ನಿಮ್ಮ ಆರೋಗ್ಯದ ವಿಷಯ ಬಂದಾಗಲೆಲ್ಲಾ ನೀವು ಯಾವಾಗಲೂ ನೆನೆಸಿದ ಬಾದಾಮಿಯನ್ನು ಸೇವಿಸಬೇಕು. ವಾಸ್ತವವಾಗಿ, ಬಾದಾಮಿಯನ್ನು ನೆನೆಸುವುದು ಸಿಪ್ಪೆ ಸುಲಿಯುವುದನ್ನು ಸುಲಭಗೊಳಿಸುವುದಲ್ಲದೆ, ಕಾಯಿಗಳ ಎಲ್ಲಾ ಪೋಷಕಾಂಶಗಳನ್ನು ಪಡೆಯುವುದನ್ನು ಸುಲಭಗೊಳಿಸುತ್ತದೆ.
ಬಾದಾಮಿ ತಿನ್ನುವುದರಿಂದ ಅಪಾರ ಪ್ರಯೋಜನಗಳುಬಾದಾಮಿ ವಿಟಮಿನ್ ಇ ಮತ್ತು ಫೈಬರ್, ಒಮೆಗಾ 3 ಕೊಬ್ಬಿನಾಮ್ಲಗಳು, ಒಮೆಗಾ 6 ಕೊಬ್ಬಿನಾಮ್ಲಗಳು ಮತ್ತು ಪ್ರೋಟೀನ್ಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಬಾದಾಮಿಯಲ್ಲಿರುವ ಪ್ರೋಟೀನ್ ಹೊಟ್ಟೆಯನ್ನು ಹೆಚ್ಚು ಸಮಯ ತುಂಬಿಡಲು ಸಹಾಯ ಮಾಡುತ್ತದೆ ಮತ್ತು ಹೆಚ್ಚುವರಿ ಕ್ಯಾಲೊರಿ ಸೇವನೆಯಿಂದ ನಿಮ್ಮನ್ನು ರಕ್ಷಿಸುತ್ತದೆ.
ತೂಕ ನಷ್ಟದಲ್ಲಿ ಬಾದಾಮಿಯ ನೇರ ಪರಿಣಾಮ ಕಂಡುಬರುತ್ತದೆ. ಇದಲ್ಲದೆ, ಬಾದಾಮಿ ನಿಮ್ಮ ಎಲುಬುಗಳನ್ನು ಬಲಪಡಿಸುವುದರ ಜೊತೆಗೆ ನಿಮ್ಮ ರಕ್ತದಲ್ಲಿನ ಸಕ್ಕರೆ ನಿಯಂತ್ರಣವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದುದದಿಂದ ಪ್ರತಿದಿನ ಬಾದಾಮಿಯನ್ನು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಕಚ್ಚಾ ಬಾದಾಮಿ ಅಥವಾ ನೆನೆಸಿದ ಬಾದಾಮಿ, ಯಾವುದು ಉತ್ತಮ??ಬಾದಾಮಿಯ ವಿಷಯಕ್ಕೆ ಬಂದರೆ, ಡ್ರೈ ಮತ್ತು ನೆನೆಸಿದ ಬಾದಾಮಿ ರುಚಿಯಲ್ಲಿ ಮಾತ್ರವಲ್ಲ, ಅವುಗಳ ಪೌಷ್ಠಿಕಾಂಶದಲ್ಲೂ ಭಿನ್ನವಾಗಿರುತ್ತದೆ. ಡ್ರೈ ಬಾದಾಮಿ ಮೇಲಿನ ಕಂದು ಸಿಪ್ಪೆಯು ಟ್ಯಾನಿನ್ ಅನ್ನು ಹೊಂದಿರುತ್ತದೆ, ಇದು ದೇಹದಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ಅಡ್ಡಿಯಾಗುತ್ತದೆ. ನೆನೆಸಿದ ಬಾದಾಮಿಯ ಸಿಪ್ಪೆ ಸುಲಿಯುವುದು ಸುಲಭವಾಗುವುದರಿಂದ, ಬಾದಾಮಿಯ ಎಲ್ಲಾ ಪೋಷಕಾಂಶಗಳನ್ನು ಸಿಪ್ಪೆ ತೆಗೆಯುವ ಮೂಲಕ ನೀವು ಸುಲಭವಾಗಿ ಪಡೆಯಬಹುದು.
