ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?

Published : Dec 07, 2025, 11:14 AM IST

ಮೊಳಕೆ ಬಂದ ಆಲೂಗಡ್ಡೆಗಳು ಗ್ಲೈಕೋಲ್ಕಲಾಯ್ಡ್ಸ್ ಎಂಬ ವಿಷಕಾರಿ ಅಂಶವನ್ನು ಹೊಂದಿರುತ್ತವೆ. ಇವುಗಳ ಸೇವನೆಯಿಂದ ಅಸಿಡಿಟಿ, ಹೊಟ್ಟೆನೋವಿನಂತಹ ಸಮಸ್ಯೆಗಳು ಉಂಟಾಗಬಹುದು. ಅದರಲ್ಲೂ ಗರ್ಭಿಣಿಯರು ಇಂತಹ ಆಲೂಗಡ್ಡೆಗಳನ್ನು ತಿನ್ನುವುದು ಅಪಾಯಕಾರಿ ಎಂದು ತಜ್ಞರು ಎಚ್ಚರಿಸುತ್ತಾರೆ.

PREV
17
ಆಲೂಗಡ್ಡೆಗಳಲ್ಲಿ ಮೊಳಕೆ

ಕೆಲವೊಮ್ಮೆ ಆಲೂಗಡ್ಡೆಗಳನ್ನು ಮನೆಗೆ ತಂದು ಹಾಗೇ ಇಟ್ಟರೆ ಅವುಗಳಿಗೆ ಮೊಳಕೆ ಬರುವುದು ಮಾಮೂಲು. ಇನ್ನು ಕೆಲವು ಸಮಯಗಳಲ್ಲಿ ಅಂಗಡಿಯಲ್ಲಿಯೇ ಮೊಳಕೆ ಬಂದಿರುವ ಆಲೂಗಡ್ಡೆಗಳೂ ಇರುತ್ತವೆ. ಹಾಗಿದ್ದರೆ ಇವುಗಳು ಒಳ್ಳೆಯದೇ ಎನ್ನುವ ಪ್ರಶ್ನೆ ಹಲವರಲ್ಲಿ ಮೂಡಬಹುದು.

27
ತಜ್ಞರು ಹೇಳುವುದೇನು?

ತಜ್ಞರು ಹೇಳುವ ಪ್ರಕಾರ, ಇದು ದೇಹಕ್ಕೆ ಒಳ್ಳೆಯದಲ್ಲ. ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳದಿದ್ದರೂ, ಇದು ಕೆಲವೊಂದು ಸಮಸ್ಯೆಗಳಂತೂ ಸೃಷ್ಟಿಸುತ್ತದೆ.

37
Glycoalkaloids ಎನ್ನುವ ವಿಷ

ಆಲೂಗಡ್ಡೆ ಮೊಳಕೆಗಳು ಸ್ವಲ್ಪಮಟ್ಟಿಗೆ ವಿಷಕಾರಿ ರಾಸಾಯನಿಕಗಳನ್ನು ಹೊಂದಿರುತ್ತವೆ. ಅದಕ್ಕೆ glycoalkaloids ಎಂದು ಇಂಗ್ಲಿಷ್‌ನಲ್ಲಿ ಕರೆಯಲಾಗುತ್ತವೆ. ಇವುಗಳ ಸೇವನೆಯಿಂದ ಆಸಿಡಿಯಂಥ ಸಮಸ್ಯೆಗಳು ಹೆಚ್ಚಾಗುತ್ತವೆ. ಮೊದಲೇ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಅದು ಇನ್ನಷ್ಟು ಉಲ್ಬಣವಾಗುತ್ತದೆ.

47
ಮೊಳಕೆ ತೆಗೆದುಹಾಕಿ

ಅದರಲ್ಲಿಯೂ ಗರ್ಭಿಣಿಯರು ಇದನ್ನು ತಿನ್ನದೇ ಇರುವುದೇ ಒಳ್ಳೆಯದು ಎಂದು ವೈದ್ಯರು ಸಲಹೆ ನೀಡುತ್ತಾರೆ ಒಂದು ವೇಳೆ ಈ ಮೊಳಕೆ ಚಿಕ್ಕದಾಗಿದ್ದರೆ, ಅವುಗಳನ್ನು ತೆಗೆದುಹಾಕಿ ಆಲೂಗಡ್ಡೆ ತಿನ್ನಬಹುದು, ಅದರಿಂದ ಹೆಚ್ಚಿಗೆ ಸಮಸ್ಯೆ ಆಗಲಾರದು.

57
ವಿಷಕಾರಿ ಅಂಶ

ಆದರೆ, ಮೊಳಕೆ ತುಂಬಾ ದೊಡ್ಡದಾಗಿದ್ದರೆ, ಅವುಗಳನ್ನು ಸೇವನೆ ಮಾಡದಿರುವುದೇ ಒಳ್ಳೆಯದು. ಏಕೆಂದರೆ ಮೊದಲೇ ಹೇಳಿದಂತೆ glycoalkaloids ಎನ್ನುವ ವಿಷಕಾರದ ಅಂಶ ದೇಹವನ್ನು ಸೇರುತ್ತದೆ. ಇದು ಆಸಿಡಿಟಿ ಮಾತ್ರವಲ್ಲದೇ, ಹೊಟ್ಟೆ ನೋವು, ವಾಕರಿಕೆ ಮತ್ತು ಇತರ ತೊಂದರೆಗಳನ್ನು ಉಂಟುಮಾಡಬಹುದು ಎನ್ನಲಾಗಿದೆ.

67
ಗರ್ಭಿಣಿಯರಿಗೆ ಅಪಾಯ

ಇನ್ನು ಗರ್ಭಿಣಿಯರು ಈ ರೀತಿ ದೊಡ್ಡದಾಗಿ ಮೊಳಕೆ ಇರುವ ಆಲೂಗಡ್ಡೆ ಹಾಗೆಯೇ ತಿಂದರೆ ತುಂಬಾ ಅಪಾಯ ಎಂದೂ ಹೇಳಲಾಗುತ್ತದೆ. ಇದರಿಂದ ಜನನ ದೋಷಗಳು ಆಗಬಹುದು ಎನ್ನಲಾಗಿದೆ.

77
ತಿನ್ನಲೇ ಬೇಕು ಎಂದರೆ

ಅದರಲ್ಲಿಯೂ ಹಸಿರು ಬಣ್ಣದ ಆಲೂಗಡ್ಡೆ ಇದ್ದು, ಅದಕ್ಕೆ ಮೊಳಕೆ ಬಂದರಂತೂ ತಿನ್ನದೇ ಇರುವುದೇ ಒಳಿತು. ಹಾಗೊಂದು ವೇಳೆ ತಿನ್ನಲೇಬೇಕು ಎಂದಾದರೆ ವಿಷದ ಪ್ರಮಾಣವನ್ನು ಕಡಿಮೆ ಮಾಡಲು, ಮೊಗ್ಗುಗಳಿರುವ ಭಾಗದ ಸಿಪ್ಪೆ ಮತ್ತು ಮೊಗ್ಗುಗಳನ್ನು ಸಂಪೂರ್ಣವಾಗಿ ಕತ್ತರಿಸಿ ತೆಗೆದು ಹಾಕಬೇಕು.

Read more Photos on
click me!

Recommended Stories