ಇದು ಹೊಸದು, ಅಲ್ಲವೇ? ಹೌದು. ಆಲ್ಕೋಹಾಲ್ ದೇಹಕ್ಕೆ ಕೆಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಆದರೆ ವೋಡ್ಕಾ ಬಾಟಲಿಯನ್ನು ಖರೀದಿಸಲು ಹೋಗುವ ಮೊದಲು, ಕಡಿಮೆ ಪ್ರಮಾಣದಲ್ಲಿ ಸೇವಿಸಿದಾಗ ಮಾತ್ರ ಇದು ಪ್ರಯೋಜನಕಾರಿ ಎಂಬುದನ್ನು ಗಮನಿಸುವುದು ಮುಖ್ಯ,
ಸಣ್ಣ ಪ್ರಮಾಣದಲ್ಲಿ ಮಹಿಳೆಯರಿಗೆ ದಿನಕ್ಕೆ 1 ಡ್ರಿಂಕ್ ಮತ್ತು ಪುರುಷರಿಗೆ 2 ಡ್ರಿಂಕ್ ಗಳನ್ನು ಆರೋಗ್ಯಕ್ಕೆ ಉತ್ತಮ. ಒಂದು ಡ್ರಿಂಕ್‌ನಲ್ಲಿ 12 ಔನ್ಸ್ ಬಿಯರ್ (355 ಮಿಲೀ), 5 ಔನ್ಸ್ ವೈನ್ (148 ಮಿಲೀ) ಅಥವಾ 1.5 ಔನ್ಸ್ ಮದ್ಯ (44.3 ಮಿಲೀ) ಸೇರಿರಬಹುದು.
ಶಿಫಾರಸು ಮಾಡಿದ ಮೊತ್ತದ ನಂತರ ಕುಡಿಯುವುದನ್ನು ಮುಂದುವರಿಸಿದರೆ, ಪ್ರಯೋಜನಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ ಮತ್ತು ಅಪಾಯ ಹೆಚ್ಚುತ್ತದೆ.
ದೀರ್ಘಾಯುಷಿಯಾಗಿ ಬದುಕಲುಕೆಲವು ಸಂಶೋಧನೆಗಳು ಮಧ್ಯಮವಾಗಿ ಕುಡಿಯುವುದರಿಂದ ಒಬ್ಬರ ಜೀವಿತಾವಧಿ ಹೆಚ್ಚಿಸುತ್ತದೆ ಮತ್ತು ಒಬ್ಬರು ಹೆಚ್ಚು ಕಾಲ ಬದುಕಲು ಸಹಾಯ ಮಾಡುತ್ತದೆ ಎಂದು ತೋರಿಸುತ್ತದೆ.
ವಾರವಿಡೀ ಮಿತವಾಗಿ ಕುಡಿಯುವುದು ಅತಿಯಾದ ಮದ್ಯಪಾನಕ್ಕಿಂತ ಉತ್ತಮವಾಗಿದೆ ಎಂದು ಕಂಡುಬಂದಿದೆ ಮತ್ತು ಮರಣದ ಅಪಾಯವನ್ನು 25% ಕಡಿಮೆ ಮಾಡಿದೆ ಎಂದು ತೋರಿಸಿದೆ.
ಪಿಎಲ್ ಒಎಸ್ ಮೆಡಿಸಿನ್ ನಿಯತಕಾಲಿಕದಲ್ಲಿ ಪ್ರಕಟವಾದ 2018 ರ ಅಧ್ಯಯನದ ಪ್ರಕಾರ, ಮಿತವಾಗಿ ಕುಡಿಯುವ ಜನರು ಸಂಪೂರ್ಣವಾಗಿ ಆಲ್ಕೋಹಾಲ್ ನಿಂದ ದೂರವಿರುವವರಿಗಿಂತ ಸಾಯುವ ಸಾಧ್ಯತೆ ಕಡಿಮೆ.
