ಪ್ರತಿ ವರ್ಷ ಅಕ್ಟೋಬರ್ 29 ರಂದು ವಿಶ್ವ ಪಾರ್ಶ್ವವಾಯು ದಿನವನ್ನು(World stroke day) ಆಚರಿಸಲಾಗುತ್ತೆ. ಮಾರಣಾಂತಿಕ ಪಾರ್ಶ್ವವಾಯುವಿನ ಬಗ್ಗೆ ಜಾಗೃತಿ ಮೂಡಿಸೋದು ಈ ದಿನವನ್ನು ಆಚರಿಸುವ ಉದ್ದೇಶವಾಗಿದೆ. ರಕ್ತನಾಳಗಳಲ್ಲಿನ ಅಡೆತಡೆಯಿಂದಾಗಿ ಹೃದಯವು ಸಾಕಷ್ಟು ಆಮ್ಲಜನಕವನ್ನು ಪಡೆಯದಿದ್ದಾಗ, ಮೆದುಳಿನ ನರಗಳಲ್ಲಿನ ಅಡೆತಡೆಯಿಂದಾಗಿ ಪಾರ್ಶ್ವವಾಯು ಸಂಭವಿಸಬಹುದು.
ತಿನ್ನುವುದು, ಕುಡಿಯುವುದು ಮತ್ತು ಜೀವನಶೈಲಿ ಬದಲಾವಣೆಗಳು ಪಾರ್ಶ್ವವಾಯುವನ್ನು ತಡೆಗಟ್ಟಬಹುದು. ಇದಲ್ಲದೆ, ಅಧಿಕ ರಕ್ತದೊತ್ತಡ(Blood pressure), ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಬೊಜ್ಜು ಮತ್ತು ಹೃದ್ರೋಗದಂತಹ ದೀರ್ಘಕಾಲದ ಕಾಯಿಲೆಗಳು ಪಾರ್ಶ್ವವಾಯುವಿಗೆ ಪ್ರಮುಖ ಕಾರಣಗಳಾಗಿವೆ, ಅವುಗಳನ್ನು ನಿಯಂತ್ರಣದಲ್ಲಿಡುವ ಮೂಲಕ ಪಾರ್ಶ್ವವಾಯುವನ್ನು ಕಡಿಮೆ ಮಾಡಬಹುದು.
ಪಾರ್ಶ್ವವಾಯುವಿಗೆ(Stroke) ಪ್ರಮುಖ ಕಾರಣವೆಂದರೆ ರಕ್ತನಾಳಗಳಲ್ಲಿ ತಡೆ, ಆದ್ದರಿಂದ ಅಪಧಮನಿ ಮತ್ತು ರಕ್ತನಾಳಗಳನ್ನು ಬಲವಾಗಿ ಮತ್ತು ಆರೋಗ್ಯಕರವಾಗಿಡೋದು ಮೆದುಳಿನಲ್ಲಿ ರಕ್ತ ಮತ್ತು ಆಮ್ಲಜನಕದ ಪೂರೈಕೆಯನ್ನು ಸುಧಾರಿಸಲು ಸಹಾಯ ಮಾಡುತ್ತೆ. ಇದಕ್ಕಾಗಿ, ಆಲ್ಕೋಹಾಲ್ ನಿಂದ ದೂರವಿರೋದು, ನಿಯಮಿತವಾಗಿ ವ್ಯಾಯಾಮ ಮಾಡೋದು, ಸ್ಮೋಕಿಂಗ್ ಮಾಡದಿರೋದು, ತೂಕ ಕಳೆದುಕೊಳ್ಳೋದು, ಒತ್ತಡದಿಂದ ದೂರವಿರೋದು ಮತ್ತು ಆರೋಗ್ಯಕರ ಆಹಾರ ಸೇವಿಸೋದು ಮುಂತಾದ ಕೆಲಸಗಳನ್ನು ಮಾಡಬಹುದು.
ಸೀಸನಲ್ ಹಣ್ಣು(Seasonal fruits) ಮತ್ತು ತರಕಾರಿಗಳ ಸೇವನೆ ಹೆಚ್ಚಿಸಿ
ಸೀಸನಲ್ ಹಣ್ಣು ಮತ್ತು ತರಕಾರಿಗಳನ್ನು ತಿನ್ನೋದು ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡುತ್ತೆ ಯಾಕಂದ್ರೆ ಅವುಗಳಲ್ಲಿ ಕೊಬ್ಬು ಮತ್ತು ಕ್ಯಾಲೋರಿಗಳು ಕಡಿಮೆಯಿರುತ್ತವೆ. ಹಣ್ಣು ಮತ್ತು ತರಕಾರಿಗಳು ಪೊಟ್ಯಾಸಿಯಮ್, ಫೈಬರ್, ಫೋಲೇಟ್, ವಿಟಮಿನ್ ಎ ಮತ್ತು ವಿಟಮಿನ್ ಸಿ ನಂತಹ ಅಗತ್ಯ ಪೋಷಕಾಂಶಗಳನ್ನು ಸಹ ಹೊಂದಿರುತ್ತವೆ.
