ಎಲ್ಲಾ ಮಣ್ಣಿನ ಪಾತ್ರೆ ಆರೋಗ್ಯಕ್ಕೆ ಉತ್ತಮವಲ್ಲ, ಪತ್ತೆ ಹಚ್ಚುವುದು ಹೇಗೆ?

Published : Apr 05, 2026, 08:17 PM IST

ಎಲ್ಲಾ ಮಣ್ಣಿನ ಪಾತ್ರೆ ಆರೋಗ್ಯಕ್ಕೆ ಉತ್ತಮವಲ್ಲ, ಪತ್ತೆ ಹಚ್ಚುವುದು ಹೇಗೆ?, ಆರೋಗ್ಯಕ್ಕೆ ಒಳ್ಳೆಯದು ಎಂದು ಕಣ್ಮುಚ್ಚಿ ಮಣ್ಣಿನ ಪಾತ್ರೆ ಖರೀದಿ ಅಪಾಯಕ್ಕೆ ಆಹ್ವಾನ ನೀಡಿದಂತೆ. ಉತ್ತಮ ಪಾತ್ರೆ ಪಚ್ಚುವುದು ಹೇಗೆ?

PREV
16
ಆರೋಗ್ಯಕರ ಎಂದು ಕಣ್ಮುಚ್ಚಿ ಮಣ್ಣಿನ ಪಾತ್ರೆ ಖರೀದಿಸಬೇಡಿ

ನಾವು ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವಾಗ ಅದೇ ಆರೋಗ್ಯದ ಹೆಸರಿನಲ್ಲಿ ನಾವು ಮೋಸ ಹೋಗದಂತೆ ಕೂಡ ತುಂಬಾನೇ ಎಚ್ಚರಿಕೆವಹಿಸಬೇಕು. ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು ನಾವು ತಿನ್ನುವ ಅಥವಾ ನಾವು ಬಳಸುವ ವಸ್ತುಗಳು ನಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು, ಹಾಗಾಗಿ ಆ ನಾವು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂತ ಏನೇ ಮಾಡುವುದಾದರು ಸ್ವಲ್ಪ ಕ್ರಾಸ್ ಚೆಕ್‌ ಮಾಡಿದರೆ ಒಳ್ಳೆಯದು. ಕಾರಣ, ಈಗ ಮಣ್ಣಿನ ಪಾತ್ರೆ ಬಳಸುವ ಟ್ರೆಂಡ್ ಶುರುವಾಗಿದೆ, ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿದರೆ ಆರೋಗ್ಯಕ್ಕೆ ಅಂತೂ ತುಂಬಾನೆ ಒಳ್ಳೆಯದು, ನೋ ಡೌಟ್. ಆದರೆ ಎಲ್ಲಾ ಮಣ್ಣಿನ ಪಾತ್ರೆ ಆರೋಗ್ಯಕ್ಕೆ ಒಳ್ಳೆಯದಲ್ಲ

26
ಮಣ್ಣಿನ ವಾಟರ್ ಬಾಟಲ್ ಬಳಸುವಾಗ ಜಾಗ್ರತೆ

ತಾಮ್ರದ ಬಾಟಲ್ ಬಳಸುವ ಟ್ರೆಂಡ್ ಇತ್ತು, ಈಗ ಮಣ್ಣಿನ ಬಾಟಲ್‌ ಬಳಸುವ ಟ್ರೆಂಡ್ ಶುರುವಾಗಿದೆ, ಮಣ್ಣಿನ ಪಾತ್ರೆಯಲ್ಲಿ ನೀರು ಹಾಕಿ ಕುಡಿದರೆ ಒಳ್ಳೆಯದು ಅಂತ ಕುಡಿಯುತ್ತಿದ್ದಾರೆ, ಆದರೆ ಅಂಥ ಬಾಟಲ್ ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ, ನಿಮಗೆ ಒರಿಜಿನಲ್ ಕ್ಲೇ ಬಾಟಲ್ ಸಿಕ್ಕರೆ ಒಕೆ ಇಲ್ಲಾಂದ್ರೆ ಕೆಮಿಕಲ್ ಕೋಟಿಂಗ್ ಇರುವ ಬಾಟಲ್‌ಗಳು, ಸರಿಯಾಗಿ ಬೇಯಿಸಿರದ ಬಾಟಲ್‌ಗಳು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ, ಆದ್ದರಿಂದ ಪ್ರವಾಸ ಹೋದ ಕಡೆ ಮಣ್ಣಿನ ಬಾಟೆಲ್ ಕಂಡ್ರೆ ಚೆಕ್ ಮಾಡಿ ಖರೀದಿಸಬೇಡಿ.

36
ನೀರು ತುಂಬಿಡಲು ಮಣ್ಣಿನ ಮಡಿಕೆ

ಮಣ್ಣಿನ ಮಡಿಕೆಯಲ್ಲಿ ನೀರು ಹಾಕಿಟ್ಟರೆ ತುಂಬಾನೇ ಒಳ್ಳೆಯದು, ಇಂಥ ನೀರು ಕುಡಿಯುವುದರಿಂದ ಆರೋಗ್ಯ ವೃದ್ಧಿಸುತ್ತದೆ, ಅಲ್ಲದೆ ಬೇಸಿಗೆಯಲ್ಲಿ ನೀರು ತುಂಬಾನೇ ತಂಪಾಗಿರುತ್ತದೆ, ಕುಡಿಯಲು ಹಿತ ಅನಿಸುವುದು, ಆದ್ರೆ ಇಷ್ಟೆಲ್ಲಾ ಗುಣ ಸಿಗಲು ಅದನ್ನು ಜೇಡಿ ಮಣ್ಣಿನಿಂದ ಮಾಡಿರಬೇಕು, ಈಗ ಮಣ್ಣಿನ ಮಡಿಕೆ ಅಂತ ಕೆಮಿಕಲ್ ಮಿಶ್ರಿತ ಮಡಿಕೆಗಳು ಮಾರುಕಟ್ಟೆಯಲ್ಲಿದೆ, ಅಂಥ ಪಾತ್ರೆಯಲ್ಲಿ ನೀರು ಹಾಕಿ ಕುಡಿಯುವುದು ಒಳ್ಳೆಯದಲ್ಲ.

46
ಉತ್ತಮವಲ್ಲದ ಮಣ್ಣಿನ ಪಾತ್ರೆ ಪತ್ತೆ ಹಚ್ಚುವುದು ಹೇಗೆ

ಮಣ್ಣಿನ ಮಡಿಕೆ ತುಂಬಾ ಕೆಂಪಾಗಿದ್ದರೆ: ಕೆಲವೊಂದು ಮಣ್ಣಿನ ಮಡಿಕೆಗಳು ನೋಡಲು ತುಂಬಾನೇ ಆಕರ್‍ಷಕವಾಗಿರುತ್ತದೆ, ಒರಿಜಿನಲ್‌ ಮಣ್ಣಿನ ಪಾತ್ರೆಗಳು ಅಷ್ಟೊಂದು ಕಲರ್‍‌ಫುಲ್‌ ಇರಲ್ಲ, ಜೇಡಿಮಣ್ಣು ಬಳಸಿ ಮಾಡುವ ಪಾತ್ರೆಗಳು ಸ್ವಲ್ಪ ಡಲ್ ಕಲರ್‍‌ನಲ್ಲಿರುತ್ತದೆ.

ಕಪ್ಪಗೆ ಇರುವ ಮಣ್ಣಿನ ಪಾತ್ರೆ ಬಳಸಬೇಡಿ

ಮಣ್ಣಿನ ಪಾತ್ರೆ ತಂದು ಅದಕ್ಕೆ ತೆಂಗಿನಕಾಯಿ ಚಿಪ್ಪು ಹಾಕಿ ಬೆಂಕ ಹಚ್ಚಿ ಕಪ್ಪು ಮಾಡುವುದು ಬೇರೆ, ಆದರೆ ನೀವು ಖರೀದಿಸುವಾಗಲೇ ಕಪ್ಪು ಬಣ್ಣದಲ್ಲಿದ್ದರೆ ಅದನ್ನು ಖರೀದಿಸಲು ಹೋಗಬೇಡಿ, ಏಕೆಂದರೆ ಆ ಪಾತ್ರೆ ಕಪ್ಪು ಬಣ್ಣಕ್ಕೆ ಬರಲು ಅವರು ಕೆಮಿಕಲ್ ಬಳಸಿರುತ್ತಾರೆ, ಹಾಗಾಗಿ ಅಂಥ ಪಾತ್ರೆ ಬಳಸಬೇಡಿ.

56
ಇನ್ನು ಜೇಡಿಮಣ್ಣಿನ ಪಾತ್ರೆಗಳಿಗೆ ಈ ಗುಣವಿರುತ್ತದೆ:

ನೀವು ಜೇಡಿ ಮಣ್ಣಿನ ಮಡಿಕೆ ತಂದ ಮೇಲೆ ಅದರಲ್ಲಿ ಅಡುಗೆ ಮಾಡುವ ಮುನ್ನ ರೆಡಿ ಮಾಡಬೇಕು. ಇಲ್ಲದಿದ್ದರೆ ಅಂಥ ಪಾತ್ರೆಯಲ್ಲಿ ಅಡುಗೆ ಮಾಡಿದರೆ ಒಂಥರಾ ಸ್ಮೆಲ್ ಬರುತ್ತದೆ. ಹಾಗಾಗಿ ಮಣ್ಣಿನ ಪಾತ್ರೆ ತಂದಾಗ ಅದರಲ್ಲಿ ಗಂಜಿ ನೀರು ಹಾಕಿ ಚೆನ್ನಾಗಿ ಕುದಿಸಬೇಕು. ಹಾಗೆ ಮಾಡಿದರೆ ಮಣ್ಣಿನ ವಾಸನೆ ದೂರಾಗುತ್ತದೆ.

66
ಯಾವ ಮಣ್ಣಿನ ಪಾತ್ರೆ ಖರೀದಿ ಉತ್ತಮ

ನಂತರ ಮಣ್ಣಿನ ಪಾತ್ರೆಯಲ್ಲಿ ನೀರು ಹಾಕಿಟ್ಟರೆ ಪಾತ್ರೆಯ ಸುತ್ತ ಬೆವರು ಬಂದಂತೆ ಇರುತ್ತದೆ, ಅದು ಜೇಡಿ ಮಣ್ಣಿನ ವಿಶೇಷತೆ, ಇಲ್ಲದಿದ್ದರೆ ಅದು ಶುದ್ಧ ಜೇಡಿ ಮಣ್ಣಿನ ಪಾತ್ರೆಯಲ್ಲ ಎಂದು ಹೇಳಬಹುದು. ಹಾಗಾಗಿ ನೀವು ಮಣ್ಣಿನ ಪಾತ್ರೆ ಬಳಸುವುದಾದರೆ ಆ ಪಾತ್ರೆಯನ್ನು ಜೇಡಿ ಮಣ್ಣಿನಿಂದ ಮಾಡಿದ್ದಾದರೆ ಮಾತ್ರ ಖರೀದಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories