ಮುಟ್ಟಿನಲ್ಲಿ ಕಡಿಮೆ ರಕ್ತ ಸ್ರಾವ ಆಗೋದೂ ಒಳ್ಳೇದಲ್ಲ, ಏನು ಮಾಡಬೇಕು ಇದಕ್ಕೆ?

First Published | Jan 13, 2024, 6:08 PM IST

ಕೆಲವೊಮ್ಮೆ ಮುಟ್ಟಿನ ಸಮಯದಲ್ಲಿ ಸೆಳೆತ ತುಂಬಾನೇ ಹೆಚ್ಚಾಗಿರುತ್ತೆ, ಆದರೆ ರಕ್ತಸ್ರಾವವು ತುಂಬಾ ಕಡಿಮೆ ಇರುತ್ತೆ. ಇನ್ನೂ ಕೆಲವೊಮ್ಮೆ 4 ರಿಂದ 5 ದಿನಗಳವರೆಗೆ ಇರುವ ಋತುಚಕ್ರವು ಕೇವಲ ಎರಡು ದಿನಗಳಲ್ಲಿ ಕೊನೆಗೊಳ್ಳುತ್ತದೆ. ಯಾಕೆ ಈ ರೀತಿ ಆಗುತ್ತೆ ಎಂದು ನೀವು ಯೋಚನೆ ಮಾಡಿದ್ದೀರಾ? 
 

ಪ್ರತಿಯೊಬ್ಬ ಮಹಿಳೆಗೂ ತನ್ನ ಸಂತಾನೋತ್ಪತ್ತಿ ವಯಸ್ಸಿನಲ್ಲಿ ಋತುಚಕ್ರ (periods) ಆಗೋದು ಸ್ವಾಭಾವಿಕ. ಆದರೆ ಋತುಸ್ರಾವದ ಸಮಯ ಮತ್ತು ಹರಿವು ಪ್ರತಿಯೊಬ್ಬರಲ್ಲೂ ವಿಭಿನ್ನವಾಗಿರಬಹುದು. ಅಷ್ಟೇ ಅಲ್ಲ, ಒಮ್ಮೆ ನಿಮಗೆ ಸರಿಯಾಗಿ ಬ್ಲೀಡಿಂಗ್ ಆಗಿದ್ರೆ, ಮತ್ತೆ ಕೆಲವೊಮ್ಮೆ ತುಂಬಾ ಕಡಿಮೆ ಬ್ಲೀಡಿಂಗ್ ಆಗುತ್ತೆ. ಯಾಕೆ ಇಷ್ಟೊಂದು ಕಡಿಮೆ ರಕ್ತಸ್ರಾವ ಆಗುತ್ತೆ ಎಂದು ನಿಮಗೂ ಅನಿಸಿರಬಹುದು ಅಲ್ವಾ?  ಅದು ಯಾಕೆ ಅನ್ನೋದನ್ನು ತಿಳಿಯೋಣ. 

ಎಲ್ಲರಿಗೂ ಪಿರಿಯಡ್ಸ್ ಬ್ಲೀಡಿಂಗ್ (bleeding) ಒಂದೇ ರೀತಿಯಾಗಿರುತ್ತೆ ಎಂದು ಹೇಳೊದಕ್ಕೆ ಸಾಧ್ಯವಿಲ್ಲ. ಅದು ಎಲ್ಲರಿಗೂ ಬೇರೆ ಬೇರೆ ರೀತಿಯಾಗಿರುತ್ತೆ. ಅದೇ ರೀತಿ,  ಒಬ್ಬರಿಗೆ ಒಂದು ಬಾರಿ ಇದ್ದಂತಹ ಮುಟ್ಟಿನ ರಕ್ತಸ್ರಾವ, ಇನ್ನೊಂದು ಬಾರಿ ಇರೋದೆ ಇಲ್ಲ. ಕೆಲವೊಮ್ಮೆ ಮುಟ್ಟಿನ ಸಮಯದಲ್ಲಿ ರಕ್ತಸ್ರಾವ ಏಕೆ ಕಡಿಮೆಯಾಗುತ್ತದೆ ಎಂದು ತಿಳಿಯೋಣ.
 