ಪೊಟ್ಯಾಸಿಯಮ್ ಭರಿತ ವಸ್ತುಗಳಾದ ಆಲೂಗಡ್ಡೆ(Potato), ಬಾಳೆಹಣ್ಣು, ಟೊಮೆಟೊ, ಪ್ಲಮ್, ಕಲ್ಲಂಗಡಿ ಮತ್ತು ಸೋಯಾಬೀನ್ ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತೆ. ಇದು ಪಾರ್ಶ್ವವಾಯುವಿಗೆ ಪ್ರಮುಖ ಅಪಾಯದ ಅಂಶಗಳಲ್ಲಿ ಒಂದಾಗಿದೆ. ಪಾಲಕ್ ಸೊಪ್ಪಿನಂತಹ ಮೆಗ್ನೀಸಿಯಮ್ ಹೆಚ್ಚಿರುವ ಆಹಾರವು ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ.
ಮೀನು(Fish) ಸೇವಿಸಿ
ಮೀನು ಒಮೆಗಾ -3 ಕೊಬ್ಬಿನಾಮ್ಲಗಳ ಅತ್ಯುತ್ತಮ ಮೂಲವಾಗಿದೆ. ಈ ಪೋಷಕಾಂಶವು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತೆ. ಆದುದರಿಂದ ನಿಮ್ಮ ಆಹಾರದಲ್ಲಿ ನಿಯಮಿತವಾಗಿ ಒಮೆಗಾ -3 ಕೊಬ್ಬಿನಾಮ್ಲ ಹೊಂದಿರುವ ಸಮುದ್ರೆ ಆಹಾರಗಳನ್ನು ಸೇವಿಸೋದನ್ನು ರೂಢಿ ಮಾಡಿ.
ಸಂಪೂರ್ಣ ಧಾನ್ಯ
ಇವುಗಳಲ್ಲಿ ನಾರಿನಂಶ, ವಿಟಮಿನ್ ಬಿ(Vitamins B) (ಫೋಲೇಟ್ ಮತ್ತು ಥಯಾಮಿನ್ ಸೇರಿದಂತೆ), ಮೆಗ್ನೀಸಿಯಮ್ ಮತ್ತು ಕಬ್ಬಿಣಾಂಶ ಸಮೃದ್ಧವಾಗಿದೆ, ಇದು ಪಾರ್ಶ್ವವಾಯುವಿನ ಸಾಧ್ಯತೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ. ಆದ್ದರಿಂದ, ಸಂಪೂರ್ಣ ಧಾನ್ಯದ ರೊಟ್ಟಿ, ಓಟ್ ಮೀಲ್ ಮತ್ತು ಕಂದು ಅಕ್ಕಿಯನ್ನು ಆಯ್ಕೆ ಮಾಡೋದು ಒಳ್ಳೆಯದು. ಮೈದಾದಿಂದ ಮಾಡಿದ ರೊಟ್ಟಿಯ ಬದಲಿಗೆ ಇಡೀ ಧಾನ್ಯದ ರೊಟ್ಟಿ ಸೇವಿಸಿ.
ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳನ್ನು(Dairy products) ಸೇವಿಸಿ
ಕೊಬ್ಬು ರಹಿತ ಹಾಲು, ಮೊಸರು ಮತ್ತು ಚೀಸ್ ಟೈಪ್ 2 ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯುವಿನ ಕಡಿಮೆ ಅಪಾಯವನ್ನು ನಿರ್ವಹಿಸಲು ಸಹಾಯ ಮಾಡುತ್ತೆ. ಸಾಧ್ಯವಾದಷ್ಟು ಅಧಿಕ ಕೊಬ್ಬು ಹೊಂದಿರುವ ಆಹಾರ, ಡೈರಿ ಉತ್ಪನ್ನಗಳನ್ನು ಅವಾಯ್ಡ್ ಮಾಡಿ.
ಅಧಿಕ ಕೊಲೆಸ್ಟ್ರಾಲ್ ಇರುವ ಆಹಾರ ತಿನ್ನೋದನ್ನು ತಪ್ಪಿಸಿ
ಬರ್ಗರ್, ಚೀಸ್ ಮತ್ತು ಐಸ್ ಕ್ರೀಮ್ ನಂತಹ ಫಾಸ್ಟ್ ಫುಡ್ ಗಳು(Fast food) ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುತ್ತವೆ. ಇದಕ್ಕೆ ಕಾರಣವೆಂದರೆ ಕೊಲೆಸ್ಟ್ರಾಲ್ ನ ಪ್ರಮಾಣವು ಈ ವಸ್ತುಗಳಲ್ಲಿ ಕಂಡುಬರುತ್ತೆ. ಆದುದರಿಂದ ಇಂತಹ ಆಹಾರಗಳನ್ನು ಅವಾಯ್ಡ್ ಮಾಡಿ.
ದೈಹಿಕ ಚಟುವಟಿಕೆಯೂ(Exercise) ಮುಖ್ಯ
ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು, ಕೊಲೆಸ್ಟ್ರಾಲ್, ಒತ್ತಡ, ಪಾರ್ಶ್ವವಾಯುವಿನ ಅನೇಕ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡುವಲ್ಲಿ ವ್ಯಾಯಾಮವು ದೊಡ್ಡ ಪಾತ್ರ ವಹಿಸುತ್ತೆ. ವಾರದಲ್ಲಿ ಕನಿಷ್ಠ ನಾಲ್ಕು ಬಾರಿ ಇಪ್ಪತ್ತು ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕು. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತೆ. ಅಲ್ಲದೇ ಇದು ನಿಮ್ಮ ಹೃದಯವನ್ನು ಆರೋಗ್ಯಕರವಾಗಿರಿಸುತ್ತೆ.