ಸಣ್ಣ ತಪ್ಪುಗಳೇ ಹಾರ್ಮೋನ್ ಅಸಮತೋಲನವೆಂಬ ದೊಡ್ಡ ಸಮಸ್ಯೆಗೆ ಕಾರಣ

First Published | Apr 22, 2024, 5:10 PM IST

ನೀವು ಗೊತ್ತೋ ಗೊತ್ತಿಲ್ಲದೆಯೋ ಮಾಡುವ ಈ ಅಭ್ಯಾಸಗಳು ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಬಹುದು, ಜೊತೆಗೆ ನಿಮ್ಮನ್ನು ಅನೇಕ ಸಮಸ್ಯೆಗಳಿಗೆ ಬಲಿಯಾಗುವಂತೆ ಮಾಡಬಹುದು. ಹಾಗಿದ್ರೆ ಹಾರ್ಮೋನಲ್ ಅಸಮತೋಲನ ಆಗದಂತೆ ತಡೆಯೋದು ಹೇಗೆ ತಿಳಿಯಿರಿ. 
 

ಹಾರ್ಮೋನುಗಳ ಅಸಮತೋಲನ (hormonal imbalance) ಒಂದು ದೊಡ್ಡ ಸಮಸ್ಯೆ. ಈ ಕಾರಣದಿಂದಾಗಿ, ದೇಹದಲ್ಲಿ ಅನೇಕ ಸಮಸ್ಯೆಗಳು ಉಂಟಾಗಬಹುದು. ಕೆಲವು ರೋಗಗಳನ್ನು ಗುಣಪಡಿಸಬಹುದಾದರೂ, ಕೆಲವು ಗಂಭೀರ ರೂಪವನ್ನು ತೆಗೆದುಕೊಳ್ಳಬಹುದು. ಆದ್ದರಿಂದ, ಹಾರ್ಮೋನುಗಳನ್ನು ಸಮತೋಲನದಲ್ಲಿಡುವುದು ಬಹಳ ಮುಖ್ಯ. ಹಾರ್ಮೋನುಗಳ ಅಸಮತೋಲನವು ಮೊಡವೆ, ಮಧುಮೇಹ, ಥೈರಾಯ್ಡ್, ಬೊಜ್ಜು (pbesity) ಹಿಡಿದು ಬಂಜೆತನದವರೆಗಿನ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು.

ಇಂದಿನ ಕಾಲದಲ್ಲಿ, ಜನರು ಚಿಕ್ಕ ವಯಸ್ಸಿನಲ್ಲಿಯೇ ಅನೇಕ ರೀತಿಯ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಅದರಲ್ಲೂ ಮಧುಮೇಹ (diabetes), ಬೊಜ್ಜು, ಮಲಬದ್ಧತೆ (Constipation), ಅಧಿಕ ರಕ್ತದೊತ್ತಡದ (Blood Pressure) ಜೊತೆಗೆ, ಹಾರ್ಮೋನುಗಳ ಅಸಮತೋಲನ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರೇ ಹೆಚ್ಚಾಗಿದ್ದಾರೆ. ಹಾರ್ಮೋನ್ ಅಸಮತೋಲನ ಇದು ಬೇರೆ ರೀತಿಯ ಸಮಸ್ಯೆ. ಹಾರ್ಮೋನ್ ಅಸಮತೋಲನಗೊಂಡಾಗ ದೇಹದಲ್ಲಿ ಇತರ ಅನೇಕ ರೀತಿಯ ಸಮಸ್ಯೆಗಳು ಉಂಟಾಗೋ ಸಾಧ್ಯತೆ ಹೆಚ್ಚು. 
 

Tap to resize

ಹಾರ್ಮೋನ್ ಅಸಮತೋಲನ ಎಂದರೆ ದೇಹದಲ್ಲಿ ಹಾರ್ಮೋನುಗಳ ಹೆಚ್ಚು ಅಥವಾ ಕಡಿಮೆ ಉತ್ಪಾದನೆಯಾಗೋದು. ನಮ್ಮ ಕೆಲವು ಅಭ್ಯಾಸಗಳು ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಿವೆ. ನೀವು ಈ ಅಭ್ಯಾಸಗಳನ್ನು ಸುಧಾರಿಸಿದರೆ, ಹಾರ್ಮೋನುಗಳನ್ನು ಸುಲಭವಾಗಿ ಸಮತೋಲನಗೊಳಿಸಬಹುದು. ಹಾರ್ಮೋನ್ ಅಸಮತೋಲನಕ್ಕೆ ಕಾರಣಗಳು ಯಾವುವು, ಅನ್ನೋದನ್ನು ತಿಳಿಯಿರಿ.
 