Tap to resize

ಮುಟ್ಟಿನ ಸಮಯದಲ್ಲಿ ಎಷ್ಟು ರಕ್ತಸ್ರಾವ ಸಾಮಾನ್ಯ
ಹೆಚ್ಚಿನ ಮಹಿಳೆಯರು ತಮ್ಮ ಋತುಚಕ್ರದ ಸಮಯದಲ್ಲಿ ಸುಮಾರು 2-3 ದೊಡ್ಡ ಚಮಚ ರಕ್ತವನ್ನು ಹೊಂದಿರುತ್ತಾರೆ. ಆದರೆ ಇದು ಎಲ್ಲರಿಗೂ ವಿಭಿನ್ನವಾಗಿರಬಹುದು. ಒಬ್ಬ ವ್ಯಕ್ತಿಯು ನಿಜವಾಗಿಯೂ ಎಷ್ಟು ರಕ್ತಸ್ರಾವವಾಗಬಹುದು ಎಂದು ನಿರ್ಧರಿಸೋದು ಕಷ್ಟ. ನೀವು ಎಷ್ಟು ಪ್ಯಾಡ್ ಗಳನ್ನು ಬಳಸುತ್ತಿದ್ದೀರಿ, ಟ್ಯಾಂಪೂನ್ ಎಷ್ಟು ವೇಗವಾಗಿ ಬದಲಾಗುತ್ತಿದೆ ಮತ್ತು ಮೆನ್ಸ್ಟ್ರುವಲ್ ಕಪ್ (menstrual cup)ಎಷ್ಟು ರಕ್ತವನ್ನು ಸಂಗ್ರಹಿಸುತ್ತಿದೆ ಇವೆಲ್ಲವೂ ನೀವು ಸರಿಯಾದ ರೀತಿಯಲ್ಲಿ ಋತುಸ್ರಾವ ಹೊಂದುತ್ತೀರೋ ಇಲ್ವೋ ಅನ್ನೋದನ್ನು ಪತ್ತೆ ಮಾಡಲು ಸಹಾಯ ಮಾಡುತ್ತೆ. 
 

ತುಂಬಾನೆ ಕಡಿಮೆ ಬ್ಲೀಡಿಂಗ್ ಆಗೋದರ ಲಕ್ಷಣಗಳು ಯಾವುವು?
ಒಂದು ಪಿರಿಯಡ್ಸ್ ನಲ್ಲಿ ಸಾಮಾನ್ಯ ಇತರ ಪಿರಿಯಡ್ಸ್ ಗಿಂತ ಕಡಿಮೆ ರಕ್ತಸ್ರಾವ
ಪ್ಯಾಡ್ ಗಳು ಅಥವಾ ಟ್ಯಾಂಪೂನ್ ಗಳನ್ನು (tampoons) ಸಾಮಾನ್ಯಕ್ಕಿಂತ ಕಡಿಮೆ ಬದಲಾಯಿಸುವುದು
ಮೊದಲ 1-2 ದಿನಗಳವರೆಗೆ ಭಾರಿ ಹರಿವು ಇರುವುದಿಲ್ಲ, ಆದರೆ ಕಡಿಮೆ ಫ್ಲೋ ಇರುತ್ತೆ.
ಸ್ಥಿರವಾದ ಹರಿವಿನ ಬದಲು ಮೂರನೇ ದಿನದಲ್ಲಿ ಕೇವಲ ಕಲೆಗಳು ಮಾತ್ರ ಕಾಣಿಸುತ್ತವೆ.

ಈ ಕಾರಣಗಳಿಂದಾಗಿ ಋತುಸ್ರಾವದ ಹರಿವು ಕಡಿಮೆಯಾಗಬಹುದು
ಒತ್ತಡ (Stress)

ಮಾನಸಿಕ ಅಥವಾ ದೈಹಿಕ ಒತ್ತಡವು (mental and physical stress) ನಿಮ್ಮ ಋತುಚಕ್ರ, ಹಾರ್ಮೋನ್ ಮಟ್ಟ ಮತ್ತು ಋತುಚಕ್ರದ ಹರಿವನ್ನು ಬದಲಾಯಿಸಬಹುದು, ಇದು ಋತುಚಕ್ರದ ಸಮಯದಲ್ಲಿ ಸಮಸ್ಯೆಗಳು ಕಾಡೋದಕ್ಕೆ ಕಾರಣವಾಗಿವೆ. 

ಡಯಟ್ (Diet)
ಕಳಪೆ ಆಹಾರವು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ಮಹಿಳೆಯ ಋತುಚಕ್ರದ ಮೇಲೆ ಮುಖ್ಯವಾಗಿ ಪರಿಣಾಮ ಬೀರುತ್ತೆ. ಇದು ನಿಮ್ಮ ಋತುಚಕ್ರವನ್ನು ನಿಲ್ಲಿಸಬಹುದು ಅಥವಾ ಕಡಿಮೆ ರಕ್ತದ ಹರಿವು ಇರುವಂತೆ ಸಹ ಮಾಡಬಹುದು.

