ಪ್ರತಿದಿನ ಪಾಲಕ್ ತಿನ್ನೋ ಮೊದ್ಲು ಅದ್ರಿಂದ ಏನಾಗುತ್ತೆ ತಿಳಿಯಿರಿ

First Published Aug 19, 2022, 4:51 PM IST

ಹಸಿರು ಎಲೆ ತರಕಾರಿಗಳಲ್ಲಿ ಅತ್ಯಂತ ಪ್ರಯೋಜನಕಾರಿ ಎಂದು ಹೇಳಲಾಗೋ ಒಂದು ಸೊಪ್ಪು ಅಂದ್ರೆ ಅದು ಪಾಲಕ್ ಸೊಪ್ಪು. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತೆ. ವಾಸ್ತವವಾಗಿ, ಪಾಲಕ್ ಸೊಪ್ಪು ಆಂಟಿ ಆ್ಯಕ್ಸಿಡಾಂಟ್ಸ್ ನಿಂದ ಸಮೃದ್ಧವಾಗಿವೆ. ಇದಲ್ಲದೆ, ಸೋಡಿಯಂ, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಪ್ರೋಟೀನ್ ಮತ್ತು ವಿಟಮಿನ್ಸ್‌ನಂತಅನೇಕ ಖನಿಜ ಅಂಶಗಳು ಪಾಲಕ್ ಸೊಪ್ಪಿನಲ್ಲಿ ಕಂಡುಬರುತ್ತವೆ. ಪಾಲಕ್ ಸೊಪ್ಪನ್ನು ತರಕಾರಿಗಳು, ಸಲಾಡ್ , ಜ್ಯೂಸ್, ಸೂಪ್ ಎಂದು ಎಲ್ಲಾ ರೀತಿಯಲ್ಲಿಯೂ ಬಳಸಬಹುದು. ಇವು ಆರೋಗ್ಯಕ್ಕೆ ಪ್ರಯೋಜನಕಾರಿ ನಿಜಾ, ಆದರೆ ಅದರ ಸೇವನೆಯು ಹಾನಿಯನ್ನು ಸಹ ಉಂಟುಮಾಡಬಹುದು ಎಂದು ನಿಮಗೆ ತಿಳಿದಿದ್ಯಾ? 

ನಾವು ನಮ್ಮ ದಿನನಿತ್ಯದ ಅಡುಗೆಯಲ್ಲಿ ಪಾಲಕ್ ಸೊಪ್ಪನ್ನು (Spinach) ಹೆಚ್ಚಾಗಿ ಸೇವಿಸುತ್ತೇವೆ. ಇದು ಆರೋಗ್ಯಕ್ಕೆ ಅತ್ಯುತ್ತಮ ಆಹಾರ. ಆದರೆ ಹೆಚ್ಚು ಪಾಲಕ್ ಸೊಪ್ಪನ್ನು ತಿನ್ನೋದರಿಂದ ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆ ಸೇರಿ ರಕ್ತ ಅತಿಯಾಗಿ ತೆಳ್ಳಗಾಗುವಂತಹ ಸಮಸ್ಯೆ ಉಂಟುಮಾಡಬಹುದು. ಪಾಲಕ್ ಸೊಪ್ಪಿನಲ್ಲಿ ಆಕ್ಸಲೇಟ್ ಅಧಿಕವಾಗಿರುತ್ತೆ, ಆದುದರಿಂದ ಇದು ಅನೇಕ ರೀತಿಯಲ್ಲಿ ಆರೋಗ್ಯಕ್ಕೆ ಹಾನಿ ಮಾಡುತ್ತೆ.

ಪಾಲಕ್ ಸೊಪ್ಪನ್ನು ತಿನ್ನೋದರಿಂದ ಎಷ್ಟು ಪ್ರಯೋಜನಗಳಿವೆಯೋ, ಅದರ ಅನಾನುಕೂಲತೆಗಳೂ ಇವೆ. ಅಗತ್ಯಕ್ಕಿಂತ ಹೆಚ್ಚು ಪಾಲಕ್ ತಿನ್ನೋದನ್ನು ತಪ್ಪಿಸಿ. ಪಾಲಕ್ ಸೊಪ್ಪನ್ನು ಉತ್ತಮ ಆರೋಗ್ಯದ ನಿಧಿ ಎಂದು ಕರೆದರೆ, ತಪ್ಪೇನಲ್ಲ. ಆದರೆ ಅತಿಯಾದರೆ ಅಮೃತವೂ ವಿಷವಾಗುತ್ತಂತೆ. ಆದ್ದರಿಂದ, ಪಾಲಕ್ ಸೊಪ್ಪನ್ನು ನಿಮ್ಮ ಆಹಾರದಲ್ಲಿ(Food) ಸೇರಿಸಿಕೊಳ್ಳಿ. ಆದರೆ ಅದರ ಅಡ್ಡಪರಿಣಾಮಗಳ ಬಗ್ಗೆ ಕಾಳಜಿ ವಹಿಸುವುದು ತುಂಬಾನೆ ಮುಖ್ಯ. ಪಾಲಕ್ ಸೊಪ್ಪಿನಿಂದ ಉಂಟಾಗುವ ಹಾನಿಗಳ ಬಗ್ಗೆ ತಿಳಿಯೋಣ.
 

ಮೂತ್ರಪಿಂಡದಲ್ಲಿ ಕಲ್ಲುಗಳಾಗಬಹುದು(Kidney stone)

ಹೆಚ್ಚು ಪಾಲಕ್ ತಿನ್ನೋದ್ರಿಂದ ಮೂತ್ರಪಿಂಡದ ಕಲ್ಲುಗಳ ಅಪಾಯ ಹೆಚ್ಚಿಸುತ್ತೆ. ಮೂತ್ರದಲ್ಲಿ ಆಕ್ಸಲೇಟ್ ಪ್ರಮಾಣ ಹೆಚ್ಚಾಗೋದ್ರಿಂದ, ಮೂತ್ರಪಿಂಡದಲ್ಲಿ ಕಲ್ಲುಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ. ಪಾಲಕ್ ಕುದಿಸಿದರೆ, ಅದರಲ್ಲಿರುವ ಆಕ್ಸಲೇಟ್ ನ ಪ್ರಮಾಣ ಕಡಿಮೆಯಾಗುತ್ತೆ. ಪಾಲಕ್ ಸೊಪ್ಪನ್ನು ಮೊಸರು ಅಥವಾ ಚೀಸ್ ಕಾಂಬಿನೇಶನ್‌ನೊಂದಿಗೆ ಸೇವಿಸಿದರೆ, ಮೂತ್ರಪಿಂಡದ ಕಲ್ಲುಗಳ ಅಪಾಯ ಕಡಿಮೆಯಾಗುತ್ತೆ.

ರಕ್ತ(Blood) ತೆಳುವಾಗೋದನ್ನು ಕಡಿಮೆ ಮಾಡುತ್ತೆ

ವಿಟಮಿನ್ ಕೆ ಯಿಂದ ಸಮೃದ್ಧವಾಗಿರುವ ಪಾಲಕ್ ಸೊಪ್ಪಿನ ಅತಿ ಸೇವನೆ ರಕ್ತವನ್ನು ತೆಳುಗೊಳಿಸುವ ಎಫೆಕ್ಟ್ ಕಡಿಮೆ ಮಾಡುತ್ತೆ. ನೀವು ಯಾವುದೇ ಬ್ಲಡ್ ಥಿನ್ನರ್ ಔಷಧಿ ತೆಗೆದುಕೊಳ್ಳುತ್ತಿದ್ದರೆ, ಪಾಲಕ್ ಸೊಪ್ಪನ್ನು ತಪ್ಪಿಸಬೇಕು. ಇಲ್ಲದಿದ್ದರೆ, ಪಾಲಕ್ ಸೊಪ್ಪು ಆ ಔಷಧಿಗಳೊಂದಿಗೆ ಪ್ರತಿಕ್ರಿಯಿಸಬಹುದು ಮತ್ತು ಆ ಔಷಧಿಗಳ ಪರಿಣಾಮವನ್ನು ತಡೆಯಬಹುದು. 

ಮಿನರಲ್ಸ್(Minerals)  ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡಬಹುದು

ಪಾಲಕ್ ಸೊಪ್ಪಿನಲ್ಲಿ ಆಕ್ಸಲೇಟ್ ಅಧಿಕವಾಗಿದೆ. ಇದು ಕ್ಯಾಲ್ಸಿಯಂನಂತಹ ಅಗತ್ಯ ಮಿನರಲ್ಸ್ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತೆ. ಪಾಲಕ್ ಸೊಪ್ಪಿನಲ್ಲಿ ಕ್ಯಾಲ್ಸಿಯಂ ಮತ್ತು ಆಕ್ಸಲೇಟ್ ಎರಡೂ ಕಂಡುಬರುತ್ತೆ. ಆದ್ದರಿಂದ, ಪಾಲಕ್ ಸೊಪ್ಪನ್ನು ಹೆಚ್ಚಾಗಿ ಸೇವಿಸೋದ್ರಿಂದ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡಬಹುದು.

ಸಂಧಿವಾತದ ರೋಗಲಕ್ಷಣ ಹೆಚ್ಚಾಗಬಹುದು

ಪಾಲಕ್ ಸೊಪ್ಪಿನಲ್ಲಿ ಪ್ಯೂರಿನ್ ಎಂಬ ರಾಸಾಯನಿಕ ಸಂಯುಕ್ತವಿದೆ, ಇದರ ಅತಿಯಾದ ಸೇವನೆಯು ಸಂಧಿವಾತ ಸಮಸ್ಯೆ ಉಂಟುಮಾಡಬಹುದು. ನೀವು ಸಂಧಿವಾತದ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದರೆ, ನಿಮ್ಮ ವೈದ್ಯರಿಂದ ಅದರ ಬಗ್ಗೆ ಮಾಹಿತಿಯನ್ನು ಪಡೆಯಿರಿ(Consult doctor).

ಜೀರ್ಣಕ್ರಿಯೆ (Digestion) ಸಮಸ್ಯೆ ಉಂಟಾಗಬಹುದು

ನಿಮಗೆ ತಿಳಿದಿರುವಂತೆ, ಪಾಲಕ್ ಸೊಪ್ಪು ನಾರಿನಂಶ ಹೆಚ್ಚಿರುವ ಆಹಾರವಾಗಿದೆ. ಪಾಲಕ್ ಸೊಪ್ಪಿನ ಅತಿಯಾದ ಸೇವನೆಯು ಗ್ಯಾಸ್, ಹೊಟ್ಟೆ ಉಬ್ಬರ, ಹೊಟ್ಟೆನೋವು ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಹುದು. ಅತಿಸಾರ ಮತ್ತು ಜ್ವರವೂ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ, ಪಾಲಕ್ ಸೊಪ್ಪನ್ನು ಮಿತ ಪ್ರಮಾಣದಲ್ಲಿ ಸೇವಿಸೋದು ಒಳ್ಳೆಯದು.
 

ಅನೇಕ ಬಾರಿ ಔಷಧಿಗಳೊಂದಿಗೆ ಗ್ರೀನ್ ವೆಜೆಟೇಬಲ್ಸ್ ತಿನ್ನೋದು ಸುರಕ್ಷಿತವೆಂದು ಪರಿಗಣಿಸಲಾಗೋದಿಲ್ಲ. ಇದರ ಅತಿಯಾದ ಸೇವನೆ ರಕ್ತದೊತ್ತಡ, ಲೋ ಬ್ಲಡ್ ಶುಗರ್‌ಗೆ ಕಾರಣವಾಗಬಹುದು. ನೀವು ಬ್ಲಡ್ ಶುಗರ್(Blood sugar) ಅಥವಾ ರಕ್ತದೊತ್ತಡದ ಔಷಧಿಗಳನ್ನು ಸೇವಿಸುತ್ತಿದ್ದರೆ, ಹೆಚ್ಚು ಪಾಲಕ್ ಸೊಪ್ಪನ್ನು ಸೇವಿಸಬೇಡಿ.

click me!