ಈ ನಟನ ಸೀಕ್ರೆಟ್ ಶಾಕಿಂಗ್ ಸ್ಟೋರಿ: 8 ಸಾವಿರ ಕೋಟಿ ಆಸ್ತಿ, 3 ಕೋಟಿ ಮನೆ; ದಿನಕ್ಕೆ ಕೈಗೆ ಸಿಗೋ ಬಾಡಿಗೆ ಹಣ ಇಷ್ಟೊಂದು!?

Published : Oct 23, 2026, 03:33 PM IST

ಭಾರತೀಯ ಚಿತ್ರರಂಗದ ಶ್ರೀಮಂತ ನಟ, ಸಾವಿರಾರು ಕೋಟಿ ಆಸ್ತಿಯ ಒಡೆಯ. ಸಿನಿಮಾಗಳ ಜೊತೆಗೆ ದಿನಕ್ಕೆ ಕೋಟ್ಯಂತರ ರೂಪಾಯಿ ಬ್ಯುಸಿನೆಸ್ ಮಾಡುವ ಈ ಸ್ಟಾರ್ ನಟ ಯಾರು? ತಮ್ಮ ಮನೆಯನ್ನೇ ದಿನಕ್ಕೆ 2 ಲಕ್ಷ ರೂಪಾಯಿಗೆ ಬಾಡಿಗೆಗೆ ಕೊಟ್ಟಿರುವ ಆ ಸೂಪರ್ ಸ್ಟಾರ್ ಬಗ್ಗೆ ಇಲ್ಲಿದೆ ಮಾಹಿತಿ ನೋಡಿ..

PREV
16
ಪ್ರಪಂಚದ ಅತಿ ಶ್ರೀಮಂತ ಭಾರತೀಯ ನಟ

ಇವರು ಭಾರತೀಯ ಚಿತ್ರರಂಗದ ಅತಿ ಶ್ರೀಮಂತ ನಟ. ಇವರಷ್ಟು ಸಂಪತ್ತು ಬೇರೆ ಯಾವ ನಟನಿಗೂ ಇಲ್ಲ. ಸಾವಿರಾರು ಕೋಟಿ ಆಸ್ತಿಗೆ ಇವರು ಒಡೆಯ. ತಮ್ಮ ಮನೆಯ ಮುಂದಿರುವ ನೇಮ್ ಬೋರ್ಡ್‌ಗೇ 20 ಲಕ್ಷ ರೂ. ಖರ್ಚು ಮಾಡಿದ್ದಾರೆ ಅಂದರೆ ಇವರ ರೇಂಜ್ ಎಂಥದ್ದು ಅಂತ ನೀವೇ ಊಹಿಸಿ. ಸಿನಿಮಾಗಳು ಮಾತ್ರವಲ್ಲದೆ, ಬೇರೆ ಬೇರೆ ಬ್ಯುಸಿನೆಸ್ ಮೂಲಕವೂ ಇವರು ಕೋಟಿ ಕೋಟಿ ಸಂಪಾದಿಸುತ್ತಾರೆ.

26
ಸಾವಿರಾರು ಕೋಟಿ ಆಸ್ತಿ ಹಾಗೂ ಬ್ಯುಸಿನೆಸ್

ಈ ನಟನಿಗೆ 300 ಕೋಟಿ ರೂ. ಬೆಲೆಬಾಳುವ ಒಂದು ಐಷಾರಾಮಿ ಮನೆ ಇದೆ. ಆ ಮನೆಯನ್ನು ಬಾಡಿಗೆಗೆ ಬಿಟ್ಟು, ಪ್ರತಿ ತಿಂಗಳು ಲಕ್ಷ ಲಕ್ಷ ಹಣ ಗಳಿಸುತ್ತಿದ್ದಾರೆ. ದಿನದ ಬಾಡಿಗೆಯೇ ಬರೋಬ್ಬರಿ 2 ಲಕ್ಷ ರೂಪಾಯಿಗೂ ಹೆಚ್ಚು! ಆ ನಟ ಬೇರಾರೂ ಅಲ್ಲ, ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್. ಈ ಮನೆ ಇರುವುದು ಭಾರತದಲ್ಲಿ ಅಲ್ಲ, ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ. ಈ ಮನೆಯ ವಿಶೇಷತೆ ಏನು ಗೊತ್ತಾ?

