ಕಡಲೆ ಅಥವಾ ಹೆಸರು ಕಾಳುಗಳ ಮೊಳಕೆ ಕಾಳು(Sprouts) ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತೆ. ಅನೇಕ ಜನರು ಇದನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತಿನ್ನಲು ಇಷ್ಟಪಡುತ್ತಾರೆ ಏಕೆಂದರೆ ಇದರಲ್ಲಿ ಸಾಕಷ್ಟು ಫೈಬರ್ ಇದೆ, ಇದನ್ನು ಹೊಟ್ಟೆಯನ್ನು ಸ್ವಚ್ಛವಾಗಿಡಲು ಬಳಸಲಾಗುತ್ತೆ.
ನಮ್ಮ ದೇಹಕ್ಕೆ ಸಂಬಂಧಿಸಿದ ಎಲ್ಲಾ ರೋಗಗಳು ಹೊಟ್ಟೆಯಿಂದಲೇ ಆರಂಭವಾಗುತ್ತೆ, ಹಾಗಾಗಿ ಮೊಳಕೆ ಕಾಳುಗಳ ಸೇವನೆಯಿಂದ ಹೊಟ್ಟೆ(Stomach) ಸ್ವಚ್ಛವಾಗುತ್ತೆ, ನಂತರ ಎಲ್ಲಾ ರೋಗಗಳು ನಿಮ್ಮಿಂದ ದೂರವಿರುತ್ತವೆ ಅನ್ನೋ ನಂಬಿಕೆ.
ಮೊಳಕೆ ಕಾಳುಗಳನ್ನು ತಿನ್ನೋದರಿಂದ ಅನೇಕ ಅಡ್ಡಪರಿಣಾಮಗಳಿವೆ ಎಂದು ನಿಮಗೆ ತಿಳಿದಿದ್ಯಾ? ಅಂದರೆ, ಹಸಿ ಮೊಳಕೆಯೊಡೆದ ಹೆಸರು ಕಾಳುಗಳ ಪ್ರಯೋಜನ ಪಡೆಯುವುದಲ್ಲದೆ ಅವು ಆರೋಗ್ಯಕ್ಕೆ ಹಾನಿಕಾರಕ(Dangerous) ಗೊತ್ತಾ.
ಅಮೇರಿಕನ್ ಹೆಲ್ತ್ ಏಜೆನ್ಸಿ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಯಾವುದೇ ಮೊಳಕೆ ಕಾಳುಗಳನ್ನು ಎಂದಿಗೂ ಹಸಿಯಾಗಿ ತಿನ್ನಬಾರದು ಏಕೆಂದರೆ ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಈ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ.
ಕಚ್ಚಾ ಮೊಳಕೆ ಕಾಳುಗಳಲ್ಲಿ ಬಹಳಷ್ಟು ಬ್ಯಾಕ್ಟೀರಿಯಾಗಳು(Bacteria) ಕಂಡುಬರುತ್ತವೆ
ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್ಡಿಎ) ಪ್ರಕಾರ, ಕಚ್ಚಾ ಮೊಳಕೆ ಕಾಳುಗಳು ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಮೊಳಕೆ ಕಾಳುಗಳು ಬೀಜಗಳಿಂದ ಬೆಳೆಯುತ್ತವೆ. ಇ.ಕೋಲಿ ಮತ್ತು ಸಾಲ್ಮೊನೆಲ್ಲಾದಂತಹ ಅಪಾಯಕಾರಿ ಬ್ಯಾಕ್ಟೀರಿಯಾಗಳು ಮೊಳಕೆಯೊಡೆಯುವ ಪ್ರಕ್ರಿಯೆಯುದ್ದಕ್ಕೂ ಪ್ರವರ್ಧಮಾನಕ್ಕೆ ಬರಲು ಪ್ರಾರಂಭಿಸುತ್ತವೆ.
