ಕೊರೋನಾ ವೈರಸ್ ಬಿಸಿ ಮುಟ್ಟದ ಕೆಲವಷ್ಟೇ ದೇಶಗಳು ಇವು!

First Published | Mar 28, 2020, 2:18 PM IST

ಚೀನಾದ ವುಹಾನ್‌ನಿಂದ ಪ್ರಾರಂಭವಾದ ಕರೋನಾ ವೈರಸ್ ಇಂದು ವಿಶ್ವದ ಹಲವು ದೇಶಗಳಲ್ಲಿ ಹಾನಿಯನ್ನುಂಟುಮಾಡಿದೆ. ಚೀನಾದ ವೈರಸ್‌ ಕೊರೋನಾ ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಹರಡಿದೆ. ದಿನ ದಿನೇ ತನ್ನ ವ್ತಾಪ್ತಿ ವಿಸ್ತರಿಸುತ್ತಿರುವ ಕೊರೋನಾಗೆ ಇಗಾಗಲೇ ಸಾವಿರಾರು ಜನ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆಯೂ ಏರುತ್ತಿದೆ. ಇದು ಹರಡದಂತೆ ತಡೆಗಟ್ಟಲು ಹಲವು ದೇಶಗಳು ಲಾಕ್‌ಡೌನ್‌ ಆಗಿವೆ. ಆದರೆ ವಿಶ್ವದ ಕೆಲವು ದೇಶಗಳಿಗೆ ವೈರಸ್ ಇನ್ನೂ ಹರಡಿಲ್ಲ.ಈ ಕೆಲವು ದೇಶಗಳಲ್ಲಿ ಶಂಕಿತರು ಕಂಡು ಬಂದಿದ್ದರೂ,  ಅವರ ವರದಿಗಳು ನೆಗಟಿವ್‌ ಆಗಿವೆ. ಕೊರೋನಾ ತಲುಪದ ಈ ದೇಶಗಳು ಇಲ್ಲಿವೆ.
 

ಸಿರಿಯಾ. ಇಬ್ಬರು ಶಂಕಿತರಿದ್ದರು. ಆದರೆ, ವರದಿ ಪಾಸಿಟಿವ್ ಬರಲಿಲ್ಲ. ಬದಲಿಗೆ ನ್ಯೂಮೋನಿಯಾ ದೃಢಪಟ್ಟಿದೆ.
ಲಾವೊ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್: ಈ ದೇಶದಲ್ಲಿ 50 ಜನರು ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ಆದರೆ ಮಾದರಿ ಪರೀಕ್ಷೆ ನಂತರ, ನೆಗಟಿವ್ ಘೋಷಿಸಲಾಯಿತು. ಮೊದಲು ದೇಶದ ಲ್ಯಾಬ್‌ಗಳಲ್ಲಿ ಪರಿಶೀಲಿಸಲಾಯಿತು. ನಂತರ ಅವುಗಳನ್ನು ಆಸ್ಟ್ರೇಲಿಯಾದ WHO ಲ್ಯಾಬ್‌ನಲ್ಲಿ ಪರಿಶೀಲಿಸಲಾದಗಲೂ ರಿಪೋರ್ಟ್‌ ನೆಗಟಿವ್‌ ಬಂದಿದೆ.
Tap to resize

ರಿಪಬ್ಲಿಕ್ ಆಫ್ ಮಾರ್ಷಲ್ ಐಲ್ಯಾಂಡ್ಸ್‌: ಮಾರ್ಚ್ 9 ರಂದು 66 ವರ್ಷದ ವ್ಯಕ್ತಿಯಯನ್ನು ಪರೀಕ್ಷೆಗೊಳಪಡಿಸಲಾಯಿತು. ಆದರೆ, ವರದಿ ಪಾಸಿಟಿವ್ ಇರಲಿಲ್ಲ.
ಸೋಲೋಮನ್ ಐಲ್ಯಾಂಡ್ಸ್ : ಈ ದೇಶದಲ್ಲಿ ಹೊರಗಿನಿಂದ ಹಡಗಿನಲ್ಲಿ ಬಂದ ನಾಲ್ವರಲ್ಲಿ ಕೊರೋನಾ ಲಕ್ಷಣಗಳಿದ್ದವು. ಆದರೆ, ಕೊರೋನಾ ಆಗಿರಲಿಲ್ಲ.
ಟೋಂಗಾ: ಈ ದೇಶದಲ್ಲಿ 19 ವರ್ಷದ ಬಾಲಕಿಗೆ ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದು, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೆ ಗಂಡಲಿನ ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಎರಡರದ್ದೂ ನಗೆಟಿವ್ ರಿಪೋರ್ಟ್.
ಅಂಗೋಲಾ. ಎಲ್ಲ ವರದಿಗಳು ನೆಗಟಿವ್ ಬಂದಿದ್ದು, ಚೀನಾದಿಂದ ಆಗಮಿಸುವವರನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಬಾರ್ಬಡೋಸ್: ಯಾವಾಗ ಚೀನಾದಲ್ಲಿ ಕೋವಿಡ್ 19ರ ಗಲಾಟೆ ಆರಂಭವಾಯಿತೋ, ಆಗಲೇ ಅಲರ್ಟ್ ಆದ ಈ ದೇಶ, ಸೋಂಕು ದೇಶಕ್ಕೆ ಕಾಲಿಡದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.
ರಿಪಬ್ಲಿಕ್‌ ಅಫ್ ಪಲೌ: ಈ ದೇಶದಲ್ಲಿ ಇನ್ನೂ ಒಬ್ಬ ಕೊರೋನಾ ರೋಗಿಯೂ ಕಂಡುಬಂದಿಲ್ಲ.
ಮ್ಯಾನ್ಮಾರ್: ಚೀನಾದಿಂದ ಈ ದೇಶಕ್ಕೆ ಬಂದ ಶಂಕಿತ ವ್ಯಕ್ತಿಯ ರಿಪೋರ್ಟ್‌ ನೆಗಟಿವ್‌ ಆಗಿದೆ. ಆತ ಬಂದ ವಿಮಾನದಿಂದ ಕೇವಲ ಇಬ್ಬರಿಗೆ ಮಾತ್ರ ವಿಮಾನದಿಂದ ಇಳಿಯಲು ಅವಕಾಶ ನೀಡಿ ಉಳಿದವರನ್ನು ವಾಪಸ್ ಕಳುಹಿಸಲಾಗಿದೆ
ಫಿಜಿ: ಫೆಬ್ರವರಿ 19 ರಂದು ಜಪಾನ್‌ನಿಂದ ಮರಳಿದ 37 ವರ್ಷದ ಮಹಿಳೆಯನ್ನು ಕೊರೋನಾ ಇನ್ಫೇಕ್ಟೆಡ್‌ ಎಂದು ಪ್ರತ್ಯೇಕಿಸಲಾಗಿತು. ಮೆಲ್ಬೋರ್ನ್‌ನ WHO ಲ್ಯಾಬ್‌ಗೆ ಕಳುಹಿಸಲಾಗಿದ ಬ್ಲಡ್‌ ಸ್ಯಾಂಪಲ್‌ ವರದಿ ನೆಗಟಿವ್‌ ಆಗಿತ್ತು . ಇದರ ನಂತರ ತನಿಖೆ ನಡೆಸಿದ ಚೀನಾದ 6 ಜನರ ವರದಿಗಳು ನಕಾರಾತ್ಮಕವಾಗಿ ಬಂದವು.

Latest Videos

click me!