ಸಾವಿನ ನಂತರ ಏನಾಗುತ್ತದೆ? ಸಾವಿನ ಕದತಟ್ಟಿ ಬಂದ ಜನ ಈ ಬಗ್ಗೆ ಏನು ಹೇಳ್ತಾರೆ ಕೇಳಿ…

First Published | Jan 10, 2024, 6:29 PM IST

ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ರೆಡ್ಡಿಟ್, ಆರ್ / ಆಸ್ಕ್ ರೀಡ್ ಇಟ್ ನಲ್ಲಿ ಜನರು ತಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಾರೆ. ಜೊತೆಗೆ ಜನರು ತಮ್ಮ ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ಇತರ ಬಳಕೆದಾರರು ಉತ್ತರಿಸುತ್ತಾರೆ. ಕೆಲ ದಿನಗಳ ಹಿಂದೆ, ಬಳಕೆದಾರರು ತಾವು ಸಾವಿನ ಕದ ತಟ್ಟಿ ಬಂದ ಅನುಭವ ಬಿಚ್ಚಿಟ್ಟಿದ್ದಾರೆ. 
 

ಶ್ರೀಮಂತರು ಅಥವಾ ಬಡವರು, ದೊಡ್ಡವರು ಅಥವಾ ಸಣ್ಣವರು, ಮಗು ಅಥವಾ ವೃದ್ಧರು ಯಾರೇ ಆಗಿರಲಿ, ಒಂದು ಪ್ರಶ್ನೆ ಖಂಡಿತವಾಗಿಯೂ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಬರುತ್ತದೆ, ಅದೇನೆಂದರೆ ಸಾವಿನ ನಂತರ ಏನಾಗುತ್ತದೆ? ಸಾವು ಅಂತಹ ಸತ್ಯ, ಒಬ್ಬ ವ್ಯಕ್ತಿಗೆ ಅದರ ಬಗ್ಗೆ ತಿಳಿದಿದ್ದರೆ, ಅವನು ಶಾಂತಿಯುತವಾಗಿ ಮಲಗಲು ಸಾಧ್ಯವಾಗದಿರಬಹುದು, ಆದರೆ ಸಾವಿನ ನಂತರ (after death) ಏನಾಗುತ್ತದೆ ಎಂದು ತಿಳಿದಾಗ, ಅವನು ಬಹುಶಃ ಶಾಂತಿಯುತವಾಗಿ ಸಾಯಬಹುದು!
 

ನಾವು ಇದನ್ನು ಯಾಕೆ ಹೇಳುತ್ತಿದ್ದೇವೆ ಅಂದ್ರೆ ಇತ್ತೀಚೆಗೆ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ (social media platform) ರೆಡ್ ಇಟ್ ನಲ್ಲಿ, ಹಲವು ಜನರು ತಾವು ಹೇಗೆ ಸಾವಿನ ಮನೆಯ ಕದ ತಟ್ಟಿ ಬಂದಿದ್ದಾರೆ ಎನ್ನುವ ಕುತೂಹಲಕಾರಿ ಅಂಶವನ್ನು ತಿಳಿಸಿದರು. ಈ ಜನರ ಕಥೆಯನ್ನು ಕೇಳಿದಾಗ, ನಿಮಗೆ ಗೂಸ್ ಬಂಪ್ ಗಳು ಬರುತ್ತವೆ.
 

Tap to resize

ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ರೆಡ್ಡಿಟ್, ಆರ್ / ಆಸ್ಕ್ ರೀಟರ್ ಇಟ್‌ನಲ್ಲಿ ಒಂದು ಗುಂಪು ಇದೆ, ಅದರಲ್ಲಿ ಜನರು ಆಗಾಗ್ಗೆ ತಮ್ಮ ಮನದ ಮೂಲೆಗಳಲ್ಲಿ ಅಡಗಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಾರೆ. ಜನರು ತಮ್ಮ ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ಇತರ ಬಳಕೆದಾರರು ಅವರಿಗೆ ಉತ್ತರಿಸುತ್ತಾರೆ. ಕೆಲವು ದಿನಗಳ ಹಿಂದೆ ಬಳಕೆದಾರರೊಬ್ಬರು 'ನಿಮ್ಮಲ್ಲಿ ಯಾರಾದರೂ ಸತ್ತು ಮತ್ತೆ ಜೀವಂತವಾಗಿದ್ದರೆ, ಅಂದರೆ ಸಾವಿನ ಕದತಟ್ಟಿ ಬಂದ ಅನುಭವ ಹೊಂದಿದ್ದರೆ ನಿಮ್ಮ ಅನುಭವವನ್ನು ಹಂಚಿಕೊಳ್ಳಿ,' ಎಂದು ಪ್ರಶ್ನಿಸಿದ್ದರು.  ವೈದ್ಯಕೀಯ ಕ್ಷೇತ್ರದಲ್ಲಿ ಇದು ಈ ರೀತಿಯಾಗೋದು ಸಾಧ್ಯ ಎಂದು ಹೇಳಲಾಗಿದೆ. 
 

