ಯುರೋಪ್ ನಲ್ಲಿ ಗಿಳಿ ಜ್ವರಕ್ಕೆ 5 ಬಲಿ, ನಿಮಗೂ ಕಾಡಬಹುದು ಹುಷಾರಾಗಿರಿ!

Published : Mar 09, 2024, 03:22 PM IST

ಕೆಲದಿನಗಳಿಂದ ಯೂರೋಪ್ ನಲ್ಲಿ ಗಿಳಿ ಜ್ವರವು ತುಂಬಾ ಕೆಟ್ಟದಾಗಿ ಬಾಧಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಸ್ವತಃ ಈ ಬಗ್ಗೆ ಮಾಹಿತಿ ನೀಡಿದೆ. ಈ ರೋಗದಿಂದ ಐವರು ಸಾವನ್ನಪ್ಪಿದ ವರದಿಗಳಿವೆ. ಈ ರೋಗವು ಪಕ್ಷಿಗಳಿಂದ ಹರಡುತ್ತದೆ. ಗಿಳಿ ಜ್ವರ ಎಂದರೇನು ಮತ್ತು ಅದರ ಲಕ್ಷಣಗಳು, ಕಾರಣಗಳ ಬಗ್ಗೆ ತಿಳಿಯೋಣ.   

PREV
17
ಯುರೋಪ್ ನಲ್ಲಿ  ಗಿಳಿ ಜ್ವರಕ್ಕೆ 5 ಬಲಿ, ನಿಮಗೂ ಕಾಡಬಹುದು ಹುಷಾರಾಗಿರಿ!

ಕಳೆದ ಕೆಲವು ದಿನಗಳಲ್ಲಿ ಯುರೋಪಿನಲ್ಲಿ ಒಂದು ರೋಗ ಏಕಾಏಕಿ ಕಾಡಲು ಶುರು ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಸ್ವತಃ ಅನೇಕ ಯುರೋಪಿಯನ್ ದೇಶಗಳಲ್ಲಿ ಸೈಟೋಕೋಸಿಸ್ ಹೆಚ್ಚುತ್ತಿರುವ ಬಗ್ಗೆ ವರದಿ ಮಾಡಿದೆ. ಈ ರೋಗದ ಪ್ರಾರಂಭ 2023ರಲ್ಲಿ ಕಂಡುಬಂದಿತು, ಆದರೆ ಇತ್ತೀಚಿನ ದಿನಗಳಲ್ಲಿ ಈ ರೋಗ ಹೆಚ್ಚುತ್ತಿದೆ. ಮಾಹಿತಿ ಪ್ರಕಾರ, ಈ ರೋಗದಿಂದಾಗಿ ಇದುವರೆಗೆ 5 ಜನರು ಸಾವನ್ನಪ್ಪಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ತಡೆಗಟ್ಟುವಿಕೆಯಿಂದ ಚಿಕಿತ್ಸೆಯವರೆಗೆ, ಜೊತೆಗೆ ಈ ರೋಗದ ರೋಗಲಕ್ಷಣಗಳ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳುವುದು ಮುಖ್ಯ. 

27

ಸೈಟೋಕೋಸಿಸ್ ಎಂದರೇನು?
ಗಿಳಿ ಜ್ವರ(parrot fever) ಎಂದೂ ಕರೆಯಲ್ಪಡುವ ಸೈಟೋಕೋಸಿಸ್ ಕ್ಲಮೈಡಿಯಾ ಕುಟುಂಬದ ಬ್ಯಾಕ್ಟೀರಿಯಾದಿಂದ (bacteria)ಉಂಟಾಗುವ ಒಂದು ರೋಗವಾಗಿದೆ. ಹೆಸರೇ ಸೂಚಿಸುವಂತೆ, ಈ ರೋಗವು ಗಿಳಿಗಳಿಂದ ಮಾತ್ರವಲ್ಲ, ಅನೇಕ ಪಕ್ಷಿಗಳಿಂದ ಉಂಟಾಗುತ್ತದೆ. ಈ ರೋಗವು ವಿವಿಧ ಕಾಡು ಮತ್ತು ಸಾಕು ಪಕ್ಷಿಗಳು ಮತ್ತು ಕೋಳಿಗಳ ಮೂಲಕವೂ ಹರಡಬಹುದು.

37

ಗಿಳಿ ಜ್ವರದ ಲಕ್ಷಣಗಳು
ಗಿಳಿ ಜ್ವರದ ಲಕ್ಷಣಗಳು ಸಾಮಾನ್ಯವಾಗಿ ಸೋಂಕಿಗೆ ಒಳಗಾದ 5 ರಿಂದ 14 ದಿನಗಳ ನಂತರ ಪ್ರಾರಂಭವಾಗುತ್ತವೆ. ಉಸಿರಾಟದ ತೊಂದರೆ, ಎದೆ ನೋವು ಮತ್ತು ಬೆಳಕಿನ ಸೂಕ್ಷ್ಮತೆ ಇತರ ಕೆಲವು ಸಂಭಾವ್ಯ ರೋಗಲಕ್ಷಣಗಳಾಗಿವೆ.   ಅದರ ಇತರ ರೋಗಲಕ್ಷಣಗಳು ಈ ಕೆಳಗಿನಂತಿವೆ-
ಆಯಾಸ
ತಲೆನೋವು (headache)
ಆಲಸ್ಯ
ಒಣ ಕೆಮ್ಮು
ವಾಕರಿಕೆ ಮತ್ತು ವಾಂತಿ
ಸ್ನಾಯು ನೋವು
ಜ್ವರ ಮತ್ತು ಶೀತ

47

ಪಕ್ಷಿಗಳಲ್ಲಿ ರೋಗಲಕ್ಷಣಗಳು
ಈ ಬ್ಯಾಕ್ಟೀರಿಯಾದಿಂದ ಸೋಂಕಿಗೆ ಒಳಗಾದ ಪಕ್ಷಿಗಳು ಈ ಕೆಳಗಿನ ರೋಗಲಕ್ಷಣಗಳನ್ನು ಹೊಂದಿರಬಹುದು:
ನಿಧಾನ ಚಲನೆ
ತೂಕ ನಷ್ಟ (weight loss)
ಊದಿಕೊಂಡ ಕಣ್ಣುಗಳು
ಹಸಿವಾಗದಿರುವುದು
ಉಸಿರಾಟದ ತೊಂದರೆ
ಕಣ್ಣುಗಳು ಅಥವಾ ಮೂಗಿನಿಂದ ವಿಸರ್ಜನೆ

57

ಗಿಳಿ ಜ್ವರ ಹೇಗೆ ಹರಡುತ್ತದೆ?
ಸೋಂಕಿತ ಪಕ್ಷಿಗಳ ಸಂಪರ್ಕಕ್ಕೆ ಬರುವ ಜನರಿಗೆ ಈ ರೋಗ ಬರಹುದು. ರೋಗಲಕ್ಷಣಗಳೊಂದಿಗೆ ಅಥವಾ ಇಲ್ಲದೆ ಸೋಂಕಿತ ಪಕ್ಷಿಗಳು ಉಸಿರಾಟ ಅಥವಾ ವಿಸರ್ಜನೆ ಮೂಲಕ ಬ್ಯಾಕ್ಟೀರಿಯಾವನ್ನು ಹರಡಬಹುದು. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಸೋಂಕಿತ ಪಕ್ಷಿಗಳಿಂದ ಮಲದ ಸಣ್ಣ ಒಣ, ಧೂಳಿನ ಕಣಗಳು ಮತ್ತು ವಿಸರ್ಜನೆಗಳನ್ನು ಉಸಿರಾಡುವ ಮೂಲಕ ವ್ಯಕ್ತಿಯು ಸೋಂಕಿಗೆ ಒಳಗಾಗಬಹುದು. ಅಲ್ಲದೆ, ಸೋಂಕಿತ ಪಕ್ಷಿಯನ್ನು ಕಚ್ಚುವ ಅಥವಾ ಕೊಕ್ಕುವ ಮೂಲಕ ಬಾಯಿಯ ಸಂಪರ್ಕದಿಂದ ವ್ಯಕ್ತಿಯು ಸೋಂಕಿಗೆ ಒಳಗಾಗಬಹುದು. ಆದರೆ ಈ ಬ್ಯಾಕ್ಟೀರಿಯಾವು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡಲು ಸಾಧ್ಯವಿಲ್ಲ. ಇದಲ್ಲದೆ, ಚಿಕನ್ ತಯಾರಿಸುವುದರಿಂದ ಅಥವಾ ತಿನ್ನುವುದರಿಂದ ಬ್ಯಾಕ್ಟೀರಿಯಾ ಹರಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.

67

ಗಿಳಿ ಜ್ವರದ ಗಂಭೀರ ಪರಿಣಾಮಗಳು
ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ, ಇದು ನ್ಯುಮೋನಿಯಾ, ಹೃದಯ ಕವಾಟಗಳ ಉರಿಯೂತ (heartburn), ಹೆಪಟೈಟಿಸ್ ಅಥವಾ ನರವೈಜ್ಞಾನಿಕ ಸಮಸ್ಯೆಗಳು ಸೇರಿದಂತೆ ಕೆಲವು ಗಂಭೀರ ತೊಡಕುಗಳಿಗೆ ಕಾರಣವಾಗಬಹುದು. ಕೆಲವು ಅಪರೂಪದ ಮತ್ತು ಅತ್ಯಂತ ಗಂಭೀರ ಪ್ರಕರಣಗಳಲ್ಲಿ, ಇದು ಸಾವಿಗೆ ಕಾರಣವಾಗಬಹುದು.

77

ಗಿಳಿ ಜ್ವರ ಚಿಕಿತ್ಸೆ
ಗಿಳಿ ಜ್ವರ ಹೊಂದಿರುವ ವ್ಯಕ್ತಿಗಳಿಗೆ ರೋಗಲಕ್ಷಣಗಳನ್ನು ಸುಧಾರಿಸಲು ಸಾಮಾನ್ಯವಾಗಿ ಆಂಟಿ ಬಯೋಟಿಕ್ಸ್ ಮತ್ತು ಇತರ ಔಷಧಿಗಳನ್ನು ನೀಡಲಾಗುತ್ತದೆ. ಹಾಗಾಗಿ ನಿಮಗೂ ರೋಗಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ಔಷಧಿ ತೆಗೆದುಕೊಳ್ಳುವುದು ಉತ್ತಮ. 
 

Read more Photos on
click me!

Recommended Stories