ಅಡುಗೆ ಎಣ್ಣೆಯಲ್ಲಿ ಅಡಗಿರುವ ಅಪಾಯ, ಈ ತಪ್ಪು ಮಾಡಿದ್ರೆ ಹಾರ್ಟ್ ಅಟ್ಯಾಕ್ ಪಕ್ಕಾ!

Published : Sep 24, 2024, 07:04 PM IST

ಅಡುಗೆ ಎಣ್ಣೆಯಲ್ಲಿ ಅಡಗಿರುವ ಅಪಾಯ! ಗೊತ್ತಿಲ್ಲದೆ ಅಡುಗೆ ಮಾಡಿದ್ರೆ ಹಾರ್ಟ್ ಅಟ್ಯಾಕ್ ಪಕ್ಕಾ. ಯಾವ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದು ಇಲ್ಲಿದೆ ಮಾಹಿತಿ.

PREV
15
ಅಡುಗೆ ಎಣ್ಣೆಯಲ್ಲಿ ಅಡಗಿರುವ ಅಪಾಯ, ಈ ತಪ್ಪು ಮಾಡಿದ್ರೆ ಹಾರ್ಟ್ ಅಟ್ಯಾಕ್ ಪಕ್ಕಾ!

ಈ ಎಣ್ಣೆ ಸೇವಿಸಿದರೆ ಹೃದ್ರೋಗ ಬರುವುದು ಖಚಿತ. ಯಾವಾಗ ಬೇಕಾದರೂ ಹಾರ್ಟ್ ಅಟ್ಯಾಕ್ ಬರಬಹುದು! ಆರೋಗ್ಯವಾಗಿರಲು ಈ ಎಣ್ಣೆ ಸೇವಿಸುವುದನ್ನು ನಿಲ್ಲಿಸಲೇಬೇಕು. ಎಣ್ಣೆಯ ಬೆಲೆ ಹೆಚ್ಚುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಅಡುಗೆ ಎಣ್ಣೆ ಸಿಗುತ್ತದೆ.  ಈ ಎಣ್ಣೆ ಮಲೇಷ್ಯಾದ ಪಾಮ್‌ ಆಯಿಲ್. ಮಾರುಕಟ್ಟೆಯಲ್ಲಿ 40 ರಿಂದ 60 ರೂಪಾಯಿಗೆ ಲೀಟರ್‌ಗೆ ಮಾರಾಟವಾಗುತ್ತದೆ.

25

ಸಾಸಿವೆ, ನೆಲ ಕಡಲೆ ಮತ್ತು ತೆಂಗಿನ ಎಣ್ಣೆ ಜೊತೆಗೆ ಇನ್ನಿತರ ಆರೋಗ್ಯಕರ ಎಣ್ಣೆಯ ಬೆಲೆ ಹೆಚ್ಚುತ್ತಿರುವುದರಿಂದ ಮಲೇಷ್ಯಾದ ಪಾಮ್‌ ಆಯಿಲ್ ಎಣ್ಣೆಯ ಆಮದು ತೀವ್ರವಾಗಿ ಹೆಚ್ಚಿದೆ. ಈ ಎಣ್ಣೆಯಿಂದಾಗಿ ದೇಹದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಸಂಶೋಧನೆಯ ಪ್ರಕಾರ ಈ ಎಣ್ಣೆಯಲ್ಲಿ ಟ್ರಾನ್ಸ್ ಫ್ಯಾಟ್ ಅಂಶ ಹೆಚ್ಚಿದೆ. ಈ ಕೊಬ್ಬು ಹೃದ್ರೋಗದ ಅಪಾಯವನ್ನು ತೀವ್ರವಾಗಿ ಹೆಚ್ಚಿಸುತ್ತದೆ.

35

ಈ ಎಣ್ಣೆಯನ್ನು ನಿಯಮಿತವಾಗಿ ಸೇವಿಸಿದರೆ ಹಾರ್ಟ್ ಅಟ್ಯಾಕ್, ಬ್ರೈನ್ ಸ್ಟ್ರೋಕ್ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ರಿಫೈನ್ಡ್ ಎಣ್ಣೆ ಸೇವಿಸುವ ಕುಟುಂಬಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಈ ಎಣ್ಣೆಯನ್ನು ಉತ್ತಮ ಗುಣಮಟ್ಟದ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡಲಾಗುತ್ತದೆ. ಇದರಿಂದ ಜನರು ತಮಗೆ ಅರಿವಿಲ್ಲದೆಯೇ ಅಪಾಯವನ್ನು ಆಹ್ವಾನಿಸುತ್ತಿದ್ದಾರೆ.

