ಕೊರೋನಾ ಲಾಕ್‌ಡೌನ್ - ಪಾಕಿಸ್ತಾನದಲ್ಲಿ ಹಿಟ್ಟಿಗೂ ಹಾಹಾಕಾರ
First Published | Mar 24, 2020, 6:52 PM ISTಕರೋನಾ ವೈರಸ್‌ನಿಂದಾಗಿ ಪಾಕಿಸ್ತಾನವೂ ಲಾಕ್‌ಡೌನ್ ಆಗಿದೆ. ಜನರು ಹಿಟ್ಟು ಮತ್ತು ಪ್ರಮುಖ ವಸ್ತುಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ್ದಾರೆ. ಕರಾಚಿಯಲ್ಲಿ ಬ್ರಾಂಡೆಡ್ ಹಿಟ್ಟಿನ ಕೊರತೆ ಉಂಟಾಗಿದೆ. ಅಕ್ಕಿ, ಬೇಳೆ ಕಾಳುಗಳು, ಸಕ್ಕರೆ, ತುಪ್ಪ, ಅಡುಗೆ ಎಣ್ಣೆ, ಚಹಾ ಎಲೆ, ಹಾಲಿಗೆ ಹೋಲಿಸಿದರೆ ಹಿಟ್ಟಿನ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಪಾಕಿಸ್ತಾನದ ಪತ್ರಿಕೆ 'ಡಾನ್' ವರದಿ ಮಾಡಿದೆ. ಲಾಕ್‌ಡೌನ್ ಕಾರಣದಿಂದ ಮನೆಗಳಲ್ಲಿ ಅಪಾರ ಪ್ರಮಾಣದ ಹಿಟ್ಟು ಮತ್ತು ಇತರ ವಸ್ತುಗಳನ್ನು ಜನರು ಖರೀದಿಸುತ್ತಿರುವುದು ಇದಕ್ಕೆ ಕಾರಣ.