ಎಂದೂ ಅನುಭವಿಸದ ಶಾಂತಿ ಸಿಗುತ್ತದೆ
ಈ ಪ್ರಶ್ನೆಗೆ ಪ್ರತಿಕ್ರಿಯಿಸುವ ಮೂಲಕ ಅನೇಕ ಜನರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಒಬ್ಬ ಬಳಕೆದಾರರು  'ನನ್ನ ತಂದೆಗೆ ಹೃದಯಾಘಾತವಾಯಿತು. ಅವರ ಹೃದಯ ಬಡಿತ ಇದ್ದಕ್ಕಿದ್ದಂತೆ ನಿಂತುಹೋಯಿತು. ಆಸ್ಪತ್ರೆಯಲ್ಲಿ ಯಂತ್ರದ ಮೇಲಿನ ರೇಖೆ ನೇರವಾಗಿ ಬರುತ್ತಿತ್ತು. ಅವರು ಸತ್ತು ಹೋದರು ಎಂಬ ದುಃಖದಲ್ಲಿರೋವಾಗಲೆ, ಇದ್ದಕ್ಕಿದ್ದಂತೆ ಅವರಿಗೆ ಪ್ರಜ್ಞೆ ಬಂದಿತು ಮತ್ತು ಕೆಲವು ಕ್ಷಣಗಳವರೆಗೆ ಅವರ ಜೀವನದಲ್ಲಿ ಎಂದಿಗೂ ಅನುಭವಿಸದ ಶಾಂತಿಯನ್ನು ಅನುಭವಿಸಿರೋದಾಗಿ ಅವರು ಹೇಳಿದ್ದರು ಎಂದು ತಿಳಿಸಿದ್ದರು.

ಮುಳುಗಿದಂತಹ ಭಾವ 
ಮತ್ತೊಬ್ಬರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ತಾನು ಮುಳುಗಿದ್ದೇನೆ ಎನ್ನುವ ಅನುಭವ ಉಂಟಾಯಿತು ಮತ್ತು ಇದ್ದಕ್ಕಿದ್ದಂತೆ ಕೆಲವು ಕ್ಷಣಗಳವರೆಗೆ ಎಲ್ಲವೂ ಸ್ಥಿರವಾಗಿದೆ ಎಂದು ಅನಿಸಿತು, ನಂತರ ಶಾಂತಿಯನ್ನು ಅನುಭವಿಸಿದೆ ಎಂದು ಒಬ್ಬ ವ್ಯಕ್ತಿ ತಿಳಿಸಿದ್ದಾರೆ.

ಎರಡು ಬಾರಿ ಸಾವನ್ನಪ್ಪಿದ ಅಜ್ಜ 
ಮತ್ತೊಬ್ಬ ವ್ಯಕ್ತಿಯು ಭಯಾನಕ ವಿಷಯವನ್ನು ಹೇಳಿದನು. ಕೆಲವು ಸಮಯದ ಹಿಂದೆ ತನ್ನ ಕುಟುಂಬದ ಅಜ್ಜ ಒಬ್ಬರು ತೀರಿಕೊಂಡರು. ಅವರು ಎರಡು ಬಾರಿ ಸತ್ತಿದ್ದರು, ಎರಡನೇ ಬಾರಿ ಸತ್ತ ನಂತರ ಅವರು ಜೀವಂತವಾಗಿ ಮತ್ತೆ ಬರಲಿಲ್ಲ. ಆದರೆ ಮೊದಲ ಬಾರಿ ಸತ್ತು ಎಚ್ಚರಗೊಂಡಾಗ  ತಮ್ಮ ತಾಯಿ ತನ್ನನ್ನು ಕರೆದೊಯ್ಯಲು ಬಂದಿದ್ದಾರೆ ಎಂದು ಹೇಳಿದ್ದರಂತೆ. ಇದಾದ ನಂತರ ಅವರು ಮತ್ತೆ ಸಾವನ್ನಪ್ಪಿದ್ದರು. 

ಸುತ್ತಲೂ ಸತ್ತ ಜನರು ನಿಂತಿದ್ದರು
ಮತ್ತೊಬ್ಬರು ಹೇಳಿದಂತೆ 2010 ರಲ್ಲಿ, ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಇದ್ದಕ್ಕಿದ್ದಂತೆ ಹೆಚ್ಚಿನ ಬ್ಲೀಡಿಂಗ್ (bleeding) ಆಗಿತ್ತಂತೆ, ಜೊತೆಗೆ ರಕ್ತದೊತ್ತಡ ತುಂಬಾ ಕಡಿಮೆ ಇತ್ತು. ಅವರಿಗೆ ಪ್ರಜ್ಞೆಯೇ ಇರಲಿಲ್ಲವಂತೆ. ತನ್ನ ಸುತ್ತಲೂ ಸತ್ತ ಕುಟುಂಬ ಸದಸ್ಯರು ನಿಂತಿದ್ದಾರೆ ಮತ್ತು ಅವರು ತನ್ನನ್ನು ಕರೆಯುತ್ತಿದ್ದಾರೆ ಅನ್ನೋದು ಗೊತ್ತಾಗುತ್ತಿತ್ತು. ಆದರೆ ಸ್ಪಂದಿಸಲು ಸಾಧ್ಯವಾಗುತ್ತಲೇ ಇರಲಿಲ್ಲವಂತೆ. ಕೊಂಚ ಸಮಯದ ಬಳಿಕ ಮತ್ತೆ ಜೀವ ಬಂದ ಅನುಭವ ಆಗಿರೋದಾಗಿ ಹೇಳಿದ್ದಾರೆ. 
 

Latest Videos

click me!