ಜಿರಳೆ, ಇಲಿ, ಹಲ್ಲಿ ಓಡಿಸಲು ಪಾಪ್​ಕಾರ್ನ್​ ಟ್ರಿಕ್ಸ್​! ಇಷ್ಟು ಸುಲಭನಾ ಇದು? ಹಂತ ಹಂತದ ಮಾಹಿತಿ ಇಲ್ಲಿದೆ

Published : Dec 03, 2025, 07:38 PM IST

ಮನೆಯಲ್ಲಿ ಸಾಮಾನ್ಯವಾಗಿ ಕಾಡುವ ಜಿರಳೆ, ಹಲ್ಲಿ, ಇರುವೆಗಳಂತಹ ಕೀಟಗಳನ್ನು ಓಡಿಸಲು ರಾಸಾಯನಿಕಗಳ ಮೊರೆ ಹೋಗುವುದು ಆರೋಗ್ಯಕ್ಕೆ ಹಾನಿಕಾರಕ. ಆದರೆ, ಪಾಪ್‌ಕಾರ್ನ್, ಸ್ನಾನದ ಸೋಪು ಮತ್ತು ಬೇಕಿಂಗ್ ಪೌಡರ್ ಬಳಸಿ ಮಾಡುವ ಸರಳ ಮನೆಮದ್ದಿನಿಂದ ಈ ಎಲ್ಲಾ ಕೀಟಗಳನ್ನು ಸುಲಭವಾಗಿ ದೂರವಿಡಬಹುದು.

PREV
16
ಜಿರಳೆ ಎನ್ನುವ ಸಮಸ್ಯೆ

ಮನುಷ್ಯರು ಹುಟ್ಟುವ ಮೊದಲೇ ಹುಟ್ಟಿದ್ದು ಜಿರಳೆ ಎನ್ನುವುದು ಅಧ್ಯಯನದಿಂದ ಸಾಬೀತು ಆಗುತ್ತದೆ. ಹೊಸ ಮನೆ ಕಟ್ಟಿಸಿದರೂ ಅದ್ಯಾವುದೋ ಮಾಯೆಯಿಂದ, ಎಷ್ಟೇ ಮನೆ ಸ್ವಚ್ಛ ಇಟ್ಟರೂ ಜಿರಳೆ ಕಾಟವಂತೂ ಇದ್ದೇ ಇದೆ.

26
ರಾಸಾಯನಿಕದ ಸಮಸ್ಯೆ

ಅದರ ಜೊತೆಗೇನೇ ಹಲ್ಲಿಗಳು ಕೂಡ ಕಾಣಿಸಿಕೊಳ್ಳುವುದು ಸಾಮಾನ್ಯ. ಜಿರಳೆಗಳನ್ನು ಸಾಯಿಸಲು ಹಲವಾರು ರಾಸಾಯನಿಕ ಸಿಂಪಡಣೆಗಳು ಮಾರುಕಟ್ಟೆಯಲ್ಲಿ ಸಿಕ್ಕರೂ, ಅವು ಆರೋಗ್ಯಕ್ಕೆ ಅಷ್ಟೇ ಡೇಂಜರಸ್​, ಅವುಗಳಿಂದ ಭಯಾನಕ ರೋಗಗಳು ಬರುತ್ತವೆ ಎನ್ನುವುದು ಇದಾಗಲೇ ಸಾಬೀತು ಆಗಿದೆ.

36
ಸುಲಭದ ಉಪಾಯ

ಇನ್ನು ಹಲ್ಲಿಗಳನ್ನು ಸಾಯಿಸಲು ಕೆಲವರು ಇಷ್ಟಪಡುವುದಿಲ್ಲ. ಅದರ ಜೊತೆ ಇಲಿಗಳ ಕಾಟವಿದ್ದರಂತೂ ದೇವರೇ ಗತಿ ಎನ್ನುವ ಸ್ಥಿತಿ ಇರುತ್ತದೆ. ಆದರೆ ಇವೆಲ್ಲವುಗಳನ್ನೂ ಹಲವರಿಗೆ ಇಷ್ಟವಾಗುವ ಪಾಪ್​ಕಾರ್ನ್​ನಿಂದ ಓಡಿಸಬಹುದು ಎನ್ನುವುದು ನಿಮಗೆ ಗೊತ್ತೆ?

46
ಪಾಪ್​ಕಾರ್ನ್​

ಕ್ವಿಕ್​ಟಿಪ್​ ಕಾರ್ನರ್​ ಎನ್ನುವ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಇದನ್ನು ಶೇರ್​ ಮಾಡಲಾಗಿದೆ. ಪಾಪ್​ಕಾರ್ನ್​ ರೆಡಿಮೇಡ್​ ಆಗಿರಬಹುದು, ಇಲ್ಲವೇ ಅದನ್ನು ಮನೆಯಲ್ಲಿಯೇ ಐದು ನಿಮಿಷದಲ್ಲಿ ಸಿದ್ಧಪಡಿಸಲು ಇರುವ ಕಾರ್ನ್​ ಆಗಿರಬಹುದು. ಒಟ್ಟಿನಲ್ಲಿ ಪಾಪ್​ಕಾರ್ನ್​ ಅನ್ನು ಮೊದಲಿಗೆ ಪುಡಿ ಮಾಡಿಕೊಳ್ಳಬೇಕು.

56
ಸ್ನಾನದ ಸೋಪ್​

ಪುಡಿಯಾಗಿರುವ ಪಾಪ್​ಕಾರ್ನ್​ ಅನ್ನು ಒಂದು ಕಂಟೇನರ್​ಗೆ ಹಾಕಿಕೊಳ್ಳಬೇಕು. ಬಳಿಕ ನೀವು ಉಪಯೋಗಿಸುವ ಯಾವುದೇ ಒಂದು ಸ್ನಾನದ ಸಾಬೂನನ್ನು ತುರಿದು ಅದರ ಪುಡಿಯನ್ನು ಅದೇ ಕಂಟೇನರ್​ನಲ್ಲಿ ಮಿಕ್ಸ್ ಮಾಡಬೇಕು.

66
ಹತ್ತಿರ ಸುಳಿಯುವುದಿಲ್ಲ

ಅದಕ್ಕೆ ಬೇಕಿಂಗ್​ ಪೌಡರ್​ ಅನ್ನು ಮಿಕ್ಸ್​ ಮಾಡಬೇಕು. ಕಾಲು ಟೀ ಚಮಚ ಸಾಕಾಗುತ್ತದೆ. ಅದನ್ನು ಚೆನ್ನಾಗಿ ಮಿಕ್ಸ್​ ಮಾಡಬೇಕು. ಎಲ್ಲವೂ ಚೆನ್ನಾಗಿ ಮಿಕ್ಸ್ ಆದ ಬಳಿಕ ಅದನ್ನು ಚಿಕ್ಕ ಡಬ್ಬದಲ್ಲಿ, ಇಲ್ಲವೇ ಪಾತ್ರೆಯಲ್ಲಿ ಜಿರಳೆ, ಹಲ್ಲಿ, ಇರುವೆ... ಇಂಥ ಜಾಗಗಳಲ್ಲಿ ಇಡಬೇಕು. ಪಾಪ್​ಕಾರ್ನ್​ ವಾಸನೆಗೆ ಇವು ಯಾವುದೂ ಹತ್ತಿರ ಸುಳಿಯುವುದಿಲ್ಲ.

Read more Photos on
click me!

Recommended Stories