ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡೊವುದು ಆರೋಗ್ಯಕ್ಕೆ ಒಳಿತೋ, ಕೆಡಕೋ?

First Published | Jul 31, 2021, 5:50 PM IST

ಯಾವುದೇ ಕೆಲಸ ಕಾರ್ಯಗಳನ್ನು ಆರೋಗ್ಯಕರವಾಗಿ ನಿರ್ವಹಿಸಲು ನಮ್ಮ ದೇಹದಲ್ಲಿ ಶಕ್ತಿಯ ಸ್ಥಿತಿಯು ಉತ್ತಮವಾಗಿರಬೇಕು. ವ್ಯಾಯಾಮ ಅಥವಾ ಕ್ರೀಡೆಯಲ್ಲಿ ಪಾಲ್ಗೋಳ್ಳುವಾಗ ಸಾಕಷ್ಟು ಜನರು ಖಾಲಿ ಹೊಟ್ಟೆಯಲ್ಲಿಯೇ ಮಾಡುತ್ತಾರೆ. ತಜ್ಞರು ಹೇಳುವ ಪ್ರಕಾರ ವ್ಯಾಯಾಮ ಮತ್ತು ದೇಹ ದಂಡನೆಯನ್ನು ಮಾಡುವಾಗ ಹೊಟ್ಟೆ ಖಾಲಿಯಾಗಿ ಇರಬೇಕು. ಇಲ್ಲವಾದರೆ ತಾಲೀಮು ಮಾಡಲು ಕಷ್ಟವಾಗುವುದು ಎನ್ನಲಾಗುತ್ತದೆ.

ಯಕೃತ್ತಿನಲ್ಲಿ ಇರುವ ಗ್ಲೂಕೋಸ್ ಸ್ನಾಯುಗಳಿಗೆ ಶಕ್ತಿ ನೀಡುತ್ತವೆ. ಹಾಗಾದರೆ ಯಾವ ಕ್ರಮದ ಮೂಲಕ ನಿತ್ಯದ ವ್ಯಾಯಾಮ ಮತ್ತು ದಿನಚರಿಯನ್ನು ಅನುಸರಿಸಬೇಕು? ಎನ್ನುವುದನ್ನು ತಿಳಿಯಲು ಕುತೂಹಲ ಹೊಂದಿದ್ದರೆ ಮುಂದಿನ ವಿವರಣೆಯನ್ನು ಪರಿಶೀಲಿಸಿ.
undefined
2013ರಲ್ಲಿ ನಡೆಸಿದ ಅಧ್ಯಯನದ ಉದ್ದೇಶ ಖಾಲಿ ಹೊಟ್ಟೆಯಲ್ಲಿ ನಡೆಸುವ ತಾಲೀಮು ಆರೋಗ್ಯಕ್ಕೆ ಉತ್ತಮವಾದುದ್ದೇ? ಅಥವಾ ಆಹಾರವನ್ನು ತಿಂದು ತಾಲೀಮು ನಡೆಸುವುದು ಯೋಗ್ಯವೇ ಎನ್ನುವುದಾಗಿತ್ತು.
undefined

