬದಿಯಿಂದ ಪ್ರಾರಂಭಿಸಿ ಮತ್ತು ನಿಮ್ಮ ಬೆರಳುಗಳಿಂದ ವೃಷಣವನ್ನು ನಿಧಾನವಾಗಿ ತಿರುಗಿಸುವ ಮೂಲಕ ವೃಷಣದ ಮೇಲ್ಮೈಯನ್ನು ಟಚ್ ಮಾಡಿ..

ಯಾವುದೇ ಗೆಡ್ಡೆ, ಊತ, ಅಥವಾ ಅಸಹಜತೆಗಳನ್ನು ಗುರುತಿಸಲು ಪ್ರಯತ್ನಿಸಿ. ಕ್ಯಾನ್ಸರ್ ಗೆಡ್ಡೆಗಳು ಸಾಮಾನ್ಯವಾಗಿ ನೋವಾಗೋದಿಲ್ಲ ಎಂಬುದನ್ನು ನೆನಪಿನಲ್ಲಿಡಿ.
ಸ್ವಲ್ಪ ದಿನಗಳ ನಂತರ ಗಾತ್ರದಲ್ಲಿನ ಬದಲಾವಣೆಗಳಿಗೆ ಗಮನ ಕೊಡಿ. ವೃಷಣ ಕ್ಯಾನ್ಸರ್ನ ಸಾಮಾನ್ಯ ಲಕ್ಷಣವೆಂದರೆ ನೋವುರಹಿತ ಗೆಡ್ಡೆ, ಕೆಲವು ಪುರುಷರು ವೃಷಣಗಳಲ್ಲಿ ಉರಿಯೂತವನ್ನು ಅನುಭವಿಸಬಹುದು.
ಯಾವುದೇ ಸೌಮ್ಯ ನೋವು ಅಥವಾ ಭಾರದ ಅನುಭವ ಉಂಟಾದ್ರೆ ಜಾಗರೂಕರಾಗಿರಿ. ಎರಡೂ ವೃಷಣವನ್ನೂ ಪರೀಕ್ಷಿಸಿ.

ಒಂದು ಗಡ್ಡೆ ಕಾಣಿಸಿಕೊಂಡಾಗ ಇದನ್ನು ಮಾಡಿ
ಗಡ್ಡೆ, ಊತ ಅಥವಾ ನೋವಿನಂತಹ ಭಾವನೆ, ಯಾವುದೇ ಬದಲಾವಣೆ ಉಂಟಾದರೆ ಈ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸೋದು ಬಹಳ ಮುಖ್ಯ. ಈ ರೋಗಲಕ್ಷಣಗಳು ಇತರ ಪರಿಸ್ಥಿತಿಗಳಿಂದಾಗಿಯೂ ಉಂಟಾಗಬಹುದು, ಆದರೂ ವೈದ್ಯರನ್ನು ಸಂಪರ್ಕಿಸೋದು(Consult doctor)ಮುಖ್ಯ, ಇದರಿಂದ ವೃಷಣ ಕ್ಯಾನ್ಸರ್ ಅಥವಾ ಇತರ ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಯ ಅಪಾಯವನ್ನು ತಪ್ಪಿಸಬಹುದು.
 

Latest Videos

click me!