ಗ್ಯಾಸ್: ಮುಜುಗರಕ್ಕೊಳಗಾಗಿದ್ದೀರಾ? ಹಾಗಿದ್ರೆ ಈ ಆರೋಗ್ಯಕರ ವಿಷ್ಯದ ಕಡೆ ಗಮನಿಸಿ

Suvarna News   | Asianet News
Published : May 22, 2021, 07:00 PM IST

ಆಹಾರವು ದೇಹದಲ್ಲಿ ಸರಿಯಾಗಿ ಪಚನವಾಗದೆ ಕೆಲವೊಮ್ಮೆ ಗಾಳಿ ತುಂಬುತ್ತದೆ. ಇದಕ್ಕೆ ವಾಯು ಎನ್ನುತ್ತಾರೆ. ಇದನ್ನು ನಾವು ತೇಗಿನ ಮೂಲಕ ಅಥವಾ ಗ್ಯಾಸ್ ಪಾಸ್ (ಹೂಸು ಬಿಡುವ) ಮೂಲಕ ಹೊರಹಾಕುತ್ತೇವೆ. ಇದು ಸಾಮಾನ್ಯವಾಗಿ ದೇಹದಲ್ಲಾಗುವ ಪ್ರಕ್ರಿಯೆ. ಎಲ್ಲರಿಗೂ ಇದರ ಅನುಭವ ಸಾಮಾನ್ಯ. ಇದು ನೈಸರ್ಗಿಕ ಪ್ರಕ್ರಿಯೆ ಎನ್ನಬಹುದು. ಕೆಲವರಿಗೆ ಗ್ಯಾಸ್ ಪಾಸ್ ಮಾಡುವುದು ಹೇಸಿಗೆ ಅನಿಸುತ್ತದೆ. ಇದರಲ್ಲಿ ಕೆಲವರು ಬಿಡುವಾಗ ಶಬ್ಧ ಬರುತ್ತದೆ. ಇನ್ನು ಕೆಲವರು ಬಿಡುವಾಗ ವಾಸನೆ ಬರುತ್ತದೆ. 

PREV
110
ಗ್ಯಾಸ್:  ಮುಜುಗರಕ್ಕೊಳಗಾಗಿದ್ದೀರಾ? ಹಾಗಿದ್ರೆ ಈ ಆರೋಗ್ಯಕರ ವಿಷ್ಯದ ಕಡೆ ಗಮನಿಸಿ

ಹೀಗೆ ಆತುರದಲ್ಲಿ ತಿನ್ನುವಾಗ ಗಾಳಿ ಬಾಯಿ ಮೂಲಕ ಹೊಟ್ಟೆಗೆ ಸೇರುತ್ತದೆ ಹಾಗಾಗಿ ಹೊಟ್ಟೆಯಲ್ಲಿ ವಾಯು ತುಂಬಿ ಗುದದ್ವಾರದ ಮೂಲಕ ಹೊರಬರುತ್ತದೆ. ಕೆಲವರು ಹೆಚ್ಚಾಗಿ ಗ್ಯಾಸ್ ಪಾಸ್ ಮಾಡುತ್ತಾರೆ. ಕೆಲವು ಆಹಾರ ಪದ್ಧತಿಗಳನ್ನು ಮತ್ತು ನಮ್ಮ ಜೀವನ ಶೈಲಿಯನ್ನು  ಬದಲಾಯಿಸಿ ಕೊಂಡರೆ ಗ್ಯಾಸ್ ಪಾಸ್ ಮಾಡುವುದು ಕಡಿಮೆಯಾಗುತ್ತದೆ

210

ಆಹಾರವೆಂದರೆ ಊಟವಿರಬಹುದು ಅಥವಾ ತಿಂಡಿ. ಇದನ್ನು ತಿನ್ನುವಾಗ ಗಾಳಿ ಸೇರುತ್ತದೆ. ಅದು ಅವಸರದಿಂದ ಆಹಾರ ಸೇವಿಸಿದರೆ ಹೆಚ್ಚು ಗಾಳಿ ಬಾಯಿ ಮೂಲಕ ಹೊಟ್ಟೆ ಸೇರುತ್ತದೆ. ಹಾಗಾಗಿ ಆಹಾರ ಸೇವಿಸುವಾಗ ನಿಧಾನವಾಗಿ ಜಗಿದು  ಸೇವಿಸಬೇಕು. ಹೀಗೆ ಮಾಡಿದರೆ ಬಾಯಿಯಿಂದ ವಾಯು ಹೋಗೋದು ಕಡಿಮೆಯಾಗುತ್ತದೆ.

310

ಕೆಲವರಿಗೆ ಕೆಲವು ಆಹಾರಗಳು ದೇಹಕ್ಕೆ ಅಲರ್ಜಿ ಉಂಟು ಮಾಡುತ್ತದೆ. ಅಂತಹ ಆಹಾರ ತಿನ್ನುವುದರಿಂದ ದೇಹದಲ್ಲಿ ಹೆಚ್ಚು ವಾಯು ಉತ್ಪತ್ತಿ ಆಗುತ್ತದೆ. ಅಂತಹ ಆಹಾರಗಳು ಕಡಲೆ ಬೀಜ, ದೀಹಲಸು, ಆಲೂಗಡ್ಡೆ, ಕರಿದ ಆಹಾರ, ಧಾನ್ಯ. ಆದಷ್ಟು ಮಟ್ಟಿಗೆ ಯಾವ ಆಹಾರ ತಿಂದರೆ ನಮ್ಮದೇಹಕ್ಕೆ ಆಗುವುದಿಲ್ಲ ಅಂಥವನ್ನು ವರ್ಜಿಸಬೇಕು. ಆಹಾರದಲ್ಲಿ ಜೀರಿಗೆ, ಓಮಕಾಳು, ಶುಂಠಿ ಬಳಸಿ ವಾಯು ಆಗದಂತೆ ತಡೆಯುತ್ತದೆ.