36
ರಾಜಮನೆತನದ ವೈಭವ ನೆನಪಿಸುವ ಇಂಟೀರಿಯರ್

ಶಾರುಖ್ ಖಾನ್ ಭಾರತೀಯ ಚಿತ್ರರಂಗದ ಅತಿ ಶ್ರೀಮಂತ ಸ್ಟಾರ್ ಹೀರೋ. ಪ್ರಪಂಚದಾದ್ಯಂತ ಇವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಸಿನಿಮಾಗಳ ಜೊತೆಗೆ ಐಪಿಎಲ್ ಕ್ರಿಕೆಟ್ ತಂಡದ ಮಾಲೀಕತ್ವ ಹಾಗೂ ಹಲವು ಬ್ಯುಸಿನೆಸ್ ಮೂಲಕ ಸಾವಿರಾರು ಕೋಟಿ ಸಾಮ್ರಾಜ್ಯವನ್ನು ಇವರು ಕಟ್ಟಿದ್ದಾರೆ. ಇವರ ಲೈಫ್‌ಸ್ಟೈಲ್ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಮುಂಬೈನಲ್ಲಿರುವ ಇವರ 'ಮನ್ನತ್' ಬಂಗಲೆ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೆ, ವಿದೇಶಗಳಲ್ಲೂ ಶಾರುಖ್ ಖಾನ್‌ಗೆ ಐಷಾರಾಮಿ ಆಸ್ತಿಗಳಿವೆ. ಮುಖ್ಯವಾಗಿ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಇವರದ್ದೊಂದು ಕೋಟ್ಯಂತರ ರೂಪಾಯಿ ಬೆಲೆಬಾಳುವ ಅದ್ಭುತ ಬಂಗಲೆ ಇದೆ.

46
ಅಮೆರಿಕದಲ್ಲಿ 300 ಕೋಟಿಯ ಬಂಗಲೆ

ಅಮೆರಿಕದಲ್ಲಿ 300 ಕೋಟಿಯ ಬಂಗಲೆ

ಅಮೆರಿಕದ ಅತಿ ದುಬಾರಿ ಪ್ರದೇಶವಾದ 'ಬೆವರ್ಲಿ ಹಿಲ್ಸ್' (Beverly Hills) ನಲ್ಲಿ ಶಾರುಖ್ ಖಾನ್ ಈ ಲಕ್ಸುರಿ ಮನೆಯನ್ನು ಹೊಂದಿದ್ದಾರೆ. ಸುಮಾರು 300 ಕೋಟಿ ರೂ.ಗೂ ಹೆಚ್ಚು ಬೆಲೆಬಾಳುವ ಈ ಬಂಗಲೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳಿವೆ. ವಿಶಾಲವಾದ 6 ಬೆಡ್‌ರೂಮ್‌ಗಳು, ಸುಂದರವಾದ ಸ್ವಿಮ್ಮಿಂಗ್ ಪೂಲ್, ಪ್ರೈವೇಟ್ ಕಬಾನಾ ಹಾಗೂ ಆಟವಾಡಲು ಪ್ರತ್ಯೇಕ ಟೆನಿಸ್ ಕೋರ್ಟ್ ಕೂಡ ಇಲ್ಲಿದೆ.

