ಮಕ್ಕಳಿಗೆ ಹಾಲಿನ ಪೌಡರ್ ತಿನ್ನಿಸಬಹುದಾ? ಯಾವಾಗ?

Published : Mar 15, 2023, 04:39 PM IST

ನವಜಾತ ಶಿಶುಗಳಿಗೆ ತಾಯಿಯ ಹಾಲು (Breast Milk) ಅತ್ಯುತ್ತಮ ಆಹಾರ. 6 ತಿಂಗಳ ಕಾಲ ತಾಯಿಯ ಹಾಲನ್ನು ಮಾತ್ರ ಕುಡಿಯುವ ಮಕ್ಕಳಿಗೆ ರೋಗಗಳ ಅಪಾಯ ತುಂಬಾ ಕಡಿಮೆ ಎಂದು ಹೇಳಲಾಗುತ್ತೆ. ಆದರೆ, ಇತ್ತೀಚಿನ ದಿನಗಳಲ್ಲಿ ಜೀವನಶೈಲಿ, ಸರಿಯಾದ ಆಹಾರ ವಿಧಾನದ ಕೊರತೆ ಮತ್ತು ಉದ್ಯೋಗಸ್ಥ ಮಹಿಳೆಯರು (Working Women) ಶಿಶುಗಳಿಗೆ ಹಾಲುಣಿಸೋದು ಕಷ್ಟಕರ. ಹಾಗಾಗಿ ಮಗುವಿಗೆ ಹಾಲಿನ ಪೌಡರ್ ನೀಡಲಾಗುತ್ತೆ.  

PREV
110
ಮಕ್ಕಳಿಗೆ ಹಾಲಿನ ಪೌಡರ್ ತಿನ್ನಿಸಬಹುದಾ? ಯಾವಾಗ?

ಶಿಶುಗಳುಗೆ ಹಾಲುಣಿಸುವ ಬದಲು ಪೌಡರ್ ಹಾಲನ್ನು ನೀಡಲಾಗುತ್ತೆ. ಶಿಶುಗಳಿಗೆ ಹಾಲಿನ ಪೌಡರ್ ನೀಡುವ ಮಹಿಳೆಯರಿಗೆ ಕೆಲವು ಪ್ರಶ್ನೆ ಕಾಡುತ್ತೆ, ಅದನ್ನು ಮಗುವಿಗೆ ನೀಡೋದು ಸುರಕ್ಷಿತವೇ? ಹಾಲಿನ ಪೌಡರ್(Milk powder) ನೀಡೋದರಿಂದ ಮಗುವಿನ ಆರೋಗ್ಯಕ್ಕೆ ಏನಾದರೂ ಹಾನಿಯಾಗಬಹುದೇ? ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ಮುಂದೆ ಓದಿ. 

210

ನಿಮ್ಮ ಮಗುವಿಗೆ ಹಾಲಿನ ಪುಡಿ ನೀಡೋದು ಸರಿಯೇ?
6 ತಿಂಗಳವರೆಗಿನ ಶಿಶುಗಳಿಗೆ ಎದೆಹಾಲನ್ನು ಮಾತ್ರ ನೀಡಬೇಕು ಎಂದು ಡಾಕ್ಟರ್ ಹೇಳುತ್ತಾರೆ. ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯನ್ನು(Physical development) ಅಭಿವೃದ್ಧಿಪಡಿಸಲು ತಾಯಿಯ ಹಾಲು ಸರಿಯಾದ ಮಾರ್ಗವಾಗಿದೆ. ಆದರೆ, ಕೆಲವು ಸಂದರ್ಭಗಳಲ್ಲಿ, ಮಹಿಳೆಯ ಎದೆಯಲ್ಲಿ ಹಾಲು ಸರಿಯಾಗಿ ಪ್ರೊಡ್ಯೂಸ್ ಆಗದಿದ್ದರೆ, ಆಗ ಹಾಲಿನ ಪುಡಿಯನ್ನು ನೀಡಬಹುದು. ವೈದ್ಯರ ಸಲಹೆಯ ನಂತರ 6 ತಿಂಗಳಿಗಿಂತ ಕಡಿಮೆ ವಯಸ್ಸಿನ ಮಗುವಿಗೆ ಹಾಲಿನ ಪುಡಿ ನೀಡಿ. 