410

ಬಬುಲ್ ಗಮ್ ತಿನ್ನುವುದರಿಂದ ಗಾಳಿ ಹೊಟ್ಟೆ ಸೇರುತ್ತದೆ. ಕೆಲವರು ಬಾಯಿ ವಾಸನೆ ಬರುತ್ತದೆ ಎಂದು ಜಗಿದರೆ ಹೆಚ್ಚಿನ ಗಾಳಿ ಹೊಟ್ಟೆ ಸೇರಿ, ಹೆಚ್ಚು ವಾಯು ಹೊರಹೋಗುತ್ತದೆ. ಹಾಗಾಗಿ ಬಬುಲ್ ಗಮ್ ತಿನ್ನೋದನ್ನು ಕಡಿಮೆ ಮಾಡಿಕೊಳ್ಳಬೇಕು. 

510

 ಉತ್ತಮ ವ್ಯಾಯಾಮ ಆರೋಗ್ಯಕ್ಕೆ ಒಳ್ಳೆಯದು ಇದು ಪಚನ ಕ್ರಿಯೆಯನ್ನು ಹೆಚ್ಚಿಸುತ್ತದೆ. ಊಟದ ಬಳಿಕ ನಡೆದರೆ ಒಳ್ಳೆಯದು ಇದು ಆಹಾರ ಕರಗಲು ಸಹಾಯ ಮಾಡುತ್ತದೆ. 

610

ಸಿಗರೇಟು ಸೇದುವವರಿಗೂ ಗ್ಯಾಸ್ ಜಾಸ್ತಿ ಹೋಗುತ್ತದೆ. ಸಿಗರೇಟ್ ಸೇದುವಾಗ ಗಾಳಿಯು ಬಾಯಿ ಮೂಲಕ ದೇಹ ಸೇರುತ್ತದೆ. ಆರೋಗ್ಯಕ್ಕೆ ಹಾನಿ ಉಂಟುಮಾಡುವ ಇಂತವನ್ನು ಬಿಟ್ಟರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. 

710

ಆದಷ್ಟು ಮೈಗೆ ಅಂಟಿ ಕೊಳ್ಳದ ಬಟ್ಟೆ ತೊಡಬೇಕು. ದೇಹದಲ್ಲಿ ಉತ್ಪತ್ತಿ ಯಾದ ವಾಯು ಹೊರಹೋಗಲು ಆಗದೆ ದೇಹದಲ್ಲಿ ಇದ್ದು ಅಲ್ಲಲ್ಲಿ ನೋವನ್ನು ಉಂಟು ಮಾಡುತ್ತದೆ 

810

ಹೆಚ್ಚು ನೀರು ಕುಡಿಯಬೇಕು. ಇದು ಆಹಾರವನ್ನು ಸರಿಯಾಗಿ ಪಚನವಾಗಲು ಸಹಾಯ ಮಾಡುತ್ತದೆ ಅಲ್ಲದೆ ಮಲಬದ್ಧತೆ ಆಗದಂತೆ ಮಾಡುತ್ತದೆ ಅಲ್ಲದೆ ವಾಯು ದೇಹದಿಂದ ಹೊರ ಹೋಗಲು ಸಹಾಯಮಾಡುತ್ತದೆ. 
 
910

ಮಲಬದ್ಧತೆ ಆಗದಂತೆ ನೋಡಿಕೊಳ್ಳಬೇಕು ಇದು ಕೂಡ ಗ್ಯಾಸ್ ಆಗಲು ಒಂದು ಕಾರಣ. ಹಾಗಾಗಿ ಹೆಚ್ಚು ನಾರಿನ ಅಂಶವಿರುವ ಸೊಪ್ಪು ತರಕಾರಿಗಳನ್ನೂ ತೆಗೆದುಕೊಳ್ಳಬೇಕು. ಡೈರಿ ಆಹಾರ ಇದು ವಾಯು ಉತ್ಪತ್ತಿ ಮಾಡುವ ಕಾರಣ ಆದಷ್ಟು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಿ.

1010

ಹೆಚ್ಚು ಕಾರ್ಬೋಹೈಡ್ರೇಟ್ ಪಾನೀಯ  ಸೇವಿಸೋದು ದೇಹಕ್ಕೆ ಹಾನಿಕಾರಕ. ಇದು ತೇಗು ಮತ್ತು ಗ್ಯಾಸ್ ಹೆಚ್ಚಾಗಿ ಬಿಡುವಂತೆ ಮಾಡುತ್ತದೆ. ಇದು ಜಠರದಲ್ಲಿ ಹೆಚ್ಚು ವಾಯು ಉತ್ಪತ್ತಿ ಮಾಡುತ್ತದೆ. ಇದರ ಬದಲು ಮಿಂಟ್ ಟೀ ಕುಡಿದರೆ  ಒಳ್ಳೆಯದು. 

click me!

Recommended Stories