21 ದಿನದಲ್ಲಿ 7 ಕೆಜಿ ತೂಕ ಇಳಿಸುವ ಸೀಕ್ರೆಟ್ ಡಯಟ್.!

First Published | Aug 17, 2024, 3:09 PM IST

21 ದಿನಗಳಲ್ಲಿ  7 ಕೆಜಿಯಷ್ಟು  ತೂಕ ಇಳಿಸುವ ಡಯಟ್ ಪ್ಲಾನ್ ಬಗ್ಗೆ ಹೇಳುತ್ತಿದ್ದೇವೆ. ಈ ಪ್ಲಾನ್ ತೂಕ ಇಳಿಸಲು ಸಹಾಯ ಮಾಡುವುದರ ಜೊತೆಗೆ... ಕಾಲಜನ್ ಅನ್ನು ಹೆಚ್ಚಿಸಿ.. ಚರ್ಮವು ಹೊಳೆಯುವಂತೆ ಮಾಡುತ್ತದೆ.
 

Secret Diet Plan for 7 kg Weight Loss in 21 Days mrq
ತೂಕ ಇಳಿಕೆ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತೂಕ ಇಳಿಸಿಕೊಳ್ಳಲು ಹೆಚ್ಚು ಶ್ರಮಪಡುತ್ತಿದ್ದಾರೆ. ಸರಿಯಾದ ಆಹಾರ ಕ್ರಮ ಅನುಸರಿಸದ ಕಾರಣ ತೂಕ ಹೆಚ್ಚಾಗುತ್ತದೆ. ಸರಿಯಾದ ಆಹಾರ ಕ್ರಮ ಅನುಸರಿಸಿದರೆ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ಕೇವಲ 21 ದಿನಗಳಲ್ಲಿ ಸುಲಭವಾಗಿ ಸುಮಾರು 7 ಕೆಜಿ ತೂಕ ಇಳಿಸಬಹುದು.

ಬೆಳಗ್ಗೆ ನಿಮ್ಮ ದಿನವನ್ನು ಜ್ಯೂಸ್‌ ಕುಡಿಯುವ ಮೂಲಕ ಆರಂಭಿಸಬೇಕು. ಈ ಜ್ಯೂಸ್ ಕರುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಎಲ್ಲಾ ರೀತಿಯ ಬೀಜಗಳನ್ನು ಬೆರೆಸಿದ ಸ್ಮೂಥಿ ಕುಡಿಯೋದು ಉತ್ತಮ. ಈ ಜ್ಯೂಸ್ ತೂಕ ಇಳಿಸಲು ಸಹಾಯ ಮಾಡುತ್ತದೆ.

Tap to resize

ಮಧ್ಯಾಹ್ನ ಕನಿಷ್ಠ 100 ಗ್ರಾಂನಷ್ಟು ಮೊಸರು ಇರುವಂತೆ ನೋಡಿಕೊಳ್ಳಬೇಕು. ಸಾಮಾನ್ಯ ಅಕ್ಕಿಯ ಬದಲು ಕಿನೋವಾ ಅಕ್ಕಿ ಬಳಸಬೇಕು. ಬೀಟ್ರೂಟ್ ಸಲಾಡ್ ಸಹ ತೂಕ ಇಳಿಸಲು ಸಹಾಯ ಮಾಡುತ್ತದೆ. ಈ ರೀತಿಯ ಆಹಾರ ಸೇವನೆಯಿಂದ ಪ್ರೋಟೀನ್, ಫೈಬರ್, ಕಬ್ಬಿಣ, ಖನಿಜಗಳು, ಜೀವಸತ್ವಗಳು ನಮ್ಮ ದೇಹಕ್ಕೆ ಸಿಗುತ್ತವೆ. 

ಪ್ರತಿ ಸಂಜೆ  ಕನಿಷ್ಠ 30 ರಿಂದ 40 ನಿಮಿಷ ವ್ಯಾಯಾಮದ ಮೂಲಕ ದೇಹ ದಂಡಿಸಬೇಕು. ವಾಕಿಂಗ್, ಜಾಗಿಂಗ್, ಯೋಗ  ಅಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಹೀಗೆ ಮಾಡೋದರಿಂದ ತೂಕ ಇಳಿಯೋದರ ಜೊತೆ ಆರೋಗ್ಯವಾಗಿರಬಹುದು.

ಸಂಜೆ ವ್ಯಾಯಾಮ ಮಾಡಿದ ನಂತರ ಪ್ರೋಟೀನ್ ಶೇಕ್ ಕುಡಿಯಬೇಕು. ಇದರ ನಂತರ 199 ಗ್ರಾಂ ಬಿಳಿ ಕಡಲೆಯೊಂದಿಗೆ ಪಾಸ್ತಾ ಮಾಡಿ ತಿನ್ನಬಹುದು. ಸಂಜೆ 6 ಗಂಟೆಯ ಒಳಗೆ ತಿನ್ನಬೇಕು.
 

ಮಧ್ಯಂತರ ಉಪವಾಸ

ಬೆಳಿಗ್ಗೆ 10 ಗಂಟೆಗೆ ನೀವು ಆಹಾರ ಸೇವಿಸಿದರೆ ಕೊನೆಯ ಊಟವನ್ನು ಸಂಜೆ 6 ಗಂಟೆಯ ಒಳಗೆ ಮುಗಿಸಬೇಕು.  ಇದರಿಂದ ನೀವು ಉಳಿದ 15 ಗಂಟೆಗಳ ಕಾಲ ಉಪವಾಸ ಇರುತ್ತೀರಿ.  ಇದು ತೂಕ  ಇಳಿಕೆ ಮಾಡಲು ಸಹಾಯ ಮಾಡುತ್ತದೆ.

ಪ್ರತಿ ಊಟದಲ್ಲೂ ಪ್ರೋಟೀನ್; ಫೈಬರ್, ಪೋಷಕಾಂಶಗಳೆಲ್ಲವೂ ಇರುವಂತೆ ನೋಡಿಕೊಳ್ಳಬೇಕು. ಹಾಗೆಯೇ ವ್ಯಾಯಾಮವನ್ನು ಯಾವುದೇ ಕಾರಣಕ್ಕೂ ತಪ್ಪಿಸಬಾರದು. ಹೀಗೆ ಮಾಡುವ ಮೂಲಕ 21 ದಿನದಲ್ಲಿ 7 ಕೆಜಿ ತೂಕ ಇಳಿಸಬಹುದು.

ಈ ರೀತಿಯಾಗಿ ತೂಕ ಇಳಿಸಿದ್ರೆ ಮುಖದ ಕಾಂತಿ ಹೆಚ್ಚಾಗುತ್ತದೆ. ಈ ರೀತಿಯ ಆಹಾರ ಕ್ರಮ ಅನುಸರಿಸಿದರೆ ನೀವು ತೂಕ ಇಳಿಸಿಕೊಳ್ಳುವುದು ಮಾತ್ರವಲ್ಲ ನಿಮ್ಮ ಮುಖದಲ್ಲಿ ಕಾಂತಿ ಹೆಚ್ಚಾಗುವುದನ್ನು ಗಮನಿಸಬಹುದು.

Latest Videos

click me!