ಎಷ್ಟೇ ನೀರು ಕುಡಿದು ಮಲಗಿದರೂ ರಾತ್ರಿ ಗಂಟಲು ಒಣಗಿ ಬಾಯಾರಿಕೆ ಆಗುತ್ತದೆ. ಇದು ನಿಮ್ಮ ನಿದ್ದೆಯ ಗುಣಮಟ್ಟವನ್ನು ಸಹ ಕಡಿತಗೊಳಿಸುತ್ತದೆ. ಹೀಗೆ ರಾತ್ರಿ ಬಾಯಾರಿಕೆ ಆಗೋದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
27
ರಾತ್ರಿ ಆಗಾಗ್ಗೆ ಬಾಯಾರಿಕೆ ಉಂಟಾಗುತ್ತಿದ್ದರೆ ನೀವು ಕೆಲವು ಸಮಸ್ಯೆಗಳಿಂದ ಬಳಲುತ್ತಿದ್ದೀರಿ ಎಂದರ್ಥ. ಈ ಸಮಸ್ಯೆಯಿಂದ ಬಳಲುತ್ತಿದ್ದರೂ ಅಪಾಯಕ್ಕೂ ಮುನ್ನ ಮುಂಜಾಗ್ರತ ಕ್ರಮ ತೆಗೆದುಕೊಳ್ಳುವುದು ಉತ್ತಮವಾಗಿದೆ. ಈ ಸಮಸ್ಯೆ ಅನೇಕ ರೋಗಗಳ ಸಮಸ್ಯೆಯಾಗಿರುವ ಸಾಧ್ಯತೆ ಇರುತ್ತದೆ.
37
ಮಧುಮೇಹಿಗಳಿಗೆ ರಾತ್ರಿ ತುಂಬಾ ಬಾಯಾರಿಕೆಯಾಗುತ್ತದೆ. ರಕ್ತದಲ್ಲಿ ಅಧಿಕ ಸಕ್ಕರೆ ಪ್ರಮಾಣ ಉಂಟಾಗುವ ಕಾರಣದಿಂದ ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕಾಗುತ್ತದೆ. ಅದರ ಜೊತೆಯಲ್ಲಿ ಬಾಯಾರಿಕೆಯೂ ಆಗುತ್ತದೆ. ದೇಹ ನಿರ್ಜಲೀಕರಣವಾದಾಗ ಬಾಯಾರಿಕೆ ಆಗುತ್ತದೆ. ರಾತ್ರಿ ಬಾಯಾರಿಕೆ ಆಗೋದು ಮಧುಮೇಹದ ಲಕ್ಷಣ ಆಗಿರಲೂಬಹುದು.
47
ಇಡೀ ದಿನ ಹೆಚ್ಚು ನೀರು ಕುಡಿಯದಿದ್ದರೆ ದೇಹ ನಿರ್ಜಲೀಕರಣದಿಂದ ಬಳಲುತ್ತದೆ. ನೀರು ಕಡಿಮೆಯಾದಾಗ ದೇಹ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಹಾಗಾಗಿ ರಾತ್ರಿ ದೇಹದಲ್ಲಿ ಖನಿಜಗಳ ಕೊರತೆ ಉಂಟಾಗಿ ಬಾಯಾರಿಕೆ ಆಗುತ್ತದೆ.
57
ರಕ್ತಹೀನತೆಯಿಂದ ಬಳಲುವ ಜನರಿಗೂ ರಾತ್ರಿ ಬಾಯಾರಿಕೆಯಾಗುತ್ತದೆ. ಕೆಂಪು ರಕ್ತಕಣಗಳು ಕಡಿಮೆಯಾದಾಗ ಆಯಾಸ ಮತ್ತು ಸೋಮಾರಿತನ ಉಂಟಾಗುತ್ತದೆ. ಈ ಸಮಸ್ಯೆ ನಿಮ್ಮನ್ನು ರಾತ್ರಿ ಪದೇ ಪದೇ ಎಚ್ಚರಿಗೊಳಿಸುತ್ತದೆ. ರಾತ್ರಿ ಬಾಯಾರಿಕೆ ಆಗ್ತಿದ್ರೆ ರಕ್ತಹೀನತೆ ಇರಬಹುದು.
67
ದೇಹದಲ್ಲಿ ಪ್ರಮುಖ ಖನಿಜಗಳಾದ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಸತು ಅಂಶಗಳ ಕೊರತೆಯಿಂದಾಗಿಯೂ ಬಾಯಾರಿಕೆ ಆಗುತ್ತದೆ. ಕೆಲವರು ರಾತ್ರಿ ಮಲಗುವ ಮುನ್ನ ಮೊಬೈಲ್, ಲ್ಯಾಪ್‌ಟಾಪ್ ನೋಡುತ್ತಿರುತ್ತಾರೆ. ಈ ಅಭ್ಯಾಸವೂ ಬಾಯಾರಿಕೆಗೆ ಕಾರಣವಾಗರುತ್ತದೆ.
77
ಒಂದು ವೇಳೆ ಈ ರೀತಿಯ ಸಮಸ್ಯೆಗೆ ನೀವು ತುತ್ತಾಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳುವುದು ಉತ್ತಮ. ಇಡೀ ದಿನ ನೀವು ಚೆನ್ನಾಗಿ ನೀರು ಕುಡಿಯುತ್ತಿದ್ದರೆ ಈ ಸಮಸ್ಯೆಯೇ ಕಾಣಿಸಿಕೊಳ್ಳಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.