ಮೀನು, ಮಾಂಸ ಫ್ರೆಶ್ ಇದ್ಯಾ? ಗೊತ್ತು ಮಾಡಿ ಕೊಳ್ಳೋದು ಹೇಗೆ?

First Published | Aug 19, 2022, 4:33 PM IST

ಶ್ರಾವಣ ಮಾಸವನ್ನು ಅತ್ಯಂತ ಪವಿತ್ರ ತಿಂಗಳು ಎಂದು ಪರಿಗಣಿಸಲಾಗಿದೆ. ಈ ತಿಂಗಳು ಶಿವನಿಗೆ ಸಮರ್ಪಿತ ಮತ್ತು ಎಲ್ಲೆಡೆ ಶಿವನ ಮಹಿಮೆ, ಆರಾಧನೆ ನಡೆಯುತ್ತಲೇ ಇರುತ್ತವೆ. ಹಾಗಾಗಿ, ಭಗವಾನ್ ಶಿವನನ್ನು ನಂಬುವ ಹೆಚ್ಚಿನ ಜನರು ಮಾಂಸಾಹಾರ ಸೇವಿಸೋದನ್ನು ನಿಲ್ಲಿಸುತ್ತಾರೆ. ಇತರ ದಿನಗಳಲ್ಲಿ ಅವರು ಪ್ರತಿದಿನ ಮಾಂಸ ಮತ್ತು ಮೀನುಗಳನ್ನು ಸೇವಿಸಿದರೂ ಸಹ. ತಮ್ಮ ನೆಚ್ಚಿನ ಕಬಾಬ್ ಅಥವಾ ಮೀನಿನ ಗ್ರೇವಿ ತಿನ್ನಲು ಶ್ರಾವಣ ಕಳೆಯಲು ಕಾಯುತ್ತಿದ್ದವರಲ್ಲಿ ನೀವೂ ಒಬ್ಬರಾಗಿದ್ದರೆ ಮತ್ತು ಈಗ ಈ ಆಹಾರವನ್ನು ತಿನ್ನಲು ಬಯಸಿದರೆ, ಸ್ವಲ್ಪ ಜಾಗರೂಕರಾಗಿರಿ.

ಮಾನ್ಸೂನಿನಲ್ಲಿ ಮಾಂಸ, ಮೀನು, ಮೊಟ್ಟೆ ಅಥವಾ ಇತರ ಮಾಂಸಾಹಾರದ ಸೇವನೆ ವೈಜ್ಞಾನಿಕ ದೃಷ್ಟಿಯಿಂದ ಒಳ್ಳೆಯದು ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ತುಂಬಾ ಒಳ್ಳೆಯದು. ಆದರೆ ನಾನ್-ವೆಜ್ (Non-veg) ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಅವುಗಳನ್ನು ಇಲ್ಲಿ ಹೇಳಲಾಗಿದೆ.
 

ಮಾನ್ಸೂನ್ ನಲ್ಲಿ(Monsoon) ಮಾಂಸದ ತಾಜಾತನ ಪರಿಶೀಲಿಸುವುದು ಹೇಗೆ?

ಮಳೆಗಾಲದಲ್ಲಿ, ಬ್ಯಾಕ್ಟೀರಿಯಾ, ಫಂಗಸ್ ಮತ್ತು ವೈರಸ್  ವಾತಾವರಣದಲ್ಲಿ ತುಂಬಾ ಆಕ್ಟಿವ್ ಆಗಿರುತ್ತೆ. ಈ ಕಾರಣದಿಂದ, ಮಾಂಸದಂತಹ ಎಲ್ಲಾ ಆಹಾರಗಳು, ಹಾಲು ಮತ್ತು ಬೇಯಿಸಿದ ಆಹಾರದಿಂದ ತಯಾರಿಸಿದ ಹೆಚ್ಚಿನ ವಸ್ತುಗಳು ಬಹಳ ಬೇಗ ಸೋಂಕಿಗೆ ಒಳಗಾಗುತ್ತವೆ. ಹಾಗಾಗಿ, ಮಳೆಗಾಲದಲ್ಲಿ ಹಳಸಿದ ಮಾಂಸ, ಹಳೆ ಮೊಟ್ಟೆ ಇತ್ಯಾದಿಗಳನ್ನು ಕಂಡು ಹಿಡಿಯೋದು ಹೇಗೆ ನೋಡೊಣ. 

Tap to resize

ಮೊಟ್ಟೆಗಳನ್ನು(Egg) ಪರಿಶೀಲಿಸೋದು ಹೇಗೆ?

ಒಂದು ಲೋಟ ನೀರನ್ನು ತುಂಬಿಸಿ ಮತ್ತು ಅದರಲ್ಲಿ ಒಂದು ಮೊಟ್ಟೆ ಹಾಕಿ. ಮೊಟ್ಟೆ ಮುಳುಗಿದರೆ ಅದು ತಾಜಾವಾಗಿದೆ ಎಂದರ್ಥ ಮತ್ತು ಅದು ನೀರಿನಲ್ಲಿ ತೇಲಲು ಪ್ರಾರಂಭಿಸಿದ್ದರೆ ಅದು ಹಳೆಯದಾಗಿರುತ್ತೆ ಮತ್ತು ನೀವು ಅದರ ಸೇವಿಸಬೇಡಿ.

ಚಿಕನ್ (Chicken) ಪರಿಶೀಲಿಸೋದು ಹೇಗೆ?

ಚಿಕನ್ ತಾಜಾವಾಗಿದ್ದರೆ, ಅದರ ಮೇಲ್ಮೈ ತುಂಬಾ ಹೊಳಪಿನಿಂದ ಕೂಡಿರುತ್ತೆ ಮತ್ತು ದೃಢವಾಗಿರುತ್ತೆ. ಹಳೆಯ ಕೋಳಿ ಮೇಲೆ ತಿಳಿ ಕೆಂಪು ಅಥವಾ ಕಪ್ಪು ಗುರುತುಗಳು ಕಾಣಿಸಿಕೊಳ್ಳುತ್ತವೆ. ಚಿಕನ್ ಟಚ್ ಮಾಡಿದರೆ ಅಂಟಿಕೊಳ್ಳೋದಿಲ್ಲ ಮತ್ತು ಅದು ಹಳದಿಯಾಗಿರೋದಿಲ್ಲ. ಈ ರೋಗಲಕ್ಷಣಗಳಲ್ಲಿ ಯಾವುದಾದರೂ ಇದ್ದರೆ, ಕೋಳಿಯು ಹಳೆಯದಾಗಿದೆ ಮತ್ತು ಫುಡ್ ಪಾಯಿಸನ್ ಗೆ ಕಾರಣವಾಗಬಹುದು.

ಮೀನುಗಳನ್ನು(Fish) ಟೆಸ್ಟ್ ಮಾಡೋದು ಹೇಗೆ?

ಮೀನು ತಾಜಾವಾಗಿದೆಯೇ ಅಥವಾ ಇಲ್ಲವೇ ಎಂದು ಪರೀಕ್ಷಿಸಲು, ಮೊದಲನೆಯದಾಗಿ, ಅದರ ಸ್ಕ್ಯಾಲ್ಸ್ ಪರೀಕ್ಷಿಸಿ.  ಸ್ಕ್ಯಾಲ್ಸ್ ಎಂದರೆ ಅದರ ಸುತ್ತಲೂ ರೆಕ್ಕೆಯಂತಹ ಮೊನಚಾದ ಆಕಾರ. ಅವು ತೀಕ್ಷ್ಣವಾಗಿ ಮತ್ತು ಹೊಳೆಯುವಂತೆ ಕಂಡರೆ ಅದು ಫ್ರೆಶ್ ಆಗಿದೆ ಎಂದು ಅರ್ಥ. 

ಇದಲ್ಲದೆ ಮೀನಿನ ಕಣ್ಣುಗಳನ್ನು ನೋಡಿ, ಮೀನಿನ ಕಣ್ಣುಗಳು ಬಿಳಿಯಾಗಿರದಿದ್ದರೆ ಮತ್ತು ಅವು ಹೊಳೆಯುತ್ತಿದ್ದರೆ, ನಂತರ ಅದರ ಮೀನಿನ ಗಿಲ್ಲ್ಸ್ ಪರೀಕ್ಷಿಸಿ. ಅದು ಬ್ರೈಟ್ ಗುಲಾಬಿ ಮತ್ತು ಕೆಂಪು ಬಣ್ಣದಲ್ಲಿ ಕಾಣಬೇಕು. ಹಾಗಿದ್ದರೆ, ಮೀನು ತಾಜಾವಾಗಿದೆ ಎಂದರ್ಥ. ಸ್ಕ್ಯಾಲ್ಸ್  ಚಪ್ಪಟೆಯಾಗಿದ್ದು, ಕಣ್ಣುಗಳ ಮೇಲೆ ಬಿಳಿಯಾಗಿದ್ದರೆ ಮತ್ತು ಗಿಲ್ಲ್ಸ್ (Gills) ಡಲ್ ಆಗಿದ್ದರೆ, ಮೀನುಗಳು ಬಳಸಲು ಯೋಗ್ಯವಲ್ಲ ಎಂದು ಅರ್ಥಮಾಡಿಕೊಳ್ಳಿ.
 

Latest Videos

click me!