ವಾರಾಂತ್ಯಗಳಲ್ಲಿ ಭಾನುವಾರ, ರಜಾದಿನಗಳಲ್ಲಿ ಜನರು ಸಾಮಾನ್ಯವಾಗಿ ತಮ್ಮ ಸ್ವಂತ ಇಚ್ಛೆಯಂತೆ ಕೆಲವು ಕೆಲಸಗಳನ್ನು ಮಾಡಲು ಬಯಸುತ್ತಾರೆ. ಇನ್ನು ಹೆಚ್ಚಿನ ಜನರು ರಜಾದಿನಗಳಲ್ಲಿ ಚೆನ್ನಾಗಿ ನಿದ್ರೆ ಮಾಡೋದನ್ನು ಬಯಸ್ತಾರೆ. ಹೌದು ವಾರ ಪೂರ್ತಿ ಸರಿಯಾಗಿ ನಿದ್ರೆ ಮಾಡದೇ ಓಡಾಟ, ಕೆಲಸದಲ್ಲಿ ಬ್ಯುಸಿ ಇದ್ದ ಜನರಿಗೆ ಚೆನ್ನಾಗಿ ನಿದ್ರೆ (good sleep) ಮಾಡೋದಕ್ಕೂ ಸಮಯ ಸಿಗೋದಿಲ್ಲ. ಇದರಿಂದಾಗಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ನೀವೂ ಸಹ ವಾರಪೂರ್ತಿ ದಣಿದಿದ್ದರೆ, ರಜಾದಿನಗಳಲ್ಲಿ ಬೇಕಾದಷ್ಟು ನಿದ್ದೆ ಮಾಡಿ, ಇದರಿಂದ ಹೆಚ್ಚಿನ ಆರೋಗ್ಯ ಪ್ರಯೋಜನ ಪಡೆಯುವಿರಿ.