ಹೃದಯ ವೈಫಲ್ಯದ ಅಪಾಯವನ್ನು ಕಡಿಮೆ ಮಾಡಿಅತಿಯಾಗಿ ಕುಡಿಯುವುದರಿಂದ ಗಂಭೀರ ಹೃದಯ ಸಮಸ್ಯೆಗಳು ಉಂಟಾಗಬಹುದು, ಆದರೆ ಮಧ್ಯಮ ಮದ್ಯಪಾನವು ಹೃದಯ ವೈಫಲ್ಯದ ಅಪಾಯವನ್ನು ಕಡಿಮೆ ಮಾಡುತ್ತದೆ. ಮಧ್ಯಮ ಮದ್ಯಪಾನವು ಹೃದಯಾಘಾತ, ಪಾರ್ಶ್ವವಾಯು ಅಥವಾ ಗಟ್ಟಿಯಾದ ಅಪಧಮನಿಗಳನ್ನು ಹೊಂದುವ ಸಾಧ್ಯತೆಯನ್ನು 25% ರಿಂದ 40% ನಷ್ಟು ಕಡಿಮೆ ಮಾಡುತ್ತದೆ ಎಂದು ಕಂಡುಬಂದಿದೆ.
ಸಣ್ಣ ಪ್ರಮಾಣದ ಆಲ್ಕೋಹಾಲ್ ಹೆಚ್ಚಿನ ಸಾಂದ್ರತೆಯ ಲಿಪೋಪ್ರೋಟೀನ್ ಕೊಲೆಸ್ಟ್ರಾಲ್ ಮಟ್ಟವನ್ನು (ಎಚ್‌ಡಿಎಲ್) ಹೆಚ್ಚಿಸಬಹುದು, ಇದು ದೇಹಕ್ಕೆ ಒಳ್ಳೆಯದು ಎಂಬ ಅಂಶವು ತಿಳಿದು ಬಂದಿದೆ.
ಇದು ಮೂತ್ರಪಿಂಡದ ಕಲ್ಲುಗಳನ್ನು ತಡೆಯುತ್ತದೆಕಡಿಮೆ ಕುಡಿಯುವ ಜನರು ಮೂತ್ರಪಿಂಡದ ಸಮಸ್ಯೆ ಎದುರಿಸಲಾರದು. ಏಕೆಂದರೆ ಆಲ್ಕೋಹಾಲ್ ಹೆಚ್ಚಾಗಿ ಮೂತ್ರ ವಿಸರ್ಜನೆ ಮಾಡುವಂತೆ ಮಾಡುತ್ತದೆ.
ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಅತಿ ಕುಡಿಯುವುದರಿಂದ ನಿರ್ಜಲೀಕರಣಕ್ಕೆ ಕಾರಣವಾಗಬಹುದು ಮತ್ತು ಅದು ಮೂತ್ರಪಿಂಡದ ಕಲ್ಲುಗಳ ಅಪಾಯ ಹೆಚ್ಚಿಸುತ್ತದೆ. ಆದ್ದರಿಂದ, ಮಿತವಾಗಿ ಕುಡಿಯುವುದು ಮತ್ತು ದೇಹವನ್ನು ನಿಯಂತ್ರಣದಲ್ಲಿಡುವುದು ಮುಖ್ಯ.
ಉತ್ತಮ ಮಾನಸಿಕ ಆರೋಗ್ಯ ಕಾಪಾಡುತ್ತದೆಮಿತವಾದ ಕುಡಿತದ ದೈಹಿಕ ಪ್ರಯೋಜನಗಳ ಹೊರತಾಗಿ, ಕುಡಿತದ ಕೆಲವು ಮಾನಸಿಕ ಪ್ರಯೋಜನಗಳಿವೆ. ಮಧ್ಯಮ ವಾಗಿ ಕುಡಿಯುವ ಜನರು ಸಂತೋಷ ಮತ್ತು ಕೇರ್ ಫ್ರೀ ಎಂದು ಕಂಡು ಬಂದಿದೆ.
ಸ್ನೇಹಿತರೊಂದಿಗೆ ಸೇರಿ ಸ್ವಲ್ಪ ಕುಡಿದಾಗ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಅವರ ಸಾಮಾಜಿಕ ಮತ್ತು ವೈಯಕ್ತಿಕ ಜೀವನದಲ್ಲಿ ಹೆಚ್ಚು ಸಾಮಾಜಿಕ ಮತ್ತು ಸಂತೋಷವಾಗಿರಲು ಅನುವು ಮಾಡಿಕೊಡುತ್ತದೆ. ಆದರೆ ಹೆಚ್ಚಾದರೆ ಆರೋಗ್ಯಕ್ಕೆ ಹಲವು ಸಮಸ್ಯೆಗಳು ಕಾಡುತ್ತವೆ.