Latest Videos


ಈ ಒಂದು ವಿಶೇಷ ಅಧ್ಯಯನಕ್ಕಾಗಿ 12 ಸಕ್ರಿಯ ಪುರುಷರನ್ನು ಒಳಪಡಿಸಲಾಗಿತ್ತು. ಅವರಿಗೆ ಮುಂಜಾನೆ 10 ಗಂಟೆಗೆ ಸರಿಯಾಗಿ ತ್ರೆಡ್‍ಮೀಲ್ ವ್ಯಾಯಾಮ ಮಾಡಲು ಹೇಳಲಾಯಿತು. ಅರ್ಧದಷ್ಟು ಪುರುಷರಿಗೆ ವ್ಯಾಯಾಮ ಪೂರ್ವದಲ್ಲಿ ಸ್ವಲ್ಪ ಆಹಾರ ನೀಡಲಾಗಿತ್ತು.
undefined
ಕೆಲವರಿಗೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಲು ಹೇಳಲಾಯಿತು. ವ್ಯಾಯಾಮದ ನಂತರ ಎಲ್ಲರಿಗೂ ಚಾಕೋಲೇಟ್ ಮಿಲ್ಕ್ ಶೇಕ್ ನೀಡಲಾಯಿತು. ಊಟಕ್ಕೆ ಪಾಸ್ತಾ ನೀಡಲಾಯಿತು. ಅದನ್ನು ಅವರು ಹೊಟ್ಟೆ ತುಂಬುವಷ್ಟು ತಿನ್ನಬಹುದಾಗಿತ್ತು.
undefined
ದೈಹಿಕ ಶಕ್ತಿ ಮತ್ತು ಕೊಬ್ಬಿನ ಬಳಕೆಯಾದ ಪ್ರಮಾಣವನ್ನು ನಿರ್ಣಯಿಸಲಾಯಿತು. ಜೊತೆಗೆ ಮುಂಜಾನೆ ತಾಲೀಮು ಮುಗಿದ ನಂತರ ಕರಗಿದ ಕೊಬ್ಬಿನ ಪ್ರಮಾಣವನ್ನು ಸಹ ಪರಿಗಣಿಸಲಾಯಿತು.
undefined
ಫಲಿತಾಂಶಗಳುಅಧ್ಯಯನದಲ್ಲಿ ಭಾಗವಹಿಸಿದವರ ಫಲಿತಾಂಶವನ್ನು ಗಮನಿಸಿದಾಗ ಆಹಾರವನ್ನು ಸೇವಿಸಿ ವ್ಯಾಯಾಮ ಮಾಡಿದ್ದವರಿಗೆ ಕೊಬ್ಬು ಮತ್ತು ಅನಗತ್ಯವಾದ ಕ್ಯಾಲೋರಿಯಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ.
undefined
ಖಾಲಿ ಹೊಟ್ಟೆಯಲ್ಲಿ ತಾಲೀಮು ನಡೆಸಿದವರಲ್ಲಿ ಶೇ.20ರಷ್ಟು ಹೆಚ್ಚು ಕೊಬ್ಬಿನಾಂಶ ಕರಗಿತ್ತು. ಹಾಗಾಗಿ ಖಾಲಿ ಹೊಟ್ಟೆಯಲ್ಲಿ ನಡೆಸಿದ ವ್ಯಾಯಾಮವು ಕೊಬ್ಬಿನ ನಷ್ಟಕ್ಕೆ ಅತ್ಯಂತ ಅಪೇಕ್ಷಣೀಯ ಫಲಿತಾಂಶ ನೀಡಿದೆ ಎಂದು ತಿಳಿಸಿತು.
undefined
ಖಾಲಿ ಹೊಟ್ಟೆಯ ವ್ಯಾಯಾಮಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಅಥವಾ ತಾಲೀಮು ನಡೆಸುವುದರಿಂದ ದೇಹದಲ್ಲಿ ಸಾಕಷ್ಟು ಕೊಬ್ಬು ಮತ್ತು ಕ್ಯಾಲೋರಿ ಸುಡಲು ಸಹಾಯ ಆಗುವುದು. ಆದರೆ ದೇಹದಲ್ಲಿ ಶಕ್ತಿಯ ಪ್ರಮಾಣ ಅಧಿಕವಾಗಿದ್ದಾಗ ಇದು ಉತ್ತಮ ಫಲಿತಾಂಶ ನೀಡುವುದು.
undefined
ವಯಸ್ಸಾದವರಿಗೆ ಹಾಗೂ ಅನಾರೋಗ್ಯದಲ್ಲಿ ಇದ್ದವರಿಗೆ ವ್ಯಾಯಾಮ ಪೂರ್ವದಲ್ಲಿ ಸ್ವಲ್ಪ ಆಹಾರ ಸೇವಿಸಲು ಸೂಚಿಸಲಾಗುವುದು. ಅದು ಅವರ ಆರೋಗ್ಯ ಮತ್ತು ದೇಹದ ಸ್ಥಿತಿಗೆ ಅನುಗುಣವಾದ ಶಕ್ತಿ ನೀಡುವುದು ಎನ್ನಲಾಗುತ್ತದೆ. ವಯಸ್ಸಾದವರಿಗೆ ಖಾಲಿಹೊಟ್ಟೆಯ ಆರೋಗ್ಯ ಅಷ್ಟು ಆರೋಗ್ಯಕರವಾದುದ್ದಲ್ಲ ಎಂದು ಹೇಳಲಾಗುವುದು.
undefined
ಅನುಸರಿಸಬೇಕಾದ ಕ್ರಮಗಳುವ್ಯಾಯಾಮ ಅಥವಾ ಕ್ರೀಡೆಯಲ್ಲಿ ಭಾಗವಹಿಸುವ ಮೊದಲು ಖಾಲಿ ಹೊಟ್ಟೆ ಬಿಡುವುದು ಕೆಲವರಿಗೆ ಕಷ್ಟ. ಅಂತಹ ಸಮಸ್ಯೆ ಇರುವವರು ಒಂದು ಬಾಳೆಹಣ್ಣನ್ನು ಒಂದು ಟೀ ಚಮಚ ಬೆಣ್ಣೆಯೊಂದಿಗೆ ಅಥವಾ ಗಟ್ಟಿಯಾಗಿ ಬೇಯಿಸಿದ ಮೊಟ್ಟೆಯೊಂದಿಗೆ ಸವಿಯಬಹುದು.
undefined
ವ್ಯಾಯಾಮ ಮಾಡಿದ ಬಳಿಕ ಸ್ವಲ್ಪ ನೀರನ್ನು ಕುಡಿಯಬಹುದು. ನಂತರ ಅಂದರೆ 60-90 ನಿಮಿಷಗಳ ಬಳಿಕ ತಿಂಡಿಯನ್ನು ಸವಿಯಬಹುದು ಎಂದು ಹೇಳಲಾಗುತ್ತದೆ. ಅದು ಆರೋಗ್ಯದ ದೃಷ್ಟಿಯಿಂದ ಉತ್ತಮವಾದ ವಿಧಾನ.
undefined
click me!