56
ಇಂಟೀರಿಯರ್ ಡಿಸೈನ್ ನೋಡಿದರೆ ರಾಜಮಹಲ್ ನೆನಪಾಗುತ್ತೆ

ಈ ಬಂಗಲೆಯ ಇಂಟೀರಿಯರ್ ಡಿಸೈನ್ ನೋಡಿದರೆ ರಾಜಮಹಲ್ ನೆನಪಾಗುತ್ತದೆ. ಹಾಲಿನಲ್ಲಿರುವ ದೊಡ್ಡ ಸಿಟ್ಟಿಂಗ್ ಏರಿಯಾದಿಂದ ಹೊರಗಿನ ಸುಂದರ ಪ್ರಕೃತಿಯನ್ನು ನೋಡಲು ಸುತ್ತಲೂ ಗ್ಲಾಸ್ ಫಿಟ್ಟಿಂಗ್ಸ್ ಅಳವಡಿಸಿದ್ದಾರೆ. ಸ್ಟೈಲಿಶ್ ಸೋಫಾ ಸೆಟ್‌ಗಳು, ರಾಜವಂಶವನ್ನು ನೆನಪಿಸುವ ವಾಲ್ ಪೇಂಟಿಂಗ್‌ಗಳು, ದುಬಾರಿ ಶೋಪೀಸ್‌ಗಳು ಹಾಗೂ ಪ್ರತಿಯೊಂದು ಮೂಲೆಯಲ್ಲೂ ಇರುವ ವಿಶೇಷ ಲೈಟಿಂಗ್ ಈ ಮನೆಯ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ. ಅಷ್ಟೇ ಅಲ್ಲ, ಇಲ್ಲಿನ ಬಾತ್‌ರೂಮ್‌ಗಳು ಕೂಡ ಒಂದು ದೊಡ್ಡ ಬೆಡ್‌ರೂಮ್‌ನಷ್ಟೇ ವಿಶಾಲವಾಗಿವೆ. ಜಕುಝಿ (Jacuzzi) ಯಂತಹ ಅತ್ಯಾಧುನಿಕ ಸೌಲಭ್ಯಗಳು ಇಲ್ಲಿವೆ.

66
ಸಾವಿರಾರು ಕೋಟಿ ಆಸ್ತಿ

ಶಾರುಖ್ ಖಾನ್ ಈ ಐಷಾರಾಮಿ ಮನೆಯನ್ನು ಕೇವಲ ತಮ್ಮ ರಜೆ ಕಳೆಯಲು ಮಾತ್ರ ಬಳಸುವುದಿಲ್ಲ, ಬದಲಾಗಿ ಬಾಡಿಗೆಗೂ ಕೊಡುತ್ತಾರೆ. ಪ್ರಪಂಚದಾದ್ಯಂತ ಇರುವ ಗಣ್ಯರು ಅಥವಾ ಪ್ರವಾಸಿಗರು ಈ ಬಂಗಲೆಯಲ್ಲಿ ಉಳಿದುಕೊಳ್ಳಬೇಕಾದರೆ ಭಾರಿ ಮೊತ್ತ ಪಾವತಿಸಬೇಕು. ಈ ಮನೆಯಲ್ಲಿ ಒಂದು ದಿನ ಉಳಿದುಕೊಳ್ಳಲು ಬರೋಬ್ಬರಿ 2 ಲಕ್ಷ ರೂಪಾಯಿಗೂ ಹೆಚ್ಚು ಬಾಡಿಗೆ ಕಟ್ಟಬೇಕು. ಸಾವಿರಾರು ಕೋಟಿ ಆಸ್ತಿ ಇದ್ದರೂ, ವಿದೇಶಿ ಪ್ರಾಪರ್ಟಿಗಳನ್ನು ಬಾಡಿಗೆಗೆ ಕೊಟ್ಟು ಹಣ ಗಳಿಸುವ ಶಾರುಖ್ ಖಾನ್ ಅವರ ಬ್ಯುಸಿನೆಸ್ ಮೈಂಡ್ ಎಲ್ಲರಿಗೂ ಅಚ್ಚರಿ ಮೂಡಿಸುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories