ಋತುಚಕ್ರ ಮತ್ತು ಗರ್ಭಧಾರಣೆಗೆ ಸಂಬಂಧಿಸಿದ ಅನೇಕ ಮಿಥ್ಯೆಗಳಿವೆ, ಅವುಗಳನ್ನು ನಾವು ನಿಜವೆಂದು ನಂಬುತ್ತೇವೆ. ವಿಶೇಷವಾಗಿ, ಸಂಪೂರ್ಣ ಮಾಹಿತಿ ಕೊರತೆಯಿಂದಾಗಿ ಮಹಿಳೆಯರು ಹೆಚ್ಚಾಗಿ ತಮ್ಮ ಆರೋಗ್ಯವನ್ನು ಹಾಳು ಮಾಡುತ್ತಾರೆ. ಋತುಚಕ್ರದ ಸಮಯದಲ್ಲಿ ಅಥವಾ ಅದರ ಕೆಲವು ದಿನಗಳ ನಂತರ (after periods) ನೀವು ದೈಹಿಕ ಸಂಬಂಧವನ್ನು ಹೊಂದಿದ್ದರೆ, ಗರ್ಭಿಣಿಯಾಗುವ ಅಥವಾ ಇಲ್ಲದಿರುವ ಸಾಧ್ಯತೆಗಳಿವೆ, ಅದಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ನೀವು ಯಾರ್ಯಾರಿಂದಲೋ ಕೇಳಿರುತ್ತೀರಿ. ಆದರೆ ಅವೆಷ್ಟು ನಿಜಾ ಅನ್ನೋದು ಮಾತ್ರ ಗೊತ್ತಿರೋದಿಲ್ಲ..
ಋತುಚಕ್ರದ ಮುಂದಿನ ಕೆಲವು ದಿನಗಳು ಸುರಕ್ಷಿತವೆಂದು ಸಾಮಾನ್ಯವಾಗಿ ನಂಬಲಾಗಿದೆ ಮತ್ತು ಈ ಸಮಯದಲ್ಲಿ ರಕ್ಷಣೆಯಿಲ್ಲದೆ ದೈಹಿಕ ಸಂಬಂಧ (physical relationship) ಬೆಳೆಸೋದರಿಂದ ಗರ್ಭಧಾರಣೆ ಆಗುವ ಸಾಧ್ಯತೆಗಳಿಲ್ಲ ಎನ್ನಲಾಗುತ್ತೆ. ಆದರೆ ತಜ್ಞರಿಗೆ ಇದರ ಬಗ್ಗೆ ನಿಜವಾಗಿಯೂ ತಿಳಿದಿದೆಯೇ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ನೋಡೋಣ.
ಋತುಚಕ್ರದ ಎಷ್ಟು ದಿನದವರೆಗೆ ದೈಹಿಕ ಸಂಬಂಧ ಹೋಂದೋದು ಸೇಫ್?
ಋತುಚಕ್ರದ ನಂತರ ಎಷ್ಟು ದಿನಗಳ ನಂತರ ದೈಹಿಕ ಸಂಬಂಧವನ್ನು ಹೊಂದುವ ಮೂಲಕ ಗರ್ಭಿಣಿಯಾಗುವ ಸಾಧ್ಯತೆಯಿಲ್ಲ ಎಂದು ನಿರ್ಧರಿಸುವುದು ತುಂಬಾ ಕಷ್ಟ. ಪ್ರತಿ ಮಹಿಳೆಗೆ ಋತುಚಕ್ರವು ಪರಸ್ಪರ ಭಿನ್ನವಾಗಿರುತ್ತದೆ. ಆದ್ದರಿಂದ ವೈದ್ಯಕೀಯವಾಗಿ ಒಂದು ಸಮಯವನ್ನು ಹೇಳಲು ಸಾಧ್ಯವಿಲ್ಲ.
ಸಾಮಾನ್ಯವಾಗಿ, ಅಂಡೋತ್ಪತ್ತಿ (fertility)ಸಂಭವಿಸಿದಾಗ ಮಹಿಳೆಯರ ಫರ್ಟಿಲಿಟಿ ವಿಂಡೊ ಋತುಚಕ್ರದ ಮಧ್ಯದಲ್ಲಿರುತ್ತವೆ. ನೀವು ಸುಮಾರು 28 ದಿನಗಳಲ್ಲಿ ಋತುಚಕ್ರವನ್ನು ಪಡೆದರೆ, ಅದು ಸುಮಾರು 14 ದಿನಗಳ ನಂತರ ಓವ್ಯುಲೇಶನ್ (Ovulation) ಆಗಿರುತ್ತೆ. ಅಂದರೆ ಪಿರಿಯಡ್ಸ್ ಆಗಿ ಒಂದು ವಾರದವರೆಗೆ ಸುರಕ್ಷಿತವಾಗಿ, ಗರ್ಭಧಾರಣೆಯ ಅಪಾಯ ಇಲ್ಲದೆ ಸೆಕ್ಸ್ ಮಾಡಬಹುದು ಎನ್ನಲಾಗಿದೆ.
ಗರ್ಭನಿರೋಧಕವಿಲ್ಲದೆ ಗರ್ಭಧಾರಣೆಯ ಅಪಾಯವನ್ನು ಕಡಿಮೆ ಮಾಡಲು, ಋತುಚಕ್ರ ಮುಗಿದ ನಂತರ ಕೆಲವು ದಿನಗಳವರೆಗೆ ಕಾಯುವುದು ಸೂಕ್ತ. ಏಕೆಂದರೆ ವೀರ್ಯವು (Sperms) ಸ್ತ್ರೀ ಸಂತಾನೋತ್ಪತ್ತಿ ನಾಳದಲ್ಲಿ 5 ದಿನಗಳವರೆಗೆ ಬದುಕಬಲ್ಲದು. ಆದರೆ ಪಿರಿಯಡ್ಸ್ ಒಬ್ಬೊಬ್ಬರಿಗೆ ಒಂದೊಂದು ರೀತಿ ಆಗಿರೋದರಿಂದ ಅದರ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ.
ಫ್ಯಾಮಿಲಿ ಪ್ಲ್ಯಾನಿಂಗ್ ಮಾಡುತ್ತಿದ್ರೆ ತಜ್ಞರ ಸಲಹೆ ಪಡೆಯಿರಿ
ನೀವು ಜನನ ನಿಯಂತ್ರಣದ ವಿಶ್ವಾಸಾರ್ಹ ವಿಧಾನವನ್ನು ತಿಳಿದುಕೊಳ್ಳಲು ಬಯಸಿದರೆ, ನೀವು ಆರೋಗ್ಯ ತಜ್ಞರನ್ನು ಸಂಪರ್ಕಿಸಬೇಕು, ಅವರು ನಿಮಗೆ ಸರಿಯಾದ ಆಯ್ಕೆಯನ್ನು ಹೇಳಬಹುದು. ಹಾರ್ಮೋನುಗಳ ಗರ್ಭನಿರೋಧಕ (contraceptives) ವಿಧಾನವು ಜನನ ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿದೆ. ಕುಟುಂಬ ಯೋಜನೆಗಾಗಿ ನಿಮ್ಮ ದೇಹದ ಲಯವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂಬುದನ್ನು ನೆನಪಿಡಿ ಮತ್ತು ಅದಕ್ಕೆ ಅನುಗುಣವಾಗಿ ತಜ್ಞರು ನಿಮಗೆ ಸರಿಯಾದ ಆಯ್ಕೆಯನ್ನು ಹೇಳಬಹುದು.