ಈ ಬ್ಯಾಕ್ಟೀರಿಯಾ ಯಾವುದೇ ವಸ್ತುವಿನ ಮೇಲೆ ಬಹಳ ಬೇಗ ದಾಳಿ ಮಾಡುತ್ತೆ. ಈ ಮೊಳಕೆ ಕಾಳುಗಳಲ್ಲಿ ಬ್ಯಾಕ್ಟೀರಿಯಾದ ಅಪಾಯವು ಅತ್ಯಧಿಕವಾಗಿದೆ. ಎಫ್ಡಿಎ ಪ್ರಕಾರ, ಬೀಜದ ಹೊರಭಾಗದಲ್ಲಿ ಮತ್ತು ಬೀಜದಲ್ಲಿ ಈಗಾಗಲೇ ಯಾವುದೇ ಬ್ಯಾಕ್ಟೀರಿಯಾ ಇದ್ದರೆ. ಆದ್ದರಿಂದ ಮೊಳಕೆಯೊಡೆಯುವ ಪ್ರಕ್ರಿಯೆಯು ಬಹಳ ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತೆ. ಈ ಅಪಾಯವು ಮನೆಯಲ್ಲಿ ತಯಾರಿಸಿದ ಮೊಳಕೆ ಕಾಳುಗಳಲ್ಲಿಯೂ ಇರುತ್ತದೆ.
ಹಸಿ ಮೊಳಕೆ ಕಾಳುಗಳನ್ನು ತಿನ್ನುವುದು ಹೊಟ್ಟೆಯಲ್ಲಿ ಈ ಸಮಸ್ಯೆಯನ್ನು ಉಂಟುಮಾಡುತ್ತೆ
ಸಿಡಿಸಿ ಪ್ರಕಾರ, ಕಚ್ಚಾ ಮೊಳಕೆ ಕಾಳುಗಳನ್ನು ತಿನ್ನುವುದು ಫುಡ್ ಪಾಯಿಸನಿಂಗ್ ಅಪಾಯವನ್ನು ಹೆಚ್ಚಿಸುತ್ತೆ. ನೀವು ಅದನ್ನು ಚೆನ್ನಾಗಿ ಬೇಯಿಸದಿದ್ದರೆ ಬ್ಯಾಕ್ಟೀರಿಯಾದ ಅಡ್ಡಪರಿಣಾಮಗಳನ್ನು ಎದುರಿಸಬೇಕಾಗಬಹುದು. ಮೊಳಕೆ ಕಾಳುಗಳನ್ನು ಬೇಯಿಸುವಾಗ, ಅದರ ಎಲ್ಲಾ ಬ್ಯಾಕ್ಟೀರಿಯಾಗಳು ಸಾಯುತ್ತವೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಯ ಅಪಾಯ ಕಡಿಮೆಯಾಗುತ್ತೆ.
ತಿನ್ನುವ ಮೊದಲು ಮೊಳಕೆ ಕಾಳುಗಳನ್ನು ಶುದ್ಧ ನೀರಿನಿಂದ(Pure water) ಚೆನ್ನಾಗಿ ತೊಳೆಯಬೇಕು ಎಂದು ಎಫ್ಡಿಎ ಶಿಫಾರಸು ಮಾಡುತ್ತೆ. ಇದು ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತೆ. ಕೇವಲ ತೊಳೆಯೋದು ಮಾತ್ರ ಯಾವುದೇ ಕೆಲಸ ಮಾಡೋದಿಲ್ಲ, ಅದಕ್ಕಾಗಿ ನೀವದನ್ನ ಬೇಯಿಸಲೇಬೇಕು.
ನೀವು ಮೊಳಕೆ ಕಾಳುಗಳ ಬ್ಯಾಕ್ಟೀರಿಯಾವನ್ನು ಕೊಲ್ಲಲು ಬಯಸೋದಾದ್ರೆ, ಅದನ್ನು ಚೆನ್ನಾಗಿ ಬೇಯಿಸಬೇಕು. ಆಗ ಮಾತ್ರ ಅದು ತಿನ್ನಲು ಯೋಗ್ಯವಾಗಿರುತ್ತೆ. ಸಿಡಿಸಿ ಪ್ರಕಾರ, ದುರ್ಬಲ ರೋಗನಿರೋಧಕ ಶಕ್ತಿಯನ್ನು(Immunity system) ಹೊಂದಿರುವವರು ಫುಡ್ ಪಾಯಿಸನಿಂಗ್ ಅಪಾಯದಲ್ಲಿರುತ್ತಾರೆ. ಆದ್ದರಿಂದ, ಜನರು ಹಸಿ ತರಕಾರಿ ಅಥವಾ ಮೊಳಕೆ ಕಾಳುಗಳನ್ನು ಎಂದಿಗೂ ತಿನ್ನಬಾರದು, ಇದರಿಂದಾಗಿ ಬ್ಯಾಕ್ಟೀರಿಯಾ ನೇರವಾಗಿ ಹೊಟ್ಟೆಯ ಮೇಲೆ ದಾಳಿ ಮಾಡುತ್ತೆ, ಹುಷಾರ್!