310

ಶಿಶುಗಳಿಗೆ ಹಾಲಿನ ಪುಡಿ ನೀಡುವ ಅನಾನುಕೂಲಗಳು
ಮಗುವಿಗೆ ಹಾಲಿನ ಪುಡಿ ನೀಡಿದ್ರೆ, ಅದು ಮಗುವಿನ ಆರೋಗ್ಯಕ್ಕೆ ಅನೇಕ ರೀತಿಯ ಹಾನಿಯನ್ನುಂಟು ಮಾಡುತ್ತೆ ಎಂದು ತಜ್ಞರು ಹೇಳುತ್ತಾರೆ. ಇದರಿಂದ ಯಾವೆಲ್ಲಾ ಸಮಸ್ಯೆ(Problems) ಉಂಟಾಗುತ್ತದೆ ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ.

410

ಆ್ಯಂಟಿ ಬಾಡಿಯ(Anty body) ಕೊರತೆ
ತಾಯಿ ಹಾಲನ್ನು ಕುಡಿಯುವ ಮಕ್ಕಳು ತಮ್ಮ ದೇಹದಲ್ಲಿ ಆ್ಯಂಟಿ ಬಾಡಿಯನ್ನು ಚೆನ್ನಾಗಿ ಅಭಿವೃದ್ಧಿಪಡಿಸುತ್ತಾರೆ. ಆದರೆ, ಹಾಲಿನ ಪುಡಿ ಕುಡಿಯುವ ಮಕ್ಕಳಲ್ಲಿ ಆ್ಯಂಟಿ ಬಾಡಿಯ ಕೊರತೆ ಕಂಡುಬರುತ್ತೆ. ಇದರಿಂದ ಅನೇಕ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. 

510

ಆ್ಯಂಟಿ ಬಾಡಿಯ ಕೊರತೆಯಿಂದಾಗಿ, ಮಗುವಿನ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತೆ, ಇದರಿಂದಾಗಿ ಮಗು ಮತ್ತೆ ಮತ್ತೆ ಅನಾರೋಗ್ಯಕ್ಕೆ ಒಳಗಾಗುತ್ತೆ . ಆ್ಯಂಟಿ ಬಾಡಿ ಕಡಿಮೆ ಅಥವಾ ದುರ್ಬಲವಾಗಿರುವ ಮಕ್ಕಳಲ್ಲಿ ಶೀತ (Cold), ಕೆಮ್ಮು, ಮತ್ತು ಜೀರ್ಣಕಾರಿ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳುತ್ತಾರೆ. 

610

ಕಿಬ್ಬೊಟ್ಟೆ ನೋವು ಮತ್ತು ಅತಿಸಾರ
ಹಾಲಿನ ಪೌಡರ್ ಅನೇಕ ರೀತಿಯ ಕೆಮಿಕಲ್ ಪ್ರೋಸೆಸ್‌ನಿಂದ ತಯಾರಿಸಲಾಗುತ್ತೆ, ಇದರಿಂದಾಗಿ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತೆ. ಸಣ್ಣ ಮಗುವಿನ ಜೀರ್ಣಾಂಗ ವ್ಯವಸ್ಥೆ ತುಂಬಾ ದುರ್ಬಲವಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಹಾಗಾಗಿ, ಅವರಿಗೆ ಹಾಲಿನ ಪುಡಿ ನೀಡಿದರೆ, ಅದು ಅತಿಸಾರ, ಹೊಟ್ಟೆ ನೋವು(Stomach pain) ಮತ್ತು ವಾಂತಿಗೆ ಕಾರಣವಾಗಬಹುದು. 

