Global Handwashing Day : ಕೈಗಳನ್ನು ನಿಯಮಿತವಾಗಿ ತೊಳೆಯದಿದ್ರೆ ಆಗೋ ತೊಂದ್ರೆ ಒಂದೆರಡಲ್ಲ

Published : Oct 15, 2022, 04:09 PM ISTUpdated : Oct 15, 2022, 04:12 PM IST

ಪ್ರತಿ ವರ್ಷ, ಅಕ್ಟೋಬರ್ 15 ರಂದು ಜಾಗತಿಕ ಕೈತೊಳೆಯುವ ದಿನವನ್ನು ಆಚರಿಸಲಾಗುತ್ತೆ. ಕೈಗಳನ್ನು ತೊಳೆಯುವ ಚಟುವಟಿಕೆಯು ಹೊಸದೇನೂ ಅಲ್ಲವಾದರೂ, ಇದು ಹೆಚ್ಚಾಗಿ ಹೆಚ್ಚಿನ ಜನರು ಲಘುವಾಗಿ ಪರಿಗಣಿಸುವ, ಇಗ್ನೋರ್ ಮಾಡುವ ಅಭ್ಯಾಸವಾಗಿದೆ. ಆದರೂ, ಕೋವಿಡ್ -19 ಸಾಂಕ್ರಾಮಿಕವು ನಮ್ಮ ಕೈಗಳನ್ನು ಏಕೆ ಸ್ವಚ್ಛವಾಗಿಡಬೇಕು ಎಂಬುದರ ಬಗ್ಗೆ ನಮಗೆ ಸಾಕಷ್ಟು ಕಲಿಸಿದೆ. ಕೊಳಕು ಕೈಗಳು ವೈರಲ್ ಕಾಯಿಲೆಗಳಿಗೆ ಕಾರಣವಾಗುವುದಲ್ಲದೆ, ಮಳೆಗಾಲದಲ್ಲಿ ಜಠರಗರುಳಿನ ಉರಿಯೂತದಂತಹ ಇತರ ರೋಗಗಳಿಗೆ ಕಾರಣವಾಗಬಹುದು. ಹಾಗಿದ್ರೆ ಬನ್ನಿ ಈ ಜಾಗತಿಕ ಕೈತೊಳೆಯುವ ದಿನದ ವಿಶೇಷತೆಯನ್ನು ತಿಳಿಯೋಣ. 

PREV
18
Global Handwashing Day : ಕೈಗಳನ್ನು ನಿಯಮಿತವಾಗಿ ತೊಳೆಯದಿದ್ರೆ ಆಗೋ ತೊಂದ್ರೆ ಒಂದೆರಡಲ್ಲ

ನಾವು ಏನೇ ಮಾಡೋದಾದರೂ ಕೈ ತೊಳೆದೇ ಮಾಡಬೇಕು. ಇದರಿಂದ ಉತ್ತಮ ಆರೋಗ್ಯ ಕಾಪಾಡಲು ಸಹಾಯವಾಗುತ್ತೆ. ಸರಳವಾಗಿ ಹೇಳುವುದಾದರೆ, ಹಗಲಿನಲ್ಲಿ ಆಗಾಗ ನಮ್ಮ ಕೈಗಳನ್ನು ತೊಳೆಯುವುದು (washing hands) ಬಹಳ ಮುಖ್ಯ ಎಂದು ತಜ್ಞರು ಹೇಳುತ್ತಾರೆ, ಏಕೆಂದರೆ ನಾವು ಕೈಗಳಿಂದ ಕೀಟಾಣುಗಳನ್ನು ನಮ್ಮ ದೇಹಕ್ಕೆ ರವಾನೆ ಮಾಡುವಂತಹ ಹಲವಾರು ವಸ್ತುಗಳನ್ನು ಮುಟ್ಟಿರುತ್ತೇವೆ. ಆದುದರಿಂದ ಕೈ ತೊಳೆಯುವುದು ತುಂಬಾನೆ ಮುಖ್ಯ. 

28

ವೈಯಕ್ತಿಕ ನೈರ್ಮಲ್ಯದ (personal hygine) ಕ್ರಮವಾಗಿ ಕೈಗಳನ್ನು ತೊಳೆಯುವುದು ಯಾಕೆ ಮುಖ್ಯ ಅನ್ನೋದರ ಬಗ್ಗೆ ತಜ್ಞರು ಏನು ಹೇಳುತ್ತಾರೆ ನೋಡೋಣ. ನಾವು ನಮ್ಮ ಕೈಗಳನ್ನು ಸರಿಯಾಗಿ ತೊಳೆಯದಿದ್ದರೆ, ಕೊಳಕು ಕೈಗಳಿಂದ ಅತಿಸಾರ, ವೈರಲ್ ಸೋಂಕುಗಳು, ಶೀತ, ಭೇದಿ ಮತ್ತು ಜ್ವರದಂತಹ ಕಾಯಿಲೆಗಳು ಬರುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ.  

38

ನಾವು ಪ್ರತಿದಿನ ಮನೆಯಲ್ಲಿ ಮಾತ್ರವಲ್ಲದೆ ಕೆಲಸದ ಸ್ಥಳದಲ್ಲಿಯೂ ಅನೇಕ ವಿಭಿನ್ನ ಗ್ಯಾಜೆಟ್ ಬಳಸುವುದರಿಂದ, ನಮ್ಮ ಕೈಗಳನ್ನು ತೊಳೆಯುವುದು ಮುಖ್ಯ ಏಕೆಂದರೆ ಪ್ರತಿಯೊಂದು ಗ್ಯಾಜೆಟ್ (gadget) ಅವುಗಳೊಂದಿಗೆ ವಿಭಿನ್ನ ರೋಗಾಣುಗಳನ್ನು ಸಾಗಿಸುತ್ತವೆ ಮತ್ತು ಅದು ನಮ್ಮ ದೇಹವನ್ನು ಪ್ರವೇಶಿಸಬಹುದು ಮತ್ತು ನಮಗೆ ವಿವಿಧ ರೀತಿಯ ರೋಗಗಳನ್ನು ನೀಡಬಹುದು. 

