ಹಾರ್ಟ್‌ ಅಟ್ಯಾಕ್‌ ತಡೆಯುವ 10 ಸಂಗತಿಗಳು!

First Published | Jun 18, 2020, 4:05 PM IST

ಐವತ್ತು ಅರವತ್ತರಲ್ಲಿ ಹಾರ್ಟ್‌ ಅಟ್ಯಾಕ್‌ ಆಗುತ್ತೆ ಅಂದುಕೊಂಡಿದ್ದವರಿಗೆ ಮೂವತ್ತರಲ್ಲೂ ಹೀಗಾಗಬಹುದು ಅಂತ ಶಾಕ್‌ ಕೊಟ್ಟಿದ್ದು ಚಿರಂಜೀವಿ ಸರ್ಜಾ. ಈ ಸಾವು ಹಾರ್ಟ್‌ ಅಟ್ಯಾಕ್‌ ಬಗ್ಗೆ ನಮ್ಮ ಮನಸ್ಸಲ್ಲಿದ್ದ ನಂಬಿಕೆಗಳನ್ನೆಲ್ಲ ಬುಡಮೇಲು ಮಾಡಿತು. ಈ ಹಾರ್ಟ್‌ ಅಟ್ಯಾಕ್‌ ಬಗ್ಗೆ ನೀವು ತಿಳಿಯಲೇಬೇಕಾದ ಅಂಶಗಳು ಇಲ್ಲಿವೆ..

ಕಾಡು ಜನರ ಹಾಗೆ ಬದುಕೋದು ನಮ್ಮಿಂದ ಸಾಧ್ಯವಿಲ್ಲ. ಆದರೆ ಖುಷಿಯಿಂದ ಬದುಕೋದು ಸಾಧ್ಯವಿದೆ. ಸಂತೋಷದಿಂದ ಬದುಕಿದಷ್ಟೂರೋಗ ನಿಮ್ಮಿಂದ ದೂರ ಹೋಗುತ್ತದೆ ಅನ್ನೋದು ಬಹುಮುಖ್ಯ ಸತ್ಯ. ಹಾರ್ಟ್‌ ಅಟ್ಯಾಕ್‌ನಂಥಾ ಸಮಸ್ಯೆಗಳು ಹತ್ತಿರವೂ ಸುಳಿಯಲ್ಲ.
undefined
ಮನಸ್ಸನ್ನು ಆರೋಗ್ಯವಾಗಿ ಇಟ್ಟುಕೊಳ್ಳೋದು ಬಹಳ ಮುಖ್ಯ. ಸಿಟ್ಟು, ಅಸಹನೆ, ಟೆನ್ಶನ್‌ ಇತ್ಯಾದಿಗಳಿಂದ ನಿಮ್ಮ ಹೃದಯದ ಕಾರ್ಯಕ್ಷಮತೆ ಕಡಿಮೆಯಾಗುತ್ತಾ ಹೋಗುತ್ತದೆ. ನಿತ್ಯ ಯೋಗ ಮಾಡಿದರೆ ಮನಸ್ಸು ಆರೋಗ್ಯದಿಂದಿರುತ್ತದೆ. ಪ್ರಾಣಾಯಾಮದ ಮೂಲಕ ಕೆಟ್ಟಯೋಚನೆ ಹೊರ ಹಾಕಬಹುದು.
undefined

Latest Videos


ಹೊಟ್ಟೆಯಲ್ಲಿ ಇನ್ನೂ ಸ್ವಲ್ಪ ಜಾಗವಿರುವಾಗಲೇ ಊಟ ಮಾಡೋದು ನಿಲ್ಲಿಸಿ. ಹೊಟ್ಟೆತುಂಬ ಊಟ ಮಾಡಿದರೆ ಒಂದು ಕಿಮೀ ವೇಗವಾಗಿ ನಡೆದಾಗ ಆಗುವಷ್ಟುಆಯಾಸ ಹೃದಯಕ್ಕಾಗುತ್ತೆ.
undefined
ಊಟ ಮಾಡಿದ ಕೂಡಲೇ ಓಡುವ, ಜೋರಾಗಿ ನಡೆಯೋ ಅಭ್ಯಾಸ ಒಳ್ಳೆಯದಲ್ಲ. ಊಟ ಮಾಡಿ ಕೊಂಚ ಹೊತ್ತಿನ ಬಳಿಕ ನಡೆಯಿರಿ.
undefined
ತಿನ್ನುವ ಆಹಾರದ ಬಗ್ಗೆ ಸ್ಟ್ರೆಸ್‌ ಬೇಡ. ನಾನು ತಿಂದಿದ್ದರಲ್ಲಿ ಪೌಷ್ಠಿಕತೆ ಇದೆಯಾ, ಕಾರ್ಬೊಹೈಡ್ರೇಟ್‌ ಇದೆಯಾ ಅನ್ನೋ ಲೆಕ್ಕಾಚಾರ ಎಲ್ಲ ಬೇಡ. ನಿಮ್ಮ ದೇಹಕ್ಕೆ ಒಗ್ಗುವ ಆರೋಗ್ಯಕರ ಊಟ, ತಿಂಡಿ ಕ್ರಮ ಅನುಸರಿಸಿ.
undefined
ನಿದ್ದೆ ಬಹಳ ಮುಖ್ಯ. ನಿಮ್ಮ ದೇಹಕ್ಕೆ ಎಷ್ಟುನಿದ್ದೆ ಬೇಕು ಅನ್ನೋದು ನಿಮಗೆ ತಿಳಿದಿರುತ್ತದೆ. ಅಷ್ಟುನಿದ್ರೆ ಮಾಡದಿದ್ದರೆ ದೇಹಕ್ಕೆ ಮಾತ್ರವಲ್ಲ, ಹೃದಯಕ್ಕೂ ಕಿರಿಕಿರಿಯೇ.
undefined
ಸಕ್ಕರೆ ಬಳಕೆ ಸಾಧ್ಯವಾದಷ್ಟುಕಡಿಮೆ ಮಾಡಿ. ಬಿಳಿ ಸಕ್ಕರೆ ನಿಮ್ಮ ದೇಹಕ್ಕೆ ಬಹಳ ಮಾರಕ. ಜೋನಿ ಬೆಲ್ಲ, ಕರಿ ಬೆಲ್ಲ ಬಳಕೆಯಿಂದ ಇಂಥಾ ಹಾನಿ ಇರೋದಿಲ್ಲ.
undefined
ಮಾಡುವ ಕೆಲಸದ ಬಗ್ಗೆ ಟೆನ್ಶನ್‌ ಹಚ್ಚಿಕೊಂಡರೆ ಹಾರ್ಟ್‌ಗೆ ಇಷ್ಟಆಗಲ್ಲ. ಹಾರ್ಟ್‌ಫುಲ್‌ ಆಗಿ ಖುಷಿಯಿಂದ ಕೆಲಸ ಮಾಡಿ. ಅತಿಯಾದ ಒತ್ತಡ ಇದ್ದರೂ ಸಮಾಧಾನ ಇರಲಿ. ಅತೀ ಕೆಲಸ ಮಾಡೋದರಿಂದ ತೊಂದರೆ ಇರೋದಿಲ್ಲ. ಟೆನ್ಶನ್‌ನಲ್ಲಿ ಕೆಲಸ ಮಾಡಿದರೆ ಮಾತ್ರ ಸಮಸ್ಯೆ. ಹಾಗಂತ ಕೊಂಚಮಟ್ಟಿನ ಒತ್ತಡವೂ ಇರಬೇಕು.
undefined
ಶ್ರಮದ ಕೆಲಸ ಹೆಚ್ಚೆಚ್ಚು ಮಾಡಿದಷ್ಟುದೇಹ, ಮನಸ್ಸು ಚುರುಕಾಗಿ, ಆರೋಗ್ಯದಿಂದಿರುತ್ತದೆ. ನಿಮಗೆ ಶ್ರಮದ ಕೆಲಸ ಇಲ್ಲ ಅಂದರೆ ನಿತ್ಯವೂ ವ್ಯಾಯಾಮ ತಪ್ಪಿಸಬೇಡಿ.
undefined
ಕೊಲೆಸ್ಟ್ರಾಲ್‌ ಹೃದಯವನ್ನು ಕೊಲ್ಲುತ್ತೆ ಅನ್ನೋದು ಪೂರ್ತಿ ಸತ್ಯವಲ್ಲ. ರಕ್ತ ಹೆಪ್ಪುಗಟ್ಟಿದರೆ ಹೃದಯಾಘಾತವಾಗುತ್ತೆ ಅನ್ನೋದು ಸುಳ್ಳಲ್ಲ. ನಮ್ಮ ಆಹಾರದಲ್ಲಿ ಬೆಳ್ಳುಳ್ಳಿ, ಅರಿಶಿನ, ಶುಂಠಿ, ವಿಟಮಿನ್‌ ಇ ಅಂಶ ಇರುವ ಬಾದಾಮಿ ಇತ್ಯಾದಿ ಸೇವಿಸುತ್ತಿದ್ದರೆ ಹೃದಯದಲ್ಲಿ ರಕ್ತ ಹೆಪ್ಪುಗಟ್ಟೋದು ತಪ್ಪುತ್ತದೆ.
undefined
ಕೊಬ್ಬರಿ ಎಣ್ಣೆಯ ಸೇವನೆ ಹೃದಯಾಘಾತವನ್ನು ತಪ್ಪಿಸುತ್ತದೆ ಎಂದು ಪ್ರಸಿದ್ಧ ಹೃದಯ ತಜ್ಞ ಡಾ.ಬಿ ಎಂ ಹೆಗ್ಡೆ ಅಭಿಪ್ರಾಯಪಡುತ್ತಾರೆ. ತಾಯಿಯ ಹಾಲಿನ ಒಳ್ಳೆಯ ಗುಣಗಳು ಕೊಬ್ಬರಿ ಎಣ್ಣೆಯಲ್ಲೂ ಇರುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ.
undefined
click me!