ಕೊರೋನಾ ಇಡೀ ವಿಶ್ವವನ್ನೇ ನಡುಗಿಸುತ್ತಿದೆ. ಕೊರೋನಾ ಸೋಂಕಿಗೆ ಇನ್ನೂ ಯಾವುದೇ ಔಷಧಿ ಇಲ್ಲದೇ ಇರುವುದು ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ಗುಂಪಿನಲ್ಲಿ ಯಾರಾದರೂ ಒಬ್ಬರು ಕೆಮ್ಮು ಅಥವಾ ಸೀನಿದರೆ ಸಾಕು ಜನರಿಗೆ ಕೊರೋನಾ ಅಂಟುವ ಭೀತಿ ಕಾಡುತ್ತಿದೆ.ಇದೇ ರೀತಿಯ ಘಟನೆ ಅಮೆರಿಕಾದ ಮಾಲ್‌ನಲ್ಲಿ ನಡೆದಿರುವುದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ದಿನಸಿ ಕೊಳ್ಳಲು ಬಂದ ಮಹಿಳೆ ಸೀನಿದಾಗ ಶಾಪ್ ಕೀಪರ್ ಕೊರೋನಾದ ಭೀತಿಯಿಂದ 26 ಲಕ್ಷ ರೂ. ಮೌಲ್ಯದ ದಿನಸಿಯನ್ನು ಹೊರಗೆ ಎಸೆದಿರುವುದು ವರದಿಯಾಗಿದೆ.