ಬಾದಾಮಿ ಹೇಗೆ ನೆನೆಸಬೇಕು?5 ರಿಂದ 8 ಬಾದಾಮಿಗಳನ್ನು ಒಂದು ಕಪ್ ನೀರಿನಲ್ಲಿ ನೆನೆಸಿ. ಕಪ್ ಅನ್ನು ಒಂದು ಮುಚ್ಚಳದಿಂದ ಮುಚ್ಚಿ ಮತ್ತು ಆರರಿಂದ ಏಳು ಗಂಟೆಗಳ ಕಾಲ ಬಿಡಿ. ಬಾದಾಮಿ ಚೆನ್ನಾಗಿ ನೆನೆಸಿದಾಗ ಅವು ಕಂದು ಸಿಪ್ಪೆಯನ್ನು ಸುಲಭವಾಗಿ ಬಿಡುತ್ತವೆ.
ನೆನೆಸಿದ ಬಾದಾಮಿ ಏಕೆ ಉತ್ತಮ ಮತ್ತು ಹೆಚ್ಚು ಪ್ರಯೋಜನಕಾರಿ?ಡ್ರೈ ಬಾದಾಮಿಗಿಂತ ಉತ್ತಮವಾಗಿರುವುದರ ಜೊತೆಗೆ, ನೆನೆಸಿದ ಬಾದಾಮಿಯನ್ನು ತಿನ್ನುವುದರಿಂದ ಇನ್ನೂ ಕೆಲವು ಪ್ರಯೋಜನಗಳಿವೆ. ನೆನೆಸಿದ ಬಾದಾಮಿ ತಿನ್ನುವುದರ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.
ನೆನೆಸಿದ ಬಾದಾಮಿ ಜೀರ್ಣಿಸಿಕೊಳ್ಳಲು ತುಂಬಾ ಸುಲಭ, ಆದ್ದರಿಂದ ಅವು ನಿಮ್ಮ ದೇಹಕ್ಕೆ ಹೆಚ್ಚಿನ ಪೋಷಣೆಯನ್ನು ನೀಡುತ್ತವೆ.
ನೆನೆಸಿದ ಬಾದಾಮಿ ಆರೋಗ್ಯಕರ ಲಘು ಆಹಾರವಾಗಿ ಬಹಳ ಪ್ರಯೋಜನಕಾರಿಯಾಗಿದೆ ಮತ್ತು ಪರಿಣಾಮಕಾರಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ನೆನೆಸಿದ ಬಾದಾಮಿ ವಿಟಮಿನ್ ಬಿ 17 ಅನ್ನು ಹೊಂದಿರುತ್ತದೆ, ಇದು ಕ್ಯಾನ್ಸರ್ ರೋಗಿಗಳಿಗೆ ಅತ್ಯದ್ಭುತವಾಗಿ ಕಾರ್ಯನಿರ್ವಹಿಸುತ್ತದೆ.
ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಅವು ಸಹಾಯ ಮಾಡುತ್ತವೆ ಮತ್ತು ನಿಮ್ಮ ಹೃದಯವನ್ನು ಆರೋಗ್ಯವಾಗಿರಿಸಿಕೊಳ್ಳುತ್ತವೆ.
ಬಾದಾಮಿಯಲ್ಲಿರುವ ವಿಟಮಿನ್ ಇ, ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ, ಇದು ವಯಸ್ಸಾಗುವಿಕೆಯನ್ನು ತಡೆಯುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.