ದೈಹಿಕ ಚಟುವಟಿಕೆಗಳನ್ನು ಮಾಡದಿರೋದು (No physical activity)
ಬಿಡುವಿಲ್ಲದ ಜೀವನಶೈಲಿ, ಮನೆಯ ಜವಾಬ್ದಾರಿಗಳು ಮತ್ತು ಸೋಮಾರಿತನದಿಂದಾಗಿ, ದೈಹಿಕ ಚಟುವಟಿಕೆ (Physical Activity) ಮಾಡಲು ಸಾಧ್ಯವಾಗದೇ ಇರಬಹುದು. ಆದರೆ ಹೀಗೆ ಮಾಡೋದರಿಂದ ಇದು ಬೊಜ್ಜನ್ನು ಹೆಚ್ಚಿಸುವುದಲ್ಲದೆ, ಹಾರ್ಮೋನುಗಳ ಸಮತೋಲನವನ್ನು ಹಾಳುಮಾಡುತ್ತದೆ. ಇದರಿಂದಾಗಿ ಜೀರ್ಣಕ್ರಿಯೆ, ಕೂದಲು ಉದುರುವಿಕೆ (Hair Fall), ತೂಕ ಹೆಚ್ಚಳದಂತಹ (Weight Gain) ಸಮಸ್ಯೆಗಳನ್ನು ಅನುಭವಿಸಬಹುದು. ಇಂತಹ ಸಮಸ್ಯೆ ಬರಬಾರದು ಎಂದಾದ್ರೆ ಪ್ರತಿನಿತ್ಯ ಅರ್ಧ ಗಂಟೆ ವ್ಯಾಯಾಮ ಮಾಡಿ. 

ಒತ್ತಡ 
ಅತಿಯಾದ ಒತ್ತಡವನ್ನು (stress) ತೆಗೆದುಕೊಳ್ಳುವುದು ಹಾರ್ಮೋನ್ ಮಟ್ಟವನ್ನು ಇನ್ನಷ್ಟು ಹದಗೆಡಿಸುತ್ತದೆ. ಆದ್ದರಿಂದ ಒತ್ತಡವನ್ನು ಕಡಿಮೆ ಮಾಡಿ. ಒತ್ತಡವನ್ನು ನಿವಾರಿಸಲು, ಪ್ರಾಣಾಯಾಮ, ಯೋಗಾಸನ, ಧ್ಯಾನ (Meditation) ಇತ್ಯಾದಿಗಳನ್ನು ಅಭ್ಯಾಸ ಮಾಡಿ.
 

ಈಟಿಂಗ್ ಡಿಸಾರ್ಡರ್ (eating disorder)
ಜಂಕ್, ಎಣ್ಣೆಯುಕ್ತ ಆಹಾರಗಳು (Oily food), ಮಸಾಲೆಯುಕ್ತ ಆಹಾರವನ್ನು ತಿನ್ನೋದಕ್ಕೆ ತುಂಬಾ ಟೇಸ್ಟಿಯಾಗಿರಬಹುದು. ಆದರೆ ಈ ವಿಷಯಗಳು ನಿಮ್ಮ ಆಹಾರದ ಭಾಗವಾಗಿದ್ದರೆ, ಅವು ಹಾರ್ಮೋನುಗಳ ಅಸಮತೋಲನಕ್ಕೂ ಕಾರಣವಾಗಬಹುದು ಅನ್ನೋದು ನೆನಪಿರಲಿ. ಹಾರ್ಮೋನುಗಳನ್ನು ಸಮತೋಲನದಲ್ಲಿಡಲು, ಪ್ರೋಟೀನ್, ಫೈಬರ್ ಸಮೃದ್ಧ ಆಹಾರವನ್ನು ಸೇವಿಸಿ. 

ರಾತ್ರಿ ತಡವಾಗಿ ಮಲಗುವುದು
ದೇಹದಲ್ಲಿ ಹಾರ್ಮೋನ್ ಸಮತೋಲನವನ್ನು ಕಾಪಾಡಿಕೊಳ್ಳಲು ಉತ್ತಮ ಮತ್ತು ಆರೋಗ್ಯಕರ ನಿದ್ರೆ ಸಹ ಬಹಳ ಮುಖ್ಯ. ಆರೋಗ್ಯಕರ ದೇಹಕ್ಕಾಗಿ ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ಮಲಗುವುದು ಅವಶ್ಯಕ. ನೀವು ಸರಿಯಾಗಿ ನಿದ್ರೆ ಮಾಡದಿದ್ದರೆ ಅಥವಾ ರಾತ್ರಿ ತಡವಾಗಿ ಮಲಗಿದರೆ, ಅದು ದೇಹದಲ್ಲಿನ ಹಾರ್ಮೋನುಗಳ ಮಟ್ಟವನ್ನು ಹದಗೆಡಿಸಲು ಪ್ರಾರಂಭಿಸುತ್ತದೆ.

Latest Videos

click me!