45

ಸಾಮಾನ್ಯವಾಗಿ  ಸಂಸ್ಕರಿಸುವ  ಕಾಟನ್‌ ಸೀಡ್‌ ಆಯಿಲ್‌  ಹೃದಯಕ್ಕೆ ಹಾನಿಕಾರಕವಾದ ಟ್ರಾನ್ಸ್ ಕೊಬ್ಬನ್ನು ಹೊಂದಿರುತ್ತದೆ ಮತ್ತು ಇದರ ಸಂಸ್ಕರಣ  ವಿಧಾನದ ಕಾರಣ ಇದನ್ನು ಬಳಸದೆ ಇರುವುದು ಉತ್ತಮ. ಹೈಡ್ರೋಜೆನೆಟೆಡ್‌ ಆಯಿಲ್‌ಗಳನ್ನು ಹೃದಯದ  ಅಪಾಯಕ್ಕೆ ಕೊಡುಗೆ ನೀಡುವ ಟ್ರಾನ್ಸ್ ಕೊಬ್ಬು ಹೊಂದಿದೆ. ಸೋಯಾಬೀನ್ ಎಣ್ಣೆ, ಮೆಗಾ 6 ಕೊಬ್ಬಿನಾಮ್ಲವನ್ನು ಅಧಿಕವಾಗಿ ಹೊಂದಿರುವ ಜೋಳದ ಎಣ್ಣೆಯನ್ನು ಸೇವಿಸಿದಾಗ ಉರಿಯೂತವನ್ನು ಉತ್ತೇಜಿಸುತ್ತದೆ, ಇದು ಅಡುಗೆಯಲ್ಲಿ ಬಳಸಬಹುದಾದರೂ ದೀರ್ಘಕಾಲದ ಕಾಯಿಲೆಗಳಿಗೆ ಅಪಾಯವನ್ನುಂಟುಮಾಡುತ್ತದೆ. 

55

ಹೃದಯಕ್ಕೆ ಆರೋಗ್ಯಕರವಾದ ಮ್ಯಾನೊಸಾಚುರೇಟೆಡ್ ಕೊಬ್ಬುಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ವಿಶೇಷವಾಗಿ ಎಕ್ಸ್‌ಟ್ರಾ ವರ್ಜಿನ್  ಆಲಿವ್ ಎಣ್ಣೆಯಲ್ಲಿ ಸಮೃದ್ಧವಾಗಿದೆ. ಆಲಿವ್‌ ಎಣ್ಣೆ  ಉರಿಯೂತ ಕಡಿಮೆ ಮಾಡುವುದರ ಜೊತೆಗೆ ಹೃದಯದ ಆರೋಗ್ಯವನ್ನು  ಸುಧಾರಿಸುತ್ತದೆ. ಆವಕಾಡೊ ಆಯಿಲ್‌ನಲ್ಲಿ ಮನೊಸಾಚುರೇಟೆಡ್, ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿದೆ. ಅಧಿಕ ಸ್ಮೋಕ್ ಪಾಯಿಂಟ್‌ ಹೊಂದಿರುವ ಈ ಎಣ್ಣೆ ವಿವಿಧ ಅಡುಗೆ ವಿಧಾನಗಳಿಗೆ ಸೂಕ್ತವಾಗಿದೆ. ಇದನ್ನು ಹೆಚ್ಚಾಗಿ ಡ್ರೆಸ್ಸಿಂಗ್ ಮತ್ತು ಮ್ಯಾರಿನೇಡ್‌ಗಳಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಕನೋಲಾ ಎಣ್ಣೆ, ಗ್ರೇಪ್‌ ಸೀಡ್‌ ಆಯಿಲ್ ಬಳಸಬಹುದು.

Read more Photos on
click me!

Recommended Stories