ಪಚನ ಕ್ರಿಯೆ ಉತ್ತಮಗೊಳಿಸುವ ದ್ರಾಕ್ಷಿ, ಮಲಬದ್ಧತೆಗೆ ಮದ್ದು
First Published | Jun 19, 2020, 7:22 PM ISTಒಣದ್ರಾಕ್ಷಿ ನೋಡಲು ಸಣ್ಣದಾದರೂ, ಉಪಯೋಗ ಅದ್ಭುತ. ಹಲವು ಉಪಯೋಗಗಳನ್ನು ಹೊಂದಿರುವ ಒಣದ್ರಾಕ್ಷಿ ಒಂದು ನ್ಯಾಚುರಲ್ ಫುಡ್. ಸಾಮಾನ್ಯವಾಗಿ ಒಣ ದ್ರಾಕ್ಷಿ ಸೇವಿಸಲು ಬೆಳಗ್ಗೆ ಸೂಕ್ತ ಸಮಯ. ಇದು ನಿಮ್ಮ ದೇಹಕ್ಕೆ ಆರೋಗ್ಯಕರ ಆರಂಭವನ್ನು ನೀಡುತ್ತದೆ. ಹಾಗೂ ಜಂಕ್ ಫುಡ್ ತಪ್ಪಿಸಲು ಊಟಗಳ ನಡುವೆ ಲಘು ಆಹಾರವಾಗಿಯೂ ಸೇವಿಸಬಹುದು. ಹಲವು ವಿಟಮಿನ್‌ಗಳು ಹಾಗೂ ಖನಿಜಾಂಶಗಳು ಹೊಂದಿರುವ ಇದು ಪ್ರತಿರೋಧಕ ಶಕ್ತಿ ಹೆಚ್ಚಿಸಿ ಜ್ವರ, ಆ್ಯಸಿಡಿಟಿಯನ್ನು ಹಾಗೂ ಇತರೆ ಹಲವು ಸಮಸ್ಯೆಗಳಿಂದ ರಕ್ಷಣೆ ನೀಡುವುದು.