710

ಪ್ರೊಸೆಸಿಂಗ್ನಿಂದಾಗಿ, ಹಾಲಿನ ಪುಡಿ ಜೀರ್ಣಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತೆ. ಅನೇಕ ಬಾರಿ ಚಿಕ್ಕ ಮಕ್ಕಳು ಹಾಲು ಕುಡಿದ ತಕ್ಷಣ ವಾಂತಿ (Vomit) ಮಾಡುತ್ತಾರೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ, ಇದು ಹಾಲಿನ ಪುಡಿಯನ್ನು ಜೀರ್ಣಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ ಎಂಬುದರ ಸಂಕೇತವಾಗಿದೆ. ಆದುದರಿಂದ ಸಾಧ್ಯವಾದಷ್ಟು ಅದನ್ನು ಅವಾಯ್ಡ್ ಮಾಡಿ. 

810

ದೈಹಿಕವಾಗಿ ದುರ್ಬಲ
6 ತಿಂಗಳ ಶಿಶುಗಳಿಗೆ ಹಾಲಿನ ಪೌಡರ್ ನೀಡಿದರೆ, ಸಾಮಾನ್ಯ ಮಗುವಿಗೆ ಹೋಲಿಸಿದರೆ ಅವರು ದೈಹಿಕವಾಗಿ ದುರ್ಬಲರಾಗಬಹುದು. ಅಂತಹ ಶಿಶುಗಳ ತೂಕ(Weight), ಉದ್ದವೂ ಸರಾಸರಿಗಿಂತ ಕಡಿಮೆ ಇರಬಹುದು.ಇದರಿಂದ ಮಗುವಿಗೆ ಅನೇಕ ಸಮಸ್ಯೆಗಳು ಕಾಡುತ್ತವೆ. 

910

ಹಾಲಿನ ಪುಡಿ ಕುಡಿಯುವ ಮಕ್ಕಳ ದೇಹದಲ್ಲಿ ಆಂಟಿ ಬಾಡಿ ಕಡಿಮೆ ಇರುತ್ತವೆ, ಇದರಿಂದಾಗಿ ಅವರು ಮತ್ತೆ ಮತ್ತೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂದು ವೈದ್ಯರು ಹೇಳುತ್ತಾರೆ. ತುಂಬಾ ಅನಾರೋಗ್ಯದಿಂದಿರುವುದು ಮಗುವಿನ ಮಾನಸಿಕ(Mental) ಮತ್ತು ದೈಹಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತೆ. 

1010

ಮಕ್ಕಳಿಗೆ ಹಾಲಿನ ಪುಡಿ ನೀಡುವಾಗ ಈ ಮುನ್ನೆಚ್ಚರಿಕೆಗಳನ್ನು ಗಮನದಲ್ಲಿಡಿ
6 ತಿಂಗಳ ಮೊದಲು ಮಗುವಿಗೆ ಹಾಲಿನ ಪುಡಿ ತಪ್ಪಿಸಬೇಕು ಎಂದು ವೈದ್ಯರು ಹೇಳುತ್ತಾರೆ. ಯಾವುದೇ ಕಾರಣಕ್ಕಾಗಿ, 6 ತಿಂಗಳಿಗಿಂತ ಕಡಿಮೆ ವಯಸ್ಸಿನ ಮಗುವಿಗೆ ಹಾಲಿನ ಪುಡಿ ನೀಡಬೇಕಾದರೆ, ಮೊದಲು ಅದರ ಬಗ್ಗೆ ವೈದ್ಯರೊಂದಿಗೆ ಮಾತನಾಡಿ. ಹಾಲಿನ ಪುಡಿಗಿಂತ ಹಸು(Cow milk) ಅಥವಾ ಮೇಕೆ ಹಾಲು ಚಿಕ್ಕ ಮಕ್ಕಳಿಗೆ ಹೆಚ್ಚು ಪ್ರಯೋಜನಕಾರಿ ಎಂದು ವೈದ್ಯರು ಹೇಳುತ್ತಾರೆ.

click me!

Recommended Stories