48

ಯಾವುದೇ ವಸ್ತುಗಳನ್ನು ಮುಟ್ಟಿದ ನಂತರ ತಂಪಾದ ಅಥವಾ ಬಿಸಿನೀರಿನಲ್ಲಿ ಕನಿಷ್ಠ 40-60 ಸೆಕೆಂಡುಗಳ ಕಾಲ ಕೈಗಳನ್ನು ತೊಳೆಯಬೇಕು. ಸಾಬೂನನ್ನು ಹಚ್ಚಿ ಮತ್ತು ಅದು ಕೈಯ ಪ್ರತಿಯೊಂದು ಭಾಗವನ್ನು ಆವರಿಸಿದೆ ಎಂದು ಖಚಿತಪಡಿಸಿಕೊಳ್ಳಿ. ಕನಿಷ್ಠ 20 ಸೆಕೆಂಡುಗಳ ಕಾಲ ಸ್ಕ್ರಬ್ (scrub your hand)  ಮಾಡಿ, ನಂತರ ಸ್ವಚ್ಛವಾದ ನೀರಿನಿಂದ ಕೈಗಳನ್ನು ತೊಳೆಯಿರಿ.

58

ಕೀಟಾಣುಗಳು ನಮ್ಮ ದೇಹವನ್ನು ಪ್ರವೇಶಿಸುವುದನ್ನು ತಡೆಯಲು ತಿನ್ನುವ ಮೊದಲು ಕೈಗಳನ್ನು ತೊಳೆಯುವುದು ಅಗತ್ಯವಾಗಿದೆ. ನಿಮ್ಮ ಮೂಗನ್ನು ಉಜ್ಜಿದ ನಂತರ, ಕೆಮ್ಮಿನ ನಂತರ, ಸಾರ್ವಜನಿಕ ಸ್ಥಳಗಳಿಗೆ ಅಥವಾ ಸಾರಿಗೆಗಳಿಗೆ (public transport) ಭೇಟಿ ನೀಡಿದ ನಂತರ ಕೈ ತೊಳೆದೇ ನೀವು ಆಹಾರವನ್ನು ಸೇವಿಸಬೇಕು. ಇಲ್ಲವಾದರೆ ಅಪಾಯ ಖಚಿತ.  

68

ಇಷ್ಟೇ ಅಲ್ಲ ಆಹಾರವನ್ನು ತಿನ್ನುವ ಮೊದಲು ಮತ್ತು ನಂತರ, ಪ್ರಾಣಿಗಳನ್ನು ಸ್ಪರ್ಶಿಸಿದ ನಂತರ ಮತ್ತು ರೋಗಗ್ರಸ್ತ ಜನರನ್ನು ಭೇಟಿ ಮಾಡಿದ ನಂತರ, ನಾವು ನಮ್ಮೊಂದಿಗೆ ಕೊಂಡೊಯ್ಯುವ ರೋಗಾಣುಗಳನ್ನು (bacterias) ಪಡೆಯುವುದನ್ನು ತಡೆಯಲು ಹಗಲಿನಲ್ಲಿ ಕೈಗಳನ್ನು ಆಗಾಗ್ಗೆ ತೊಳೆಯುವುದು ತುಂಬಾನೆ ಮುಖ್ಯವಾಗಿದೆ. 
 

78

ಕೈತೊಳೆಯುವುದು ಮುಖ್ಯವಲ್ಲ ಎಂಬುದು ಒಂದು ಸಾಮಾನ್ಯ ತಪ್ಪು ಕಲ್ಪನೆಯಾಗಿದೆ, ಆದರೆ ಕೈತೊಳೆಯುವುದು ಶೇಕಡಾ 60 ರಷ್ಟು ವೈರಲ್ ರೋಗಗಳನ್ನು ತಡೆಯುತ್ತದೆ ಎಂದು ಅಧ್ಯಯನಗಳಲ್ಲಿ ತಿಳಿಸಲಾಗಿದೆ. ಇದು ಸುಮಾರು 20-40 ಪ್ರತಿಶತದಷ್ಟು ರೋಗಿಗಳಲ್ಲಿ ಅನಾರೋಗ್ಯವನ್ನು (health problem) ತಡೆಯುತ್ತದೆ.  
 

88

ನಮ್ಮ ಕೈಗಳನ್ನು ತೊಳೆಯುವುದು ಮಕ್ಕಳಾಗಿದ್ದಾಗ ನಮಗೆ ಕಲಿಸಿದ ಮೊದಲ ವಿಷಯವಾಗಿದ್ದರೂ, ಅದನ್ನು ಮಾಡದಿರುವುದು ನಮ್ಮನ್ನು ಅನಾರೋಗ್ಯಕ್ಕೆ ತಳ್ಳುತ್ತದೆ. ನಮ್ಮ ಜೊತೆ ಇರುವ ಇತರ ಜನರ ಅನಾರೋಗ್ಯಕ್ಕೂ ಕಾರಣವಾಗುತ್ತೆ. ಆದುದರಿಂದ ಸಾಧ್ಯವಾದಷ್ಟು ಕೈಗಳನ್ನು ತೊಳೆದುಕೊಂಡೇ ಯಾವುದೇ ಆಹಾರವನ್ನು ತಿನ್ನಿ. 

click me!

Recommended Stories