ನಿದ್ರೆ (Less Sleep)
ಸಾಕಷ್ಟು ನಿದ್ರೆ ಸಿಗದಿರುವುದು ಅಥವಾ ಅನಿಯಮಿತ ನಿದ್ರೆ ನಿಮ್ಮ ಹಾರ್ಮೋನುಗಳಲ್ಲಿ ಏರಿಳಿತಕ್ಕೆ ಕಾರಣವಾಗಬಹುದು. ಪರಿಣಾಮವಾಗಿ, ನಿಮ್ಮ ರಕ್ತದ ಹರಿವಿನ ಮೇಲೂ ಪರಿಣಾಮ ಬೀರಬಹುದು.
 

Image: Getty

ಪಿಸಿಒಎಸ್ (PCOS)
ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS) ನಂತಹ ಸಂತಾನೋತ್ಪತ್ತಿ ಪರಿಸ್ಥಿತಿಗಳು ಹಾರ್ಮೋನ್ ಮಟ್ಟದಲ್ಲಿನ ಬದಲಾವಣೆಗಳಿಂದಾಗಿ ಋತುಚಕ್ರದ ಮೇಲೆ ಪರಿಣಾಮ ಬೀರಬಹುದು. ಇದರಿಂದ ಕಡಿಮೆ ರಕ್ತದ ಹರಿವು ಉಂಟಾಗುತ್ತದೆ. 

ಋತುಚಕ್ರ ಸಾಮಾನ್ಯಕ್ಕಿಂತ ಕಡಿಮೆಯಿದ್ದರೆ, ಈ ಪರಿಹಾರ ಪ್ರಯತ್ನಿಸಿ
ನಿಮ್ಮ ತೂಕವನ್ನು ಆರೋಗ್ಯಕರವಾಗಿರಿಸಿಕೊಳ್ಳಿ (healthy weight)

ಉತ್ತಮ ಆಹಾರವು ತೂಕವನ್ನು ಕಾಪಾಡಿಕೊಳ್ಳಲು, ಕಳೆದುಕೊಳ್ಳಲು ಅಥವಾ ಹೆಚ್ಚಿಸಲು ನಿಮಗೆ ಸಹಾಯ ಮಾಡುತ್ತದೆ. ಆರೋಗ್ಯಕರ ತೂಕವನ್ನು ಹೊಂದಿರುವುದು ಮತ್ತು ನಿಮ್ಮ ದೇಹವನ್ನು ಸಾಕಷ್ಟು ಆಹಾರದಿಂದ ಶಕ್ತಿಯುತಗೊಳಿಸುವುದು ಋತುಚಕ್ರವನ್ನು ನಿಯಂತ್ರಿಸಲು ಅಥವಾ ಸರಿಯಾಗಿ ಋತುಸ್ರಾವ ಆಗಲು ಕಾರಣವಾಗುತ್ತದೆ. 

ಒತ್ತಡವ ಕಡಿಮೆ ಮಾಡುವ ಚಟುವಟಿಕೆಗಳನ್ನು ಮಾಡಿ
ಒತ್ತಡವನ್ನು ನಿರ್ವಹಿಸುವುದು ಋತುಚಕ್ರವನ್ನು ನಿಯಂತ್ರಿಸಲು ಮತ್ತು ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಒತ್ತಡ ನಿವಾರಿಸಲು ವ್ಯಾಯಾಮ, ಹಾಸ್ಯ ಅಥವಾ ಚಲನಚಿತ್ರ ಮೊದಲಾದ ನಿಮ್ಮನ್ನು ನಗಿಸುವ ಚಟುವಟಿಕೆಗಳು, ಧ್ಯಾನ, ಜೊತೆಗೆ ಉತ್ತಮ ನಿದ್ರೆ ಅವಶ್ಯಕ. 

ಹೈಡ್ರೇಟ್ ಆಗಿ ಉಳಿಯುವುದು ಮುಖ್ಯ
ಮಹಿಳೆಯ ಋತುಚಕ್ರದ ಹರಿವು ಕೇವಲ ರಕ್ತದ ಬಗ್ಗೆ ಮಾತ್ರವಲ್ಲ, ಇತರ ದ್ರವಗಳ ಬಗ್ಗೆಯೂ ಆಗಿರುತ್ತೆ, ಅಲ್ಲಿ ದ್ರವವು ಶೇಕಡಾ 90 ರಷ್ಟು ನೀರಿನಿಂದ ಕೂಡಿರುತ್ತದೆ. ದಪ್ಪ ರಕ್ತವು ಚೆನ್ನಾಗಿ ಹರಿಯುವುದು ಸುಲಭವಲ್ಲ, ಆದ್ದರಿಂದ ಮುಟ್ಟಿನ ಸಮಯದಲ್ಲಿ ರಕ್ತಸ್ರಾವವನ್ನು ಹೆಚ್ಚಿಸಲು ಹೈಡ್ರೇಟ್ (hydrate) ಆಗಿರುವುದು ಬಹಳ ಮುಖ್ಯ.

Latest Videos

click me!