ದಯವಿಟ್ಟು ಇಲ್ಲಿ ಕೇಳಿ, ನಿದ್ದೆಯಲ್ಲಿ ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ!

First Published | Jul 29, 2024, 8:40 PM IST

ಇಡೀ ರಾತ್ರಿ ಮಲಗಿದ ನಂತರವೂ ದಿನವಿಡೀ ದಣಿದ ಅನುಭವವಾಗುತ್ತದೆ? ಹಾಗಾದರೆ ನೀವು ಗಂಭೀರ ಕಾಯಿಲೆ ಸಮಸ್ಯೆ ಎದುರಿಸುತ್ತಿರುವ ಲಕ್ಷಣವಾಗಿರಬಹುದು. ಅಯ್ಯೋ ಇದು ಸಾಮಾನ್ಯವೆಂದು ಎಂದಿಗೂ ನಿರ್ಲಕ್ಷಿಸಬೇಡಿ!

ಇಡೀ ರಾತ್ರಿ ಮಲಗಿದ ನಂತರವೂ ದಿನವಿಡೀ ದಣಿದ ಅನುಭವವಾಗುತ್ತದೆ? ಹಾಗಾದರೆ ನೀವು ಗಂಭೀರ ಕಾಯಿಲೆ ಸಮಸ್ಯೆ ಎದುರಿಸುತ್ತಿರುವ ಲಕ್ಷಣವಾಗಿರಬಹುದು. ಅಯ್ಯೋ ಇದು ಸಾಮಾನ್ಯವೆಂದು ಎಂದಿಗೂ ನಿರ್ಲಕ್ಷಿಸಬೇಡಿ. ರೆಸ್ಟ್‌ಲೆಸ್ ಲೆಗ್ಸ್ ಸಿಂಡ್ರೋಮ್ (RLS) 10% ರಷ್ಟು ವಯಸ್ಸಾದ ವಯಸ್ಕರ ಮೇಲೆ ಪರಿಣಾಮ ಬೀರುತ್ತದೆ. ತಡವಾದ ರೋಗನಿರ್ಣಯದಿಂದ ಚಿಕಿತ್ಸೆಯ ಪರಿಣಾಮ ಬೀರುತ್ತದೆ.

ನೀವು ದಿನವಿಡೀ ದಣಿವು ಮತ್ತು ರಾತ್ರಿಯಿಡೀ ನಿಮ್ಮನ್ನು ಎಚ್ಚರವಾಗಿಸಿದ್ದರೆ ಅದಕ್ಕೆ ಸ್ಲೀಪ್ ಅಪ್ನಿಯ ಸಮಸ್ಯೆ, ನಿದ್ರೆಯ ಕೊರತೆ ಮತ್ತು ರೆಸ್ಟ್ಲೆಸ್ ಲೆಗ್ಸ್ ಸಿಂಡ್ರೋಮ್(Restless legs disease) ಕಾಯಿಲೆ ಕಾಡುತ್ತಿರಬಹುದು. ಈ ಕಾರಣದಿಂದ ಭವಿಷ್ಯದಲ್ಲಿ ಹೃದ್ರೋಗದ ಅಪಾಯವು ಹೆಚ್ಚಾಗುತ್ತದೆ.

Latest Videos


ರೆಸ್ಟ್ಲೆಸ್ ಲೆಗ್ಸ್ ಸಿಂಡ್ರೋಮ್ (RLS) ನ ನಿಖರವಾದ ಕಾರಣ ತಿಳಿದಿಲ್ಲವಾದರೂ, ಇದು ಕಬ್ಬಿಣ ಮತ್ತು ಮೆಗ್ನೀಸಿಯಮ್ ಪ್ರಮಾಣದ ಕೊರತೆ ಸೇರಿದಂತೆ ಕೆಲವು ವಿಟಮಿನ್ ಮತ್ತು ಪೋಷಕಾಂಶಗಳ ಕೊರತೆ ಕಾರಣವಾಗುತ್ತದೆ. ಆ ಕಾರಣಕ್ಕಾಗಿ ಆರೋಗ್ಯಕರ, ಪೌಷ್ಟಿಕಾಂಶಯುಕ್ತ ಆಹಾರವನ್ನು ತಿನ್ನುವುದು ಮತ್ತು ದೇಹಕ್ಕೆ ಅಗತ್ಯವಾದ ಜೀವಸತ್ವ, ಖನಿಜಯುಕ್ತ ಉತ್ತಮ ಆಹಾರ ಸೇವನೆಯಿಂದ ಕಾಯಿಲೆಯನ್ನ ತಡೆಗಟ್ಟಬಹುದಾಗಿದೆ. 

ಒಬ್ಬ ವ್ಯಕ್ತಿಯು ಹೆಚ್ಚಿನ ಒತ್ತಡದಲ್ಲಿದ್ದಾಗ, ಕಾರ್ಟಿಸೋಲ್ ಹಾರ್ಮೋನ್ ದೇಹದಲ್ಲಿ ಬಿಡುಗಡೆಯಾಗುತ್ತದೆ. ಇದು ವಿಶ್ರಾಂತಿ ಮತ್ತು ಮಲಗಲು ತೊಂದರೆಯಾಗುತ್ತದೆ. ಇದರಿಂದ ದಿನವಿಡೀ ಆಯಾಸ ಉಂಟಾಗುತ್ತದೆ.

ದೇಹದಲ್ಲಿ ಕಬ್ಬಿಣದ ಕೊರತೆಯು ಹಗಲಿನಲ್ಲಿ ಆಯಾಸ ಮತ್ತು ನಿದ್ರೆಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಕಬ್ಬಿಣದ ಕೊರತೆಯಿಂದಾಗಿ, ದೇಹದಲ್ಲಿ ರಕ್ತದ ಕೊರತೆ ಪ್ರಾರಂಭವಾಗುತ್ತದೆ.
 

ಕೆಲವು ವೇಳೆ ದೇಹದಲ್ಲಿನ ಬ್ಯಾಕ್ಟೀರಿಯಾದಿಂದಾದ ಸೋಂಕು ಹಗಲಿನಲ್ಲಿ ಆಯಾಸ ಮತ್ತು ನಿದ್ರೆಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹೀಗಾಗಿ ಆರೋಗ್ಯವಾಗಿರಲು ನಿದ್ದೆಯೂ ಬಹಳ ಮುಖ್ಯ. ಪ್ರತಿದಿನ ದೇಹಕ್ಕೆ ಅಗತ್ಯ ಪೋಷಕಾಂಶವುಳ್ಳ ಆಹಾರ ಸೇವನೆ ಮಾಡುವುದು, ಅದರಲ್ಲೂ ಕಬ್ಬಿಣಾಂಶ ಕೊರತೆಯಾಗದಂತೆ ನೋಡಿಕೊಳ್ಳುವ ಮೂಲಕ ಸಮಸ್ಯೆ ನಿವಾರಿಸಬಹುದು.

click me!