ಗಾಂಧಿ ಜಯಂತಿಗೆ ಇನ್ನೇನು ಕೆಲವೇ ದಿನಗಳಿವೆ. ಗಾಂಧಿಜಿಯವರು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ಯಾವ ರೀತಿಯ ಆಹಾರ ಕ್ರಮ ಅನುಸರಿಸುತ್ತಿದ್ದರು ಅನ್ನೋದನ್ನು ತಿಳಿಯೋಣ.
ದಾಲ್ ಮತ್ತು ಅನ್ನ (Dal and Chawal): ಗಾಂಧೀಜಿ ಸಾತ್ವಿಕ ಆಹಾರದಲ್ಲಿ ನಂಬಿಕೆ ಇಟ್ಟಿದ್ದರು ಎಂದು ನಂಬಲಾಗಿದೆ. ಅವರ ನೆಚ್ಚಿನ ಆಹಾರ ಪದಾರ್ಥಗಳಲ್ಲಿ ಬೇಳೆಕಾಳುಗಳು ಮತ್ತು ಅನ್ನ ಸೇರಿವೆ. ಈ ಆಹಾರವು ಶತಮಾನಗಳಿಂದ ಭಾರತೀಯ ಆಹಾರದ ಪ್ರಮುಖ ಭಾಗವಾಗಿದೆ. ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಗಳಿಂದ ಸಮೃದ್ಧವಾಗಿರುವ ದಾಲ್ ರೈಸ್ ಅನ್ನು ಗಾಂಧೀಜಿ ಇಷ್ಟಪಟ್ಟರು.