ಹಸಿ ಅರಶಿನ ತೇಯ್ದು ಬಿಸಿ ನೀರು ಅಥವಾ ಬಿಸಿ ಹಾಲು, ಟೀ ಇತ್ಯಾದಿಗಳಿಗೆ ಸೇರಿಸಿ ಕುಡಿದರೆ ನೆಗಡಿ, ಕೆಮ್ಮು ನಿವಾರಣೆಯಾಗುತ್ತೆ.
ಆ್ಯಂಟಿ ಬ್ಯಾಕ್ಟಿರಿಯಲ್, ಆ್ಯಂಟಿ ಫಂಗಲ್ ಆಗಿ ಕೆಲಸ ಮಾಡೋ ಶಕ್ತಿ ಇದಕ್ಕಿದೆ. ನಿತ್ಯ ಬಳಸುತ್ತಿದ್ದರೆ ಆರೋಗ್ಯ ಸಮಸ್ಯೆ ದೂರವಾಗುತ್ತೆ.
ಇದರಲ್ಲಿ ಉರಿಯೂತದಂಥಾ ಸಮಸ್ಯೆ ಆಗದಂತೆ ತಡೆಯುವ ಅಂಶಗಳಿವೆ. ಇದು ಇಮ್ಯೂನಿಟಿ ಹೆಚ್ಚಿಸಲು ದಿ ಬೆಸ್ಟ್.
ಒಂದು ಸ್ಪೂನ್ ತುಪ್ಪದ ಜೊತೆಗೆ ಒಂದು ತುಂಡು ಹಸಿ ಅರಶಿನ ಸೇವಿಸಿದರೆ ಒಣ ಕೆಮ್ಮು ನಿವಾರಿಸಬಹುದು.
ಜೀರ್ಣಕ್ರಿಯೆ ಸರಾಗ ಮಾಡುತ್ತೆ, ರಕ್ತ ಶುದ್ಧಿಗೂ ಉತ್ತಮ.
ಇನ್ನೂ ಅನೇಕ ಆರೋಗ್ಯಕ್ಕೆ ಪೂರಕವಾದ ಗುಣ ಇದರಲ್ಲಿದೆ. ನಿತ್ಯ ಅರಿಶಿನ ಸೇವನೆ ರೂಢಿಸಿ.
Suvarna News