ದೇಹದಲ್ಲಿ ರಕ್ತ ಹೀನತೆಗೇನು ಪರಿಣಾಮಕಾರಿ ಮದ್ದು?
First Published | Jul 3, 2021, 11:48 AM ISTಸಾಮಾನ್ಯ ಕ್ಕೆ ಹೋಲಿಸಿದರೆ ದೇಹದಲ್ಲಿ ಕೆಂಪು ರಕ್ತ ಕಣಗಳು ಕಡಿಮೆಯಾದಾಗ ದೇಹದಲ್ಲಿ ರಕ್ತಸ್ರಾವ ಶುರುವಾಗುತ್ತದೆ. ಇದನ್ನು ರಕ್ತಹೀನತೆ ಎನ್ನುತ್ತಾರೆ. ದೇಹದಲ್ಲಿ ರಕ್ತಹೀನತೆಯು ತಲೆ ತಿರುಗುವಿಕೆ, ದೌರ್ಬಲ್ಯ, ಮೂರ್ಛೆ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ, ಇದು ಅನೇಕ ಗಂಭೀರ ರೋಗಗಳಿಗೆ ಕಾರಣವಾಗಬಹುದು. ಇದಕ್ಕೆ ದೇಹದಲ್ಲಿ ಕಬ್ಬಿಣ ಕೊರತೆ ಕಾರಣ ಎಂದು ಹೇಳಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದ ಸುಮಾರು 80 ಪ್ರತಿಶತ ಜನರು ಕಬ್ಬಿಣದ ಕೊರತೆಯಿಂದ ಬಳಲುತ್ತಿದ್ದಾರೆ, ಆದರೆ ಅವರಲ್ಲಿ 30 ಪ್ರತಿಶತ ಜನರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.