ನಮ್ಮಲ್ಲಿ ಅನೇಕರು ಮೊಸರು, ಈರುಳ್ಳಿ ಕಾಂಬಿನೇಷನ್ ಅನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಆಯುರ್ವೇದದ ಪ್ರಕಾರ ಈರುಳ್ಳಿ, ಮೊಸರನ್ನು ಒಟ್ಟಿಗೆ ಸೇವಿಸಬಾರದು. ಏಕೆಂದರೆ ಹಾಗೆ ಮಾಡುವುದರಿಂದ ನೀವು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಿಶೇಷವಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಆಯುರ್ವೇದದ ಪ್ರಕಾರ, ಈರುಳ್ಳಿ, ಮೊಸರು ಎರಡೂ ವಿಭಿನ್ನ ಪರಿಣಾಮವನ್ನು ಬೀರುತ್ತವೆ. ಅಂದರೆ ಈರುಳ್ಳಿ ಬಿಸಿ ಮಾಡುವ ಪರಿಣಾಮವನ್ನು ಬೀರುತ್ತದೆ. ಅದೇ ಮೊಸರು ತಂಪು ಮಾಡುವ ಪರಿಣಾಮವನ್ನು ಬೀರುತ್ತದೆ. ಅಷ್ಟೇ ಅಲ್ಲದೆ ಈರುಳ್ಳಿಯಲ್ಲಿ ಸಲ್ಫರ್ ಸಂಯುಕ್ತಗಳಿವೆ.
ಇವು ಮೊಸರಿನಲ್ಲಿರುವ ಕ್ಯಾಲ್ಸಿಯಂನಂತಹ ಪೋಷಕಾಂಶಗಳನ್ನು ನಮ್ಮ ದೇಹವು ಹೀರಿಕೊಳ್ಳುವುದನ್ನು ತಡೆಯುತ್ತದೆ. ವಾಸ್ತವವಾಗಿ ಮೊಸರು ಮತ್ತು ಈರುಳ್ಳಿಯನ್ನು ಒಟ್ಟಿಗೆ ತಿಂದರೆ ಏನಾಗುತ್ತದೆ ಎಂದು ಈಗ ತಿಳಿಯೋಣ